ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ BJP ಅಭ್ಯರ್ಥಿಗೆ ಮತದಾರರು ಚಪ್ಪಲಿಹಾರ ಹಾಕಿದ್ದು ನಿಜವೇ?

ಡಿಸೆಂಬರ್ 1 ಮತ್ತು 6 ರಂದು ಗುಜರಾತ್‌ನ ವಿಧಾನಸಭಾ ಚುನಾವಣೆಯ ಎರಡು ಹಂತದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮತ ಬೇಟೆಗೆ ತಾಲೀಮು ನಡೆಸುತ್ತಿವೆ. AAP ಮತ್ತು BJP ಪಕ್ಷದ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು BJP ಅಭ್ಯರ್ಥಿಗೆ ಮತದಾರರೊಬ್ಬರು ಚಪ್ಪಲಿ ಹಾರ ಹಾಕಲು ಮುಂದಾಗುತ್ತಿರುವ ವಿಡಿಯೋ ಎಂದು ಪ್ರತಿಪಾದಿಸಿದ್ದಾರೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಗೆ ಚಪ್ಪಲಿ ಹಾರ ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು ಟ್ವಿಟ್ಟರ್ ನಲ್ಲಿ ವಿಡಿಯೋ ವ್ಯಾಪಕವಾಗಿ ಶೇರ್ ಆಗುತ್ತಿದೆ. ಫೇಸ್‌ಬುಕ್‌ನಲ್ಲಿ ಸುಮಾರು 8,500 ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ 1,56,000 ಕ್ಕೂ ಹೆಚ್ಚು ವೀವ್ಸ್‌ ಪೆದುಕೊಂಡಿದೆ. ಹಾಗಿದ್ದರೆ ಈ ಘಟನೆ ನಡೆಯಲು ಕಾರಣವಾದರೂ ಏನು? ಎಲ್ಲಿ ನಡೆದಿದೆ ಮತ್ತು ಇದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸಲು ಕೀವರ್ಡ್ ಸರ್ಚ್ ನಡೆಸಿದಾಗ ಈ ವೀಡಿಯೊ 2018 ರ ಹಿಂದಿನದು ಮತ್ತು ಮಧ್ಯಪ್ರದೇಶದ ಧಮ್ನೋಡ್‌ನಲ್ಲಿ ನಡೆದ ಘಟನೆ ಎಂದು ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ. ANI  ಮಾಡಿರುವ ಟ್ವೀಟ್‌ನಲ್ಲಿ ಮಾಡಿರುವ ಪೋಸ್ಟ್‌ ಕೂಡ ಲಭ್ಯವಾಗಿದೆ.

ಹಳೆಯ ಮತ್ತು ಮಧ್ಯ ಪ್ರದೇಶದಲ್ಲಿ ನಡೆದ ಘಟನೆ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಗುಜರಾತ್‌ನಲ್ಲಿ ನಡೆದಿಲ್ಲ, ಬಿಜೆಪಿ ನಾಯಕರೊಬ್ಬರಿಗೆ ವಯೋವೃದ್ಧರೊಬ್ಬರು ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿರುವುದು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಎಂದು ಫ್ಯಾಕ್ಟ್‌ಚೆಕ್ ಮೂಲಕ ತಿಳಿದು ಬಂದಿದೆ.

ರಾಜಧಾನಿ ಭೋಪಾಲ್‍ನಿಂದ ಸುಮಾರು 272 ಕಿ.ಮೀ ದೂರದಲ್ಲಿರುವ ಧಾಮನೋದ್ ನಗರದಲ್ಲಿ ಸ್ಥಳೀಯ ಚುನಾವಣೆಯ ಪ್ರಚಾರ ನಡೆಯುತ್ತಿತ್ತು. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮನೆ ಮನೆಗೂ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೇಳುತ್ತಿದ್ದರು.

ವಿಡಿಯೋದಲ್ಲಿ ದಿನೇಶ್ ಶರ್ಮಾ ಸಾಲಾಗಿ ನಿಂತಿದ್ದ ವ್ಯಕ್ತಿಗಳ ಬಳಿ ಮತ ಹಾಕುವಂತೆ ಕೇಳುತ್ತಿದ್ದು, ಈ ಮಧ್ಯ ವೃದ್ಧರೊಬ್ಬರು ಕೈಗೆ ಚಪ್ಪಲಿ ಹಾರ ಎತ್ತಿಕೊಂಡಿದ್ದಾರೆ. ಆಗ ಶರ್ಮಾ ಮೊದಲು ಹಿಂದಕ್ಕೆ ಸರಿಯಲು ಯತ್ನಿಸಿದ್ದಾರೆ. ಆದ್ರೆ ನಂತರ ಅವರೇ ಹಾರ ಹಾಕಿಸಿಕೊಂಡಿರೋದನ್ನು ಕಾಣಬಹುದು.

ಈ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಅವರು ನನ್ನವರಲ್ಲಿ ಒಬ್ಬರು. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನವಾಗಿ ಈ ರೀತಿ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ ಎಂದು ಹೇಳಿದ್ದರು.

ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಆದ್ದರಿಂದ ಹಲವು ಬಾರಿ ಈ ಬಗ್ಗೆ ನಮ್ಮ ಮಹಿಳೆಯರು ಆಗಿನ ಅಧ್ಯಕ್ಷರಿಗೆ ದೂರು ನೀಡಲು ಹೋಗಿದ್ದರು. ಅದರ ಬದಲಿಗೆ ಅವರ ವಿರುದ್ಧವೇ ದೂರು ದಾಖಲಾಗಿತ್ತು. ರಾತ್ರಿ ಹೊತ್ತಲ್ಲೂ ಪೊಲೀಸ್ ಠಾಣೆಗೆ ಅನೇಕ ಬಾರಿ ಕರೆಸಿದ್ದಾರೆ. ಅದಕ್ಕಾಗಿ ಈ ರೀತಿ ಮಾಡಿದೆ ಎಂದು ಚಪ್ಪಲಿ ಹಾರ ಹಾಕಿದ ವೃದ್ಧ ಮಾಧ್ಯಮಗಳಿಗೆ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾರೆ, ಮದ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ 2018ರಲ್ಲಿ ಸ್ಥಳಿಯ ಚುನಾವಣೆ ವೇಳೆ ನಡೆದ ಘಟನೆಯನ್ನು, ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯನ್ನು ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಪ್ರತಿಮೆ ಮೇಲೆ ರಾಜೇಶ್ ಲವ್ ಪಿಂಕಿ ಎಂದು ಗೀಚಲಾಗಿದೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights