ಫ್ಯಾಕ್ಟ್‌ಚೆಕ್: ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಪ್ರತಿಮೆ ಮೇಲೆ ರಾಜೇಶ್ ಲವ್ ಪಿಂಕಿ ಎಂದು ಗೀಚಲಾಗಿದೆಯೆ?

ಭಾರತದಲ್ಲಿ ಅಮರ ಪ್ರೇಮದ ಕಥೆಗಳಿಗೇನು ಕಡಿಮೆ ಇಲ್ಲ ? ತಮ್ಮ ಪ್ರೀತಿಯನ್ನು ಇಡೀ ಜಗತ್ತಿಗೆ ಸಾರಲು ಕೆಲವು ಸಂಕೇತಗಳನ್ನು ಅಥವಾ ತಮ್ಮ ಹೆಸರುಗಳನ್ನು ಎಲ್ಲೆಂದರಲ್ಲಿ ಕೆತ್ತುವುದು, ದಾಖಲಿಸವುದನ್ನು ಕಾಣುತ್ತೇವೆ. ಯಾವುದಾದರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಕಲ್ಲು ಬಂಡೆಗಳ ಮೇಲೆ,  ಕಲಾಕೃತಿ, ವಾಸ್ತುಶಿಲ್ಪಗಳ ಮೇಲೆ, ದೇವಸ್ಥಾನದ ಗೋಡೆಗಳ ಮೇಲೆ ತಮ್ಮ ಪ್ರಿಯತಮೆಯ ಹೆಸರನ್ನು ಬರೆದು ಪ್ರವಾಸಿ ತಾಣಗಳ್ನು ವಿರೂಪಗೊಳಿಸುವುದು ಕಂಡುಬರುತ್ತವೆ. ಈ ಅಮರ ಪ್ರೇಮಿಗಳಿಗೆ ಜಾಗಗಳು ಸಾಲದೆ ಕೊನೆಗೆ ಸ್ಟ್ಯಾಚ್ಯೂ ಆಫ್ ಯೂನಿಟಿ ಪ್ರತಿಮೆಯ ಮೇಲೂ ರಾಜೇಶ್ ಲವ್ಸ್ ಪಿಂಕಿ ಎಂದು ಬರೆಯಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

 

‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಯನ್ನು ಬಿಡದೆ ಇದರ ಮೇಲು ಬರೆದಿದ್ದಾರೆ. ಇದನ್ನು ಬರೆದವರು ಯಾರು ? ಇವರು ಎಲ್ಲಿಯವರು ? ಜನರು ಇಂತಹ ಸ್ಮಾರಕಗಳನ್ನು ವಿರೂಪಗೊಳಿಸುತ್ತಿದ್ದಾರೆ ಎಂದು ವಿಷಾದಿಸುತ್ತಾ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಾದ ಪ್ರತಿಪಾಸನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಪ್ರತಿಮೆಯ ಮೇಲೆ ಗೀಚುಬರಹದವನ್ನು ಬರೆದಿದ್ದಾರೆ ಎಂಬ ಸುದ್ದಿಯನ್ನು ವರದಿ ಮಾಡಿದೆಯೇ ? ಎಂದು ತಿಳಿಯಲು ಸಂಬಂಧಿತ ಕೀವರ್ಡ್‌ಗಳೊಂದಿಗೆ  ಸರ್ಚ್ ಮಾಡಿದಾಗ ಯಾವುದೇ ಸೂಕ್ತ ಮಾಹಿತಿ ಲಭ್ಯವಾಗಲಿಲ್ಲ. ವಾಸ್ತವವಾಗಿ ಸ್ಟ್ಯಾಚ್ಯೂ ಆಫ್ ಯೂನಿಟಿ ಪ್ರತಿಮೆಯು ಭಾರತದ ಪ್ರಸಿದ್ದ ಸ್ಮಾರಕವಾಗಿರುವುದರಿಂದ ಒಂದು ವೇಳೆ ಅದನ್ನ ಕುರೂಪುಗೊಳಿಸಿದರೆ ಅಥವಾ ಅದಕ್ಕೆ ಹಾನಿಯುಂಟಾಗಿದ್ದರೆ, ಮಾಧ್ಯಮಗಳು ಅದನ್ನು ವ್ಯಾಪಕವಾಗಿ ಪ್ರಸಾರ ಮಾಡುತ್ತಿದ್ದವು. ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.

‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಪ್ರತಿಮೆಯು ಗುಜರಾತ್‌ನ ನರ್ಮದಾ ನದಿಯ ಕೆವಾಡಿಯಾ ಕಾಲೋನಿಯಲ್ಲಿದೆ, ವಡೋದರಾ ನಗರದ ಆಗ್ನೇಯಕ್ಕೆ 100 ಕಿಲೋಮೀಟರ್ (62 ಮೈಲಿ) ದೂರದಲ್ಲಿರುವ ಸರ್ದಾರ್ ಸರೋವರ್ ಅಣೆಕಟ್ಟಿಗೆ ಎದುರಾಗಿ ಇದೆ. ಆದರೆ ಪ್ರತಿಮೆಯ ಮುಖದ ಭಾಗದಲ್ಲಿ ಬರೆಯಲು ಹೇಗೆ ಸಾಧ್ಯ ? ಪ್ರವಾಸಿಗರಿಗಾಗಿ ನಿರ್ಮಿಸಿರುವ ಲಿಫ್ಟ್‌ಅನ್ನು ಬಳಸಿಕೊಂಡು ಹೋದರು ಪ್ರತಿಮೆಯ ಎದೆಯ ಭಾಗದವರೆಗೆ ಹೋಗಲು ಮಾತ್ರ ಸಾಧ್ಯವಿದೆ. ಆದರೆ ಮುಖದ ಭಾಗಕ್ಕೆ ಹೋಗಲು ಸಾಧ್ಯವಿಲ್ಲ. ಇನ್ನು ಅಲ್ಲಿ ಬರಹಗಳನ್ನು ಬರೆಯಲು ಸಾಧ್ಯವೇ ಇಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಇರುವ ಚಿತ್ರವನ್ನು ಎಡಿಟ್ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ.

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ ‘ಏಕತೆಯ ಪ್ರತಿಮೆ‘ಯ ಮೇಲೆ ಯಾವುದೇ ಗೀಚುಬರಹವನ್ನು ಮಾಡಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋದಲ್ಲಿ ರಾಜೇಶ್ ಲವ್ಸ್ ಪಿಂಕಿ ಎಂಬ ಗೀಚುಬರಹದೊಂದಿಗೆ ಎಡಿಟ್ ಮಾಡಿ ಸೇರಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಪ್ರತಿಮೆಯ ಮೇಲೆ ಯಾವುದೇ ಬರಹಗಳನ್ನು ಬರೆಯಲಾಗಿಲ್ಲ. ಅಂತಹ ಯಾವುದೇ ಘಟನೆಯ ಬಗ್ಗೆ ಮಾಧ್ಯಮ ವರದಿಗಳೂ ಇಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ತಮ್ಮ ನಾಮಪತ್ರವನ್ನು ತಾವೇ ತುಂಬಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು BJP ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.