Fact check: ಆಪ್‌ ಟೀಕಿಸಿದ್ದಾರೆಂದು ಪತ್ರಕರ್ತ ರವೀಶ್ ಕುಮಾರ್ ಹೆಸರಿನಲ್ಲಿ ನಕಲಿ ಟ್ವೀಟ್

ಪಂಜಾಬ್ ಚುನಾವಣೆಯ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಪತ್ರಕರ್ತ ರವೀಶ್ ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ ಎಂಬ ಪೋಸ್ಟ್ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಪಂಜಾಬ್‌ಗೆ ಹೋಗುವ ಮೊದಲು, ನೀವು ದೆಹಲಿಯ ಕಸ್ತೂರ್ಬಾ ನಗರದಲ್ಲಿ ಅತ್ಯಾಚಾರಕ್ಕೊಳಗಾದ ಸಿಖ್ ಮಹಿಳೆಯ ಮನೆಗೆ ಭೇಟಿ ನೀಡಬೇಕಾಗಿತ್ತು. ನೀವು ಹಾಗೆ ಮಾಡಿದ್ದರೆ ಬಹುಶಃ ಸಿಖ್ ಮತಗಳನ್ನು ಪಡೆಯಲು 250 ಕಿಲೋಮೀಟರ್ ಪ್ರಯಾಣಿಸುವ ಅಗತ್ಯವಿರಲಿಲ್. ಹೀಗಾದರೆ ದೆಹಲಿಯ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ ಎಂದು ರವೀಶ್ ಕುಮಾರ್ ಟ್ವಿಟ್‌ ಮಾಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

 

ಫ್ಯಾಕ್ಟ್‌ಚೆಕ್:

ರವೀಶ್ ಕುಮಾರ್ ಅವರು ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಟ್ವೀಟ್ ಗಳು  ವಿವಾದಾಸ್ಪದವಾಗಿದ್ದು, ಅವರು ನಿಜವಾಗಿಯೂ ಅಂತಹ ಕಾಮೆಂಟ್‌ಗಳನ್ನು ಮಾಡಿದ್ದರೆ ಅದು ಮಾಧ್ಯಮಗಳ ಗಮನವನ್ನು ಸೆಳೆಯುತ್ತಿತ್ತು. ಆದರೆ ಯಾವುದೇ ಮಾಧ್ಯಮದಲ್ಲಿಯೂ ಅವರ ಹೇಳಿಕೆಯ ಬಗ್ಗೆ ವರದಿಗಳಿಲ್ಲ. ವೇಬ್ಯಾಕ್ ಮೆಷಿನ್‌   ಲಿಂಕ್ ಮೂಲಕ ರವೀಶ್ ಕುಮಾರ್‌ಅವರ ಟ್ವೀಟ್ ಅನ್ನು ಪರಿಶೀಲಿಸಲು ಪ್ರಯತ್ನಿಸಿದ್ದೇವೆ, ಆದರೆ ಅದರಲ್ಲಿ ವೈರಲ್ ಆಗಿರುವ ಟ್ವೀಟ್‌ನ ಸುಳಿವಾಗಲಿ ಅಥವ ಮಾಹಿತಿಯಾಗಲಿ ಲಭ್ಯವಾಗಿಲ್ಲ.

ವೈರಲ್ ಟ್ವೀಟ್ ನಲ್ಲಿ ಉಲ್ಲೇಖಿಸಲಾದ “ಸಿಖ್ ಮಹಿಳೆ” ಕಳೆದ ತಿಂಗಳು ದೆಹಲಿಯ ಕಸ್ತೂರ್ಬಾ ನಗರದಲ್ಲಿ ಅಪಹರಣ, ಅತ್ಯಾಚಾರ, ಹಲ್ಲೆ, ಚಿತ್ರಹಿಂಸೆ ಮತ್ತು ಮೆರವಣಿಗೆಗೆ ಒಳಗಾದ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ದೆಹಲಿ ಪೊಲೀಸರು 16 ಪುರುಷರು ಮತ್ತು ಮಹಿಳೆಯರನ್ನು ಬಂಧಿಸಿದ್ದಾರೆ.

ಇದಲ್ಲದೆ, ಕಳೆದ ತಿಂಗಳು ಸಾಮೂಹಿಕ ಅತ್ಯಾಚಾರಕೊಳಗಾಗಿ ನಂತರ ಅದೇ ಕುಟುಂಬದವರಿಂದ ದಾಳಿಗೊಳಗಾಗಿ, ಅರೆ ಬೆತ್ತಲೆ ಮೆರವಣಿಗೆಗೆ ಒಳಗಾದ ಯುವತಿಯು ಸಿಖ್ ಧರ್ಮದವಳಲ್ಲ ಎಂದು ಹೇಳಲಾಗುತ್ತಿದೆ.  ನ್ಯೂಸ್‌ಲಾಂಡ್ರಿಯ ವರದಿಯಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ ಮತ್ತು ಆರೋಪಿತರು ಬೇಡ್ಕುಟ್ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರ ವರದಿಯಲ್ಲಿ ಉಲ್ಲೆಖವಿದೆ. ಆದರೆ ಸಂತ್ರಸ್ಥೆಯ ಕಟುಂಬವು ಸಿಖ್ ಸಂಪಾದಾಯವನ್ನು ಅನುಸರಿಸುತ್ತ ಬಂದಿರುವುದು ಮಾಹಿತಿಯಿಂದ ತಿಳಿದು ಬಂದಿದೆ.

ಆಲ್ಟ್ ನ್ಯೂಸ್ ಜೊತೆ ಮಾತನಾಡಿರುವ  ರವೀಶ್ ಕುಮಾರ್  ಸಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿರುವ ಟ್ವೀಟ್‌ಗಳನ್ನು ನಾನು ಮಾಡಿಲ್ಲ ಅದು “ಸಂಪೂರ್ಣವಾಗಿ ನಕಲಿ”.  ಈ ಸುಳ್ಳು ಸುದ್ದಿ ಎಷ್ಟು ವೈರಲ್ ಆಗಿದೆ ಎಂದರೆ  ಟ್ವೀಟ್‌ಗೆ ಸಂಬಂಧಿಸಿದಂತೆ ಪಂಜಾಬ್‌ನಿಂದಲೂ ಸಾಕಷ್ಟು ಜನರು ತಮ್ಮನ್ನು ಸಂಪರ್ಕಿಸುವಷ್ಟು ವೈರಲ್ ಆಗಿದೆ. ಆದರೆ ಈ ಟ್ವೀಟ್‌ಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ರವೀಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಸುದ್ದಿ ಆಗಿರುವುದು ಇದು ಮೊದಲೇನಲ್ಲ, ಅವರ ಬಗ್ಗೆ ಆಗಾಗ್ಗೆ ಇಂತಹ ವಿಷಯಗಳು  ಸೋಶಿಯಲ್ ಮೀಡಿಯಾದಲ್ಲಿ  ಕೇಳಿ ಬರುತ್ತಿರುತ್ತವೆ. ಅವರ ಬಗ್ಗೆ ಸುಳ್ಳು ಉಲ್ಲೇಖಗಳು ವರದಿಯಾಗುತ್ತಲೆ ಇರುತ್ತವೆ. ಹಾಗಾಗಿ ಸದ್ಯಕ್ಕೆ ರವೀಶ್ ಕುಮಾರ್ ಅವರ ಬಗ್ಗೆ ವೈರಲ್ ಆಗುತ್ತಿರುವ ಸುದ್ದಿ ಸುಳ್ಳು.


ಇದನ್ನು ಓದಿರಿ: Fact Check: ಅಖಿಲೇಶ್ ಯಾದವ್ ತನ್ನನ್ನು ‘ರಾವಣ’ನಿಗೆ ಹೋಲಿಸಿ ಟ್ವೀಟ್ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights