ಫ್ಯಾಕ್ಟ್‌ಚೆಕ್: 2 ಸಾವಿರ ಮುಖಬೆಲೆಯ ಎರಡು ಕೋಟಿ ಖೋಟಾ ನೋಟುಗಳು ಚಲಾವಣೆಯಾಗುತ್ತಿವೆ ಎಂದು RBI ಹೇಳಿದೆಯೇ?

ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಸುತ್ತೋಲೆಯ ಪ್ರಕಾರ ಸಂಖ್ಯೆ 2AQ ಮತ್ತು 8AC ಸೀರಿಸ್‌ನ 2000 ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸಬೇಡಿ. 2000 ಮೌಲದ 2 ಕೋಟಿ ಖೋಟಾ ನೋಟುಗಳು ಭಾರತಕ್ಕೆ ಬಂದಿವೆ ಎಂದು ಪ್ರತಿಪಾದಿಸಿ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

2000 ರೂಪಾಯಿ ಮೌಲ್ಯದ 2 ಕೋಟಿ ಖೋಟಾ ನೋಟುಗಳು ಭಾರತಕ್ಕೆ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗಳ ಮೂಲಕ ಸುತ್ತೋಲೆಯನ್ನು ಹೊರಡಿಸಿ ಮಾಹಿತಿಯನ್ನು ಹಂಚಿಕೊಂಡಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಖೋಟಾ ನೋಟಿಗೆ ಸಂಬಂಧಿಸಿದಂತೆ RBI ಯಾವುದಾದರೂ ಸುತ್ತೋಲೆಯನ್ನು ಹೊರಡಿಸಲಾಗಿದೆಯೇ ಎಂದು ಪರಿಶೀಲಿಸಲು RBI ನ ವೆಬ್‌ಸೈಟ್‌ ಅನ್ನು ಪರಿಶೀಲಿಸಿದಾಗ, RBI ನಿಂದ ಅಂತಹ ಯಾವುದೇ ಸೂಚನೆಯನ್ನು ನೀಡಿರುವುದು ಪತ್ತೆಯಾಗಿಲ್ಲ.

 ಭಾರತೀಯ ರಿಸರ್ವ್ ಬ್ಯಾಂಕ್ (RBI) 2021-22 ರ ಹಣಕಾಸು ವರದಿಯ ಪ್ರಕಾರ ಪ್ರಸ್ತುತ ಚಲಾವಣೆಯಲ್ಲಿರುವ 2,000 ರೂ ನೋಟುಗಳ ಒಟ್ಟು ಮೌಲ್ಯವು ಕೇವಲ 13.8 ಶೇಕಡಾ ಮಾತ್ರ! ಈ ಅಂಕಿ ಅಂಶ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಿದೆ. (ಸಾಂಕೇತಿಕ ಚಿತ್ರ)

ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಪಡೆಯಲು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (SBI) ದ ಬ್ಯಾಂಕ್ ವ್ಯವಸ್ಥಾಪಕರನ್ನು ಏನ್‌ಸುದ್ದಿ ವತಿಯಿಂದ ಸಂಪರ್ಕಿಸಲಾಯಿತು. ಭಾರತಕ್ಕೆ ಖೋಟಾ ನೋಟುಗಳು ಬಂದಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ ಇದು ನಿಜವೇ ಎಂದು ಪ್ರಶ್ನಿಸಲಾಯಿತು. ಸ್ಟೇಟ್ ಬ್ಯಾಂಕ್ಆಫ್ ಇಂಡಿಯಾದ ವ್ಯವಸ್ಥಾಪಕರು ಮಾತನಾಡಿ “ಖೋಟಾ ನೋಟಿಗೆ ಸಂಬಂಧಿಸಿದಂತೆ RBI ನಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ಸೂಚನೆಗಳು ಬಂದಿಲ್ಲ ಮತ್ತು  2AQ ಮತ್ತು 8AC ಸೀರಿಸ್‌ಗಳ ಬಗ್ಗೆಯೂ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾದಿಂದ ಯಾವುದೇ ಮಾಹಿತಿ ಇಲ್ಲ” ಎಂದು ತಿಳಿಸಿದರು.

 RBI ಹೊರಡಿಸಿದ ಎಲ್ಲಾ ಕರೆನ್ಸಿ ನೋಟುಗಳನ್ನು ಪರಿಗಣಿಸಿದರೆ ಮಾರ್ಚ್ 31, 2021 ಕ್ಕೆ 12,437 ನೋಟುಗಳು ಚಲಾವಣೆಯಲ್ಲಿವೆ. ಮಾರ್ಚ್ 31, 2022 ಕ್ಕೆ 13,053 ನೋಟುಗಳು ಚಲಾವಣೆಯಲ್ಲಿವೆ.

ವಾಸ್ತವವಾಗಿ ಇತ್ತೀಚೆಗೆ ಬ್ಯಾಂಕು ಮತ್ತು ATM ಗಳಲ್ಲಿ 2000 ಮುಖಬೆಲೆಯ ನೋಟುಗಳು ಅತೀ ವಿರಳವಾಗಿವೆ. ಭಾರತದ ಅತ್ಯಂತ ಮೌಲ್ಯಯುತ ಕರೆನ್ಸಿ ನೋಟು ರೂ 2,000 ನೋಟುಗಳ ಚಲಾವಣೆ ತೀವ್ರವಾಗಿ ಕುಸಿದಿದೆ. ಹಿಂದಿನದಕ್ಕೆ ಹೋಲಿಸಿದರೆ ಈಗ 2000 ರೂಪಾಯಿ ನೋಟುಗಳ ಚಲಾವಣೆ ತುಂಬಾ ಕಡಿಮೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) 2021-22 ರ ಹಣಕಾಸು ವರದಿಯ ಪ್ರಕಾರ ಪ್ರಸ್ತುತ ಚಲಾವಣೆಯಲ್ಲಿರುವ 2,000 ರೂ ನೋಟುಗಳ ಒಟ್ಟು ಮೌಲ್ಯವು ಕೇವಲ 13.8 ಶೇಕಡಾ ಮಾತ್ರ! ಈ ಅಂಕಿ ಅಂಶ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಿದೆ.

ಕರೆನ್ಸಿ ನೋಟುಗಳ ಸಂಖ್ಯೆಗೆ ಬಂದರೆ ಪ್ರಸ್ತುತ ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳು ಒಟ್ಟು ನೋಟುಗಳ ಪೈಕಿ ಕೇವಲ 1.6 ರಷ್ಟು ಮಾತ್ರ. ಆಗಿವೆ  ಹಿಂದಿನ ಹಣಕಾಸು ವರ್ಷದಲ್ಲಿ 2020-21 ರಲ್ಲಿ ಇದು 2 ಶೇಕಡಾದಷ್ಟಿತ್ತು. ಅದರ ಹಿಂದಿನ ವರ್ಷ 2019-20ರಲ್ಲಿ ಇದು 2.4 ಶೇಕಡಾದಷ್ಟಿತ್ತು

ಒಟ್ಟಾರೆಯಾಗಿ ಹೇಳುವುದಾರೆ, RBI ನಿಂದ ಖೋಟಾ ನೋಟುಗಳಿಗೆ ಸಂಬಂಧಿಸಿದಂತೆ ಸೂಚನೆ ನೀಡಲಾಗಿದೆ ಎಂಬ ಪೋಸ್ಟ್‌ ನಕಲಿಯಾಗಿದ್ದು, RBIನಿಂದ ಅಂತಹ ಯಾವುದೇ ಅಧಿಕೃತ ಸೂಚನೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹತ್ತಿರದಿಂದ ಚಂದ್ರಗ್ರಹಣ ಸೆರೆ ಎಂಬ ವೈರಲ್ ವಿಡಿಯೋದ ಅಸಲಿಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights