Fact Check: ಅಖಿಲೇಶ್ ಯಾದವ್ ತನ್ನನ್ನು ‘ರಾವಣ’ನಿಗೆ ಹೋಲಿಸಿ ಟ್ವೀಟ್ ಮಾಡಿದ್ದು ನಿಜವೇ?

ಉತ್ತರ ಪ್ರದೇಶದ ಚುನಾವಣೆ ರಂಗೇರುತ್ತಿದೆ. ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಮಾಡಿದ್ದಾರೆ ಎಂಬ ಟ್ವೀಟ್‌ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಅಖಿಲೇಶ್ ಯಾದವ್ ತಮ್ಮನ್ನು ಸ್ವತಃ ’ರಾವಣ’ನಿಗೆ ಹೋಲಿಕೆ ಮಾಡಿಕೊಂಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದರ ವಾಸ್ತವವನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಅಖಿಲೇಶ್ ಯಾದವ್ ಅವರ ಅಧಿಕೃತ ಟ್ವಿಟರ್  ಪರಿಶೀಲಿಸಿದಾಗ ಅವರ ಯೂಸರ್ ಐಡಿ @yadavakhilesh ಎಂಬ ಹೆಸರಿನೊಂದಿಗೆ ಇದೆ. ಆದರೆ ಈ ಟ್ವೀಟ್ ಅನ್ನು @akhileshyadav ಎಂಬ ಹೆಸರಿನಿಂದ ಮಾಡಲಾಗಿದೆ. ಹಾಗಾಗಿ ಇದು ಅಖಿಲೇಶ್ ಯಾದವ್‌ರವರ ಅಧಿಕೃತ ಖಾತೆಯಲ್ಲ ಎಂದು ತಿಳಿದುಬಂದಿದೆ. ಅಲ್ಲದೆ 19 ಜನವರಿ 2022 ರಂದು ಅಖಿಲೇಶ್ ಯಾದವ್ ರವರು ತಮ್ಮ ಅಧಿಕೃತ ಖಾತೆಯಲ್ಲಿ ಅಂತಹ ಯಾವುದೇ ಟ್ವೀಟ್ ಮಾಡಿಲ್ಲ ಎಂಬುದು ತಿಳಿದುಬಂದಿದೆ. ಅಖಿಲೇಶ್ ಯಾದವ್ ಅವರ ಅಧಿಕೃತ ಟ್ವಿಟರ್ ‌ಅಕೌಂಟ್ ಅನ್ನು ಇಲ್ಲಿ ನೋಡಬಹುದು.

ಕಿಡಿಗೇಡಿಗಳು ಅಖಿಲೇಶ್ ಯಾದವ್‌ರವರ ಅಧಿಕೃತ ಖಾತೆಯ ಫೋಟೊ ಬಳಸಿ ಎಡಿಟ್ ಮಾಡಿ ಈ ಚಿತ್ರವನ್ನು ತಯಾರಿಸಿದ್ದಾರೆ. ಅಲ್ಲದೆ ಈ ಹೆಸರಿನ ಖಾತೆಯನ್ನು ಅಮಾನತುಗೊಳಿಸಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ಬಳಸಲಾದ ನಕಲಿ ಅಮಾನತುಗೊಳಿಸಿದ ಟ್ವಿಟರ್ ಅಕೌಂಟ್. ಈ ಆಪಾದಿತ ಟ್ವೀಟ್ ಅನ್ನು ಅಖಿಲೇಶ್ ಯಾದವ್ ರವರು ಮಾಡಿಲ್ಲ. ಈ ಟ್ವೀಟ್‌ನಲ್ಲಿರುವ ಪ್ರತಿಪಾದನೆಯು ಸುಳ್ಳಾಗಿದೆ.


ಇದನ್ನೂ ಓದಿ: Fact check: ಕೇಂದ್ರ ನಿರಾಕರಿಸಿದ ತಮಿಳುನಾಡು ಟ್ಯಾಬ್ಲೊದಲ್ಲಿ ಕರುಣಾನಿಧಿ ಅವರ ಪ್ರತಿಮೆ ಇದ್ದಿದ್ದು ನಿಜವೆ?


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights