ಕೊರೊನ ಸಾಂಕ್ರಾಮಿಕ ತಡೆ ನೆಪದಲ್ಲಿ ತುರ್ತು ಅಧಿಕಾರದ ದುರ್ಬಳಕೆಯ ವಿರುದ್ಧ ಎಚ್ಚರ ನೀಡಿದ ವಿಶ್ವಸಂಸ್ಥೆ

ಕೊರೊನ ಸಾಂಕ್ರಮಿಕ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ತುರ್ತು ಪರಿಸ್ಥಿತಿಯ ಅಧಿಕಾರ ದುರ್ಬಳಕೆ ಬಳಸಿಕೊಂಡು ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕುವುದರ ವಿರುದ್ಧ ವಿಶ್ವಸಂಸ್ಥೆಯ ಮಾನಹಕ್ಕುಗಳ ತಜ್ಞರು ಎಚ್ಚರಿಸಿದ್ದಾರೆ.

“ಸದ್ಯದ ಆರೋಗ್ಯ ಬಿಕ್ಕಟ್ಟಿನ ತೀವ್ರತೆ ಮತ್ತು ಅದಕ್ಕೆ ಪರಿಹಾರವಾಗಿ ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ತುರ್ತು ಪರಿಸ್ಥಿತಿಯ ಅಧಿಕಾರವನ್ನು ಬಳಸಬೇಕಾಗಿರುವ ಅಗತ್ಯವನ್ನು ನಾವು ಮನಗಂಡಿದ್ದೇವೆ ಆದರೆ ನಾವು ವಿವಿಧ ದೇಶಗಳಿಗೆ ಎಚ್ಚರಿಸುವುದೇನೆಂದರೆ ಕರೊನ ವೈರಸ್ ತಡೆಗೆ ತೆಗೆದುಕೊಳ್ಳುವ ಕ್ರಮಗಳು ಅಗತ್ಯವಾಗಿರಬೇಕು, ಪ್ರಮಾಣಕ್ಕನುಗುಣವಾಗಿರಬೇಕು ಮತ್ತು ತಾರತಮ್ಯ ಎಸಗದಂತೆ ಎಚ್ಚರವಹಿಸಬೇಕು” ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯ ಅಧಿಕಾರ ಉಪಯೋಗಿಸುವುದನ್ನು ಸಾರ್ವಜನಿಕವಾಗಿ ಘೋಷಿಸಬೇಕು ಮತ್ತು ಅಂತರಾಷ್ಟ್ರೀಯ ಕಾನೂನಿನ ನಿಯಮಗಳನ್ನು ಅನುಸರಿಸಬೇಕು ಎಂದಿರುವ ವಿಶ್ವಸಂಸ್ಥೆ “Covid-19 ತಡೆಗಟ್ಟಲು ಘೋಷಿಸುವ ತುರ್ತುಪರಿಸ್ಥಿತಿ ಯಾವುದೇ ನಿರ್ಧಿಷ್ಟ ಪಂಗಡ ಅಥವಾ ವ್ಯಕ್ತಿ ಅಥವಾ ಅಲ್ಪಸಂಖ್ಯಾತರ ವಿರುದ್ಧವಾಗಿ ಬಳಸಬಾರದು. ಇದನ್ನು ಮಾನವಹಕ್ಕುಗಳ ಹೋರಾಟಗಾರರ ಧ್ವನಿಯನ್ನು ಅಡಗಿಸಲು ಅಥವಾ ಆರೊಗ್ಯದ ಹೆಸರಿನಲ್ಲಿ ದೌರ್ಜನ್ಯದ ಕ್ರಮಗಳಿಗಾಗಿ ಬಳಸಬಾರದು” ಎಂದಿದೆ.

“ಹಾಗೆಯೇ ವೈಸರ್ ಸೋಂಕು ತಗ್ಗಿದ ಮೇಲೆ ಸಾಮಾನ್ಯ ನಿತ್ಯ ಜೀವನಕ್ಕೆ ತಮ್ಮ ದೇಶ ಮರಳುವಂತೆ ನೊಡಿಕೊಳ್ಳಬೇಕು ಮತ್ತು ದಿನನಿತ್ಯದ ಬದುಕನ್ನು ಅನಿರ್ಧಿಷ್ಟವಾಗಿ ಈ ತುರ್ತು ಕಾನೂನುಗಳು ನಿಯಂತ್ರಿಸದಂತೆ ಕ್ರಮ ತೆಗೆದುಕೊಳ್ಳಬೇಕು”  ಎಂದು ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights