FACT CHECK | ಭಟ್ಕಳ-ಸಾಗರ ರಸ್ತೆಯಲ್ಲಿ ಸಿಂಹಗಳು ಕಾಣಿಸಿಕೊಂಡಿವೆ ಎಂದು ಗುಜರಾತ್‌ನ ವಿಡಿಯೋ ಹಂಚಿಕೆ
ಸಿಂಹಗಳು ತನ್ನ ಮರಿಗಳೊಂದಿಗೆ ರಸ್ತೆಯಲ್ಲಿ ಅಡ್ಡಾಡುತ್ತಿರುವ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಈ ದೃಶ್ಯಗಳು ಸಾಗರ ಭಟ್ಕಳ ರಸ್ತೆಯಲ್ಲಿ ಕಂಡುಬಂದಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.
“ಶಿವಮೊಗ್ಗದ ಸಾಗರ ಭಟ್ಕಳ ರೋಡ್‌ನಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿವೆ. ದಯವಿಟ್ಟು ಸಂಜೆ ವೇಳೆ ಯುವಕರು ಬೈಕ್‌ನಲ್ಲಿ ತಿರುಗಾಡುವ ಮುನ್ನ ಎಚ್ಚರ” ಎಂದು ವಾಟ್ಸ್‌ಆಪ್‌ಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಸಿಂಹಿಣಿಗಳ ಗುಂಪೊಂದು ತನ್ನ ಮರಿಗಳ ಜೊತೆ ನಡುರಸ್ತೆಯಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ. ಈಗಾಗಲೇ ಈ ವಿಡಿಯೋ ಶಿವಮೊಗ್ಗ ವಾಟ್ಸ್‌ಆಪ್ ಗ್ರೂಪ್ ಸೇರಿದಂತೆ ಹಲವೆಡೆ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ :
ವಾಟ್ಸಪ್‌ಗಳಲ್ಲಿ ಕಂಡುಬಂದ ಸಂದೇಶದಲ್ಲಿರುವ ಪ್ರತಿಪಾದನೆಯನ್ನು ಪರಿಶೀಲಿಸಲು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ಮಾಡಿದಾಗ, ಈ ಬಗ್ಗೆ ಯಾವುದೇ ಅಧಿಕೃತ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ. ಇನ್ನು ಲಭ್ಯವಿರುವ ಮಾಹಿತಿಗಳ ಪ್ರಕಾರ ತ್ಯಾವರೆಕೊಪ್ಪ ಸಿಂಹದಾಮ ಬಿಟ್ಟರೆ, ಶಿವಮೊಗ್ಗದಲ್ಲಿ ಸಿಂಹಗಳ ಇರುವಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ.
ವೈರಲ್ ವಿಡಿಯೋವನ್ನು ವಿವಿಧ ಕೀ ಪ್ರೇಮ್‌ಗನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 7 ಸೆಪ್ಟೆಂಬರ್ 2024ರಂದು ಅಮೇಜಿಂಗ್ ಅಮ್ರೇಲಿ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಆಗಿರುವುದು ಕಂಡು ಬಂದಿದೆ. ಮತ್ತು ಗುಜರಾತ್ ವೈಲ್ಡ್ ಲೈಫ್ ಅಫಿಶಿಯಲ್ ಎಂಬ Instagram ನಲ್ಲಿಯು ಈ ವಿಡಿಯೋ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. ವಾಸ್ತವವಾಗಿ ಈ ವಿಡಿಯೋ ಗುಜರಾತ್‌ನದ್ದು ಎಂಬುದು ಸ್ಪಷ್ಟವಾಗಿದೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಕಿಡಿಗೇಡಿಗಳು ಈ ವಿಡಿಯೋವನ್ನು ಸಾಗರ ಭಟ್ಕಳ ರೋಡ್‌ನಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿವೆ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಸಂದೇಶ ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದಲಿತರು ಗಂಗಾ ನದಿಯಲ್ಲಿ ಸ್ನಾನ ಮಾಡಿ ಅಪವಿತ್ರಗೊಳಿಸಿದ್ದಾರೆಂದು ಬೆತ್ತಲೆಗೊಳಿಸಿ ಥಳಿಸಲಾಗಿದೆಯೇ?