ಫ್ಯಾಕ್ಟ್‌ಚೆಕ್: ದೆವ್ವ ನೋಡಿ ಮೂರ್ಛೆ ಎಂದು ಅನಿಮೇಟೆಡ್ ವಿಡಿಯೋ ಹಂಚಿಕೆ

ಭೂತವೊಂದು (ದೆವ್ವ) ಗಾಳಿಯಲ್ಲಿ ತೇಲುತ್ತಾ ಬಂದು ಕೆಟ್ಟು ನಿಂತಿರುವ ಹಳೆಯ ಟ್ರಕ್‌ವೊಂದರ ಮೇಲೆ ಹಾರಿ ಬಂದು ಕುಳಿತುಕೊಳ್ಳುತ್ತಿದೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ವೈರಲ್ ಆಗಿದೆ. ಮೀರತ್‌ನ ಸ್ಮಶಾನದ ಬಳಿಯ ಕಾಲೋನಿ ಸಮೀಪ ಈ ಘಟನೆ ನಡೆದಿದೆ ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ ಮೂರ್ಛೆ ಹೋಗಿದ್ದು , ಐಸಿಯುಗೆ ದಾಖಲಿಸಲಾಗಿದೆ ಎಂದು ಪ್ರತಿಪಾದಿ ಪೋಸ್ಟ್‌ಅನ್ನು ಶೇರ್ ಮಾಡಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಮಧ್ಯರಾತ್ರಿಯಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಸೆರೆಯಾದ ದೃಶ್ಯಗಳು ಭಯ ಹುಟ್ಟಿಸುವಂತಿವೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಮೀರತ್‌ನಲ್ಲಿ ಯುವಕನೊಬ್ಬ ಭೂತದ ವೀಡಿಯೋವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ.
ಮೀರತ್‌ನ ಕಾಸಂಪುರ್ ಕಾಲೋನಿಯ ಗೇಟ್ ಬಳಿ ನಿರ್ಮಿಸಲಾದ ಸ್ಮಶಾನದ ಹತ್ತಿರ ನಡೆದ ಘಟನ ಎಂದು ಪೋಸ್ಟ್‌ನಲ್ಲಿ ಹೇಳಲಾಗುತ್ತಿದೆ.

ಈ ವೀಡಿಯೋ ಭಾರತದ ಹೊರಗೂ ಸದ್ದು ಮಾಡುತ್ತಿದೆ. ಭೂತ-ದೃಷ್ಟಿಯ ಬಗ್ಗೆ ಪಾಕಿಸ್ತಾನಿ ಸುದ್ದಿ ವಾಹಿನಿಯು ಫೋಟೋಗಳೊಂದಿಗೆ  “ಬ್ರೇಕಿಂಗ್ ನ್ಯೂಸ್: ಕರಾಚಿಯ ಕಿಡ್ನಿ ಮಿಲ್ ಪಾರ್ಕ್‌ನಲ್ಲಿ ಭಯದ ಛಾಯೆಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿವೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಭೂತದ ವೀಡಿಯೊವನ್ನು ಬೇರೆ ಬೇರೆ ಸ್ಥಳಗಳ ಹೆಸರಿನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಬಿಹಾರದ ಸ್ಮಶಾನದ ಬಳಿ ಚಿತ್ರೀಕರಿಸಲಾಗಿದೆ ಎಂದು ಫೇಸ್‌ಬುಕ್ ಬಳಕೆದಾರರು ಹೇಳಿದ್ದಾರೆ. ಇನ್ನು ಕೆಲವರು ಇದು ಮೀರತ್‌ನಿಂದ ಬಂದಿದ್ದು ಎಂದಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಕಂಡುಬಂದಿರುವ ದೃಶ್ಯಾವಳಿಗಳು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 24 ರಂದು VFX ಟ್ಯುಟೋರಿಯಲ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಲಭ್ಯವಾಗಿದೆ.  “ಹಾರುವ ಮಾಟಗಾತಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿನಿಮಾ 4ಡಿ ಎಫೆಕ್ಟ್ಸ್‌ ನಲ್ಲಿ ರಚಿಸಲಾಗಿದೆ” ಎಂದು ವಿಡಿಯೋ ವಿವರಣೆಯಲ್ಲಿ ಬರೆಯಲಾಗಿದೆ. ಈ ಟ್ಯುಟೋರಿಯಲ್ ಅನ್ನು ಜಾಂಬಿಯಾ ಮೂಲದ ವಿಷುಯಲ್ ಎಫೆಕ್ಟ್ ಕಲಾವಿದ ಜೋಸೆಫ್ ನ್ಜೋವು ಅವರು ಇದನ್ನು ವಿನ್ಯಾಸಗೊಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ  ಪ್ರತಿಪಾದಿಸಿದಂತೆ ನೈಜವಾಗಿ ನಡೆದ ಘಟನೆ ಅಲ್ಲ ಬದಲಿಗೆ ವಿಡಿಯೋಗಳನ್ನು ಭಿನ್ನ ಭಿನ್ನ ಎಫೆಕ್ಟ್‌ಗಳನ್ನು ಬಳಸಿ ಹೇಗೆ ರಚಿಸಬಹುದು ಎಂದು ತಿಳೀಸಿಕೊಡುವ ಉದ್ದೇಶಕ್ಕೆ ಕಲಾವಿದ ಜೋಸೆಫ್ ನ್ಜೋವು ಎಂಬುವವರು ರಚಿಸಿದ ವಿಡಿಯೋ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವೈರಲ್ ವೀಡಿಯೊವನ್ನು ಹೇಗೆ ರಚಿಸಲಾಗಿದೆ ಎಂಬುದನ್ನು ವಿವರಿಸುವ ನ್ಜೋವು, ಈ ವಿಡಿಯೋವನ್ನು ಮೋಜಿಗಾಗಿ ಮಾಡಲಾಗಿದೆ ಎಂದು ವೀಡಿಯೊದ ಆರಂಭದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ನೈಜೀರಿಯಾದಲ್ಲಿ ಇದು ವೈರಲ್ ಆಗಿದ್ದು, ಜನರು ಇದನ್ನು ನೈಜ ಘಟನೆ ಎಂದು ತಪ್ಪಾಗಿ ಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಂತರ ನ್ಜೋವು ಅವರು ದೆವ್ವದ ರಚನೆಯನ್ನು ಸೇರಿಸುವ ಮೊದಲು ಚಿತ್ರೀಕರಿಸಿದ ಮೂಲ ಕ್ಲಿಪ್ ಅನ್ನು ತೋರಿಸಿದ್ದು. ಕ್ಲಿಪ್ ಅನ್ನು  ಸೂರ್ಯ ಮುಳುಗುವ ಸಂದರ್ಭದಲ್ಲಿ ಚಿತ್ರಿಕರಿಸಿ,  3D ಕಲಾವಿದರು ಬಳಸುವ ಸಾಫ್ಟ್‌ವೇರ್ ಮಾರ್ವೆಲಸ್ ಡಿಸೈನರ್ ಬಳಸಿ ನಂತರ ಎಡಿಟ್ ಮಾಡಲಾಗಿದೆ. ಕಚ್ಚಾ ಕ್ಲಿಪ್ ಮತ್ತು ವೈರಲ್ ವೀಡಿಯೊದ ಹೋಲಿಕೆಯನ್ನು ಕೆಳಗೆ ನೋಡಬಹುದು.

ನ್ಜೋವು ತನ್ನ ವೈರಲ್ ವಿಡಿಯೋದಲ್ಲಿ ಮಾಟಗಾತಿಯ ಚಿತ್ರವನ್ನು ರಚಿಸಲು ಪ್ರಾರಂಭದಲ್ಲಿ ಸ್ತ್ರೀ ಅವತಾರವನ್ನು ಪ್ರಯತ್ನಿಸಿದ್ದಾರೆ, ಆದರೆ ನಂತರದಲ್ಲಿ ಅದು “ಮಾಟಗಾತಿ”  ರಚೆನೆಯನ್ನು ಪಡೆದುಕೊಂಡಿದೆ. ಜೊತೆಗೆ ಅವರು ವೀಡಿಯೊವನ್ನು ಹೆಚ್ಚು ನೈಜವಾಗಿ ಮತ್ತು ಭಯಾನಕವಾಗಿಸಲು ಉದ್ದನೆಯ ಕೂದಲು, ಗಾತ್ರದ ನಿಲುವಂಗಿಯಂತಹ ಬಟ್ಟೆ ಮತ್ತು ಹಿನ್ನಲೆ ಧ್ವನಿಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗಿದೆ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ, VFX ಟ್ಯುಟೋರಿಯಲ್ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಸೆಪ್ಟೆಂಬರ್ 24, 2022 ರಂದು ಪ್ರಕಟಿಸಲಾದ “ಫ್ಲೈಯಿಂಗ್ ಗೋಸ್ಟ್‌” ಎಂಬ 4D ಎಫೆಕ್ಟ್‌ ಮತ್ತು ವಿಡಿಯೋ ಕ್ರಿಯೇಟ್‌ನ ಕಲಿಕೆಯನ್ನು ತಿಳಿಸುವ ಸಲುವಾಗಿ ಚಿಸಿದ ವಿಡಿಯೋವನ್ನು ‘ಹಾರುವ ಭೂತ’ ಅಥವಾ ಹಾರುವ ಮಾಟಗಾತಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಇದುವರೆಗೂ ದೆವ್ವಗಳು, ಭೂತಗಳು ಅಸ್ತಿತ್ವದಲ್ಲಿವೆ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಅವೆಲ್ಲವೂ ಇನ್ನು ಜನರ ನಂಬಿಕೆ ಮತ್ತು ಕಲ್ಪನೆಗಳಲ್ಲಿವೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ BJP ಅಭ್ಯರ್ಥಿಗೆ ಮತದಾರರು ಚಪ್ಪಲಿಹಾರ ಹಾಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights