ಫ್ಯಾಕ್ಟ್‌ಚೆಕ್: ಹತ್ತಿರದಿಂದ ಚಂದ್ರಗ್ರಹಣ ಸೆರೆ ಎಂಬ ವೈರಲ್ ವಿಡಿಯೋದ ಅಸಲಿಯತ್ತೇನು?

ಅಕ್ಟೋಬರ್ ಮತ್ತು ನವೆಂಬರ್ ಒಂದು ತಿಂಗಳ ಆಸುಪಾಸಿನಲ್ಲೆ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿದ್ದ ಸುದ್ದಿ ಈಗಾಗಲೆ ನಮಗೆ ತಿಳಿದಿದೆ. ಅಕ್ಟೋಬರ್ 25, 2022ರಂದು ಸೂರ್ಯ ಗ್ರಹಣ ಮತ್ತು ನವೆಂಬರ್ 8 ರಂದು ಚಂದ್ರ ಗ್ರಹಣ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ನಿಸರ್ಗದ ಮಡಿಲಲ್ಲಿ ನಡೆಯುವ ವಿಸ್ಮಯಗಳನ್ನು ಬಲ್ಲವರಾರು?  ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by (@seekersofthecosmos)

ವೈರಲ್ ಆಗಿರುವ ವಿಡಿಯೋದಲ್ಲಿ ನಾವು ಇದುವರೆಗೂ ನೋಡಿದ್ದಕ್ಕಿಂತ ಬಹಳ ಹತ್ತಿರದಿಂದ ಚಂದ್ರ ಕಾಣುವಂತೆ ಸೆರೆ ಹಿಡಿಯಲಾದ ಈ ವಿಡಿಯೋವನ್ನು ಆರ್ಕ್ಟಿಕ್ ವೃತ್ತದ ಬಳಿ ಸೆರೆ ಹಿಡಿಯಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದ ಹಲವು ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆನಡಾ, ಅಲಾಸ್ಕಾ ಮತ್ತು ರಷ್ಯಾದ ಗಡಿಯ ನಡುವಿನ ಆರ್ಕ್ಟಿಕ್ ವೃತ್ತದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಈ ವಿದ್ಯಮಾನವು ಕೆಲವೇ ಸೆಕೆಂಡುಗಳವರೆಗೆ ಇರುತ್ತದೆ, ಎಂದು ಅನೇಕ ಬಳಕೆದಾರರು ಹಂಚಿಕೊಂಡಿದ್ದಾರೆ. ದೈತ್ಯಾಕಾರವಾಗಿ ಕಾಣಿಸಿಕೊಳ್ಳುವ ಚಂದ್ರ  ವೈಭವವನ್ನು ನೋಡುವುದೇ ಒಂದು ಅದ್ಭುತ. ಇದು ಕೆಲವೇ ಸೆಕೆಂಡುಗಳಲ್ಲಿ ನಡೆದು ಸರಿದುಹೋಗುವ ದೃಶ್ಯವಾಗಿದ್ದು ನಂತರ ಚಂದ್ರ ಕಣ್ಮರೆಯಾಗುತ್ತಾನೆ. ಇದು ತುಂಬಾ ಹತ್ತಿರದ ಮತ್ತು ಭೂಮಿಗೆ ಅಪ್ಪಳಿಸುವಂತೆ ತೋರುತ್ತದೆ. ನಂತರ 5 ಸೆಕೆಂಡುಗಳ ಸಂಪೂರ್ಣ ಸೂರ್ಯ ಗ್ರಹಣದಿಂದ ಎಲ್ಲವೂ ಕತ್ತಲೆಯಾಗುತ್ತದೆ. ಈ ವಿದ್ಯಮಾನವು ಪೆರಿಜಿಯಲ್ಲಿ ಮಾತ್ರ ಸಂಭವಿಸಿದೆ ಎಂದು ಹೇಳಲಾಗಿದೆ.

ಹಾಗಿದ್ದರೆ ಈ ರೀತಿ ಸೂರ್ಯ ಗ್ರಹಣ ಸಂಭವಿಸಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, Aleksey n ಎಂಬ YouTube ಚಾನಲ್‌ನಲ್ಲಿ ನಾವು ಈ ವೀಡಿಯೊವನ್ನು ಲಭ್ಯವಾಗಿದೆ. ಲಭ್ಯವಾದ ವಿಡಿಯೋವನ್ನು ಪರಿಶೀಲಿಸಿದಾಗ ಟಿಕ್‌ಟಾಕ್‌ನಲ್ಲಿ Aleksey_nx ಎಂಬ ಬಳಕೆದಾರರಿಂದ ಮಾಡಿದ ಅನಿಮೇಷನ್ ವೀಡಿಯೊ ಎಂದು ತಿಳಿದುಬಂದಿದೆ. ಕಲಾವಿದರು ಇತ್ತೀಚೆಗೆ “UFO ಓವರ್ ದಿ ಮೂನ್” ವೀಡಿಯೊವನ್ನು ಮಾಡಿದ್ದಾರೆ, ಅದು ವೈರಲ್ ಆಗಿದೆ ಮತ್ತು ಉನ್ನತ ಪ್ರೊಫೈಲ್ ಬಳಕೆದಾರರು ಮತ್ತು ಮಾಧ್ಯಮ ಸಂಸ್ಥೆಗಳಿಂದ ಹಂಚಿಕೊಳ್ಳಲಾಗಿದೆ.

ಈ ವೈರಲ್ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ’ಹೋಕ್ಸ್‌ಐ’ ಹೆಸರಿನ ಫ್ಯಾಕ್ಟ್‌ಚೆಕ್ ಟ್ವಿಟರ್‌ ಹ್ಯಾಂಡಲ್‌ವೊಂದು  ಸ್ಪಷ್ಟಪಡಿಸಿದ್ದು,ಹಲವು ದಿನಗಳಿಂದ ಸಾಕಷ್ಟು ಜನ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಮೇ 17ರಂದು, ಚಂದ್ರ ಗ್ರಹಣ ಸಂಭವಿಸುವ ಕೆಲ ದಿನಗಳ ಮುನ್ನ, ಟಿಕ್‌ಟಾಕ್ ಕಲಾವಿದರೊಬ್ಬರು ಶೇರ್‌ ಮಾಡಿದ್ದರು ಎಂದು ತಿಳಿಸಿದೆ.

ವಾಸ್ತವವಾಗಿ ಈ ದೃಶ್ಯಾವಳಿಗಳನ್ನು ಯಾವ ಪ್ರದೇಶದಿಂದ ಚಿತ್ರೀಕರಿಸಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಮತ್ತು ಉಲ್ಲೇಖ ಮಾಡಲಾಗಿರುವ ಪ್ರದೇಶದಿಂದ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬುದು ಸುಳ್ಳು ಎಂದು ಹೋಕ್ಸ್‌ ಐ ತಿಳಿಸಿದೆ.

ಚಂದ್ರನು ಭೂಮಿಗೆ ಸರಾಸರಿ 2,38,000 ಮೈಲಿಗಳಷ್ಟು (3,82,900 ಕಿಮೀ) ದೂರವನ್ನು ಹೊಂದಿದ್ದು, ಹುಣ್ಣಿಮೆ ಅಥವಾ ರಕ್ತ ಚಂದ್ರ ಗ್ರಹಣ ಸಮಯದಲ್ಲಿ ಅನೇಕ ಛಾಯಾಗ್ರಾಹಕರು ಮುಂಭಾಗದಲ್ಲಿರುವ ದೂರದ ವಸ್ತುವಿನ ವಿರುದ್ಧ ಚಂದ್ರನನ್ನು ಜೂಮ್ ಮಾಡಿ ಸೆರೆಹಿಡಿಯುತ್ತಾರೆ, ಇದರಿಂದಾಗಿ ಕಟ್ಟಡಗಳು ಅಥವಾ ಮರಗಳಿಗೆ ಹೋಲಿಸಿದರೆ ಚಂದ್ರ ದೊಡ್ಡದಾಗಿ ಕಾಣುತ್ತದೆ. ಆದರೆ, ಪ್ರಸ್ತುತ ವೈರಲ್ ವೀಡಿಯೊದಲ್ಲಿನ ಕೋನವು ಸಮೀಪದ ವಸ್ತುಗಳಿಗೆ ಸಾಕಷ್ಟು ಹತ್ತಿರದಲ್ಲಿ ಇರುವಂತೆ ಕಾಣುತ್ತದೆ.

ಅಲ್ಲದೆ, ವೀಡಿಯೊವನ್ನು ರಷ್ಯಾ ಮತ್ತು ಕೆನಡಾದ ಪ್ರಾದೇಶಿಕ ಭಾಗಗಳ ನಡುವಿನ ಆರ್ಕ್ಟಿಕ್ ಪ್ರದೇಶದಿಂದ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತದೆ, ಅದರಲ್ಲಿ ಕಂಡುಬರುವ ಹುಲ್ಲುಗಾವಲು ಪ್ರದೇಶವು ಹಿಮಭರಿತ ಆರ್ಕ್ಟಿಕ್‌ಗಿಂತ ಭಿನ್ನವಾದ ಭೂಪ್ರದೇಶದಂತೆ ಕಂಡುಬರುತ್ತದೆ ಹಾಗಾಗಿ ಇದು ಗ್ರಾಫಿಕ್ಸ್ ಮತ್ತು ಎಡಿಟ್ ಮಾಡುವ ಮೂಲಕ ರಚಿಸಲಾದ ವಿಡಿಯೋ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಕೃಪೆ: ದಿ ಪ್ರಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತಮಿಳುನಾಡಿನಲ್ಲಿ ಮುಸ್ಲಿಂ ಹುಡುಗರಿಂದ ಪುಂಡಾಟಿಕೆ ನಡೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights