ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ತಮ್ಮ ನಾಮಪತ್ರವನ್ನು ತಾವೇ ತುಂಬಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು BJP ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದರೆ?
ಯಾರ ಸಹಾಯವು ಇಲ್ಲದೆ ನರೇಂದ್ರ ಮೋದಿ ತನ್ನ ಎಲೆಕ್ಷನ್ ಫಾರಂ ಅನ್ನು ತುಂಬಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಕೇಂದ್ರ ಸಚಿವ BJP ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.
BJP ಸಂಸದ ಸುಬ್ರಮಣಿಯನ್ ಸ್ವಾಮಿ ದೇಶದ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಇಂತಹ ಹೇಳಿಕೆಯನ್ನು ನಿಜವಾಗಿಯೂ ನೀಡಿದ್ದಾರೆಯೇ ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ BJP ಸಂಸದ ಸುಬ್ರಮಣಿಯನ್ ಸ್ವಾಮಿ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ ಅಭಿಪ್ರಾಯ ಪಟ್ಟಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸ್ವಾಮಿಯವರ ಟ್ವಿಟರ್ ಅಕೌಂಟ್‌ಅನ್ನು ಪರಿಶೀಲಿಸಿದಾಗ ಮೋದಿ ಕುರಿತು ಅಂತಹ ಯಾವುದೇ ಹೇಳಿಕೆಗಳು ದಾಖಲಾಗಿಲ್ಲ. ಅಲ್ಲದೆ ಇತರೆ ಯಾವ ಮಾಧ್ಯಮಗಳೂ ಸ್ವಾಮಿಯವರ ಅಭಿಪ್ರಾಯಗಳನ್ನು ದಾಖಲಿಸಿದ ವರದಿಗಳಿಲ್ಲ. ಒಂದು ವೇಳೆ ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಸುಬ್ರಮಣಿಯನ್ ಸ್ವಾಮಿ ಅಂತಹ ಪ್ರತಿಕ್ರಿಯೆಗಳನ್ನು ನೀಡಿದ್ದರೆ ರಾಷ್ಟ್ರ ಮಟ್ಟದ ಸುದ್ದಿಯಾಗಿ ಪ್ರಕಟವಾಗುತ್ತಿತ್ತು.
ನರೇಂದ್ರ ಮೋದಿಯವರ ನಿಲುವುಗಳನ್ನು ವಿರೋಧಿಸುತ್ತಾ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟ್ಟರ್ ಹ್ಯಾಂಡಿಲ್‌ನಲ್ಲಿ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ. ಅಂತಹ ಕೆಲವು ಟ್ವೀಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಆದರೆ, ನರೇಂದ್ರ ಮೋದಿ ತನ್ನ ಚುನಾವಣಾ ನಾಮಪತ್ರವನ್ನು ತಾವೇ ತುಂಬಿದರೆ ತಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸುಬ್ರಮಣಿಯನ್ ಸ್ವಾಮಿ ಯಾವುದೇ ಟ್ವೀಟ್ ಮಾಡಿಲ್ಲ.
I am anti Modi policies for the economy & foreign policy and I am ready to debate with any responsible on it. Have you heard about participatory democracy? Modi is not King of India
— Subramanian Swamy (@Swamy39) August 14, 2021
ಬಿಜೆಪಿಯಲ್ಲಿನ ಹಲವು ನಾಯಕರು ನನ್ನನ್ನು ವಿರೋದಿಸುತ್ತಾರೆ, RSS ಮತ್ತು ವಿಶ್ವ ಹಿಂದೂ ಪರಿಷತ್ತಿನ ಮೇಲೆ ಇರುವ ಅಭಿಮಾನದಿಂದ ಬಿಜೆಪಿಯಲ್ಲಿ ಮುಂದುವರಿದಿದ್ದೇನೆ ಎಂದು 2020 ಫೆಬ್ರವರಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಒಂದು ಟ್ವೀಟ್ ಮಾಡಿದ್ದಾರೆ. ಆದರೆ ಯಾರ ಸಹಾಯವು ಇಲ್ಲದೆ ನರೇಂದ್ರ ಮೋದಿ ತಮ್ಮ ನಾಮ ಪತ್ರವನ್ನು ಭರ್ತಿ ಮಾಡಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ.
There are people in BJP who want me to quit by constantly trying to humiliate me by petty barbs and isolating, but I have the affection of the RSS, VHP and karyakartas.
— Subramanian Swamy (@Swamy39) February 9, 2020
ಒಟ್ಟಾರೆಯಾಗಿ ಹೇಳುವುದಾರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ನಾಮಪತ್ರವನ್ನು ತಾವೇ ಭರ್ತಿ ಮಾಡಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು BJP ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬೇರೆ ಧರ್ಮದವರು 10 ಮಕ್ಕಳು ಹುಟ್ಟಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ