ಫ್ಯಾಕ್ಟ್‌ಚೆಕ್: ಆಲಿಯಾ ಭಟ್ ಮಗುವಿನ ಪೋಟೋ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ

ಬಾಲಿವುಡ್‌ನ ಜನಪ್ರಿಯ ತಾರಾ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಭಾನುವಾರ  ಆಲಿಯಾ ಭಟ್ ಅವರು ಮುಂಬೈನ ಎಚ್‌.ಎನ್‌ ರಿಲಯನ್ಸ್ ಆಸ್ಪತ್ರೆಯಲ್ಲಿ ಜನ್ಮವಿತ್ತಿದ್ದರು.

ಆಲಿಯ ಭಟ್ ಮತ್ತು ಮಗುವಿನ ಫೋಟೊ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಲಿಯಾ ಭಟ್ ಮತ್ತು ಮಗುವಿನ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಹಲವು ಫೋಟೊಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸೋ‍ಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ನಿಜವಾಗಿಯೂ ಆಲಿಯಾ ಭಟ್ ಮತ್ತು ಅಸಲಿ ಮಗುವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ಆಲಿಯಾ ಭಟ್ ಆಗ ತಾನೆ ಜನ್ಮ ನೀಡಿದ ತನ್ನ ಮಗುವಿನೊಂದಿಗೆ ಇರುವ ಕ್ಷಣಗಳ ಫೋಟೊಗಳು ಎಂದು ಹಂಚಿಕೊಳ್ಳಲಾಗಿರುವ ಪೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ‘ಇನ್‌ಸ್ಪಿರಲೈಸ್ಡ್’ ಬ್ಲಾಗ್‌ನಲ್ಲಿ ಪ್ರಕಟಿಸಲಾದ ಮೂಲ ಚಿತ್ರಗಳು  ಲಭ್ಯವಾಗಿದ್ದು, ಬ್ಲಾಗ್‌ನ ಲೇಖನದ ಪ್ರಕಾರ “ರಿಯೊ ಮತ್ತು ಸೋಲ್ ಅವರ ಜನ್ಮ ಕಥೆ (ಐಡೆಂಟಿಕಲ್ ಟ್ವಿನ್ಸ್!)” ಎಂಬ ಶೀರ್ಷಿಕೆಯನ್ನು ಹೊಂದಿರುವುದು ಕಂಡುಬಂದಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಅನುಭವದ ಕುರಿತು ಬ್ಲಾಗ್ ಪೋಸ್ಟ್‌ನಲ್ಲಿಅಲಿ ಮಫೂಸಿ ಬರೆದಿದ್ದು, “ಇಂದು ಬ್ಲಾಗ್‌ನಲ್ಲಿ, ನಾನು ನನ್ನ ಒಂದೇ ರೀತಿಯ ಅವಳಿ ಮಕ್ಕಳಾದ ರಿಯೊ ಮತ್ತು ಸೋಲ್‌ನ ಜನ್ಮ ಕಥೆಯನ್ನು ಹಂಚಿಕೊಳ್ಳುತ್ತಿದ್ದೇನೆ! ಈ ಹುಟ್ಟು ನನ್ನ ಇತರ ಮಕ್ಕಳ ಜನನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು,  ಸುಂದರ ಮತ್ತು ಅದ್ಭುತವಾಗಿತ್ತು. ನಿಮ್ಮ ಜನ್ಮ ಕಥೆ ಏನೇ ಇರಲಿ, ಅದು ಮಾಂತ್ರಿಕವಾಗಿದೆ!” ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ಫೋಟೋವನ್ನು ಮಾಫೂಸಿಯ ಶಿಶುಗಳಲ್ಲಿ ಒಂದನ್ನು ತೆಗೆದು ಕ್ರಾಪ್ ಮಾಡಲಾಗಿದೆ ಮತ್ತು ಆಲಿಯ ಭಟ್ ಅವರ ಮುಖವನ್ನು ಮಾಫೂಸಿಯ ಮುಖಕ್ಕೆ ಸೇರಿಸಿ ಹಂಚಿಕೊಳ್ಳಲಾಗಿದೆ. ವೈರಲ್ ಫೋಟೋದಲ್ಲಿ ಆಲಿಯಾ ಭಟ್  ಹಿಡಿದಿರುವ ಮಗು ಮಫೂಸಿಯ ಎಡಭಾಗದಲ್ಲಿರುವ ಮಗುವಿಗೆ ಹೊಂದಾಣಿಕೆಆಗುತ್ತದೆ. ಮಾಫೂಸಿಯ ಮತ್ತು ಆಲಿಯಾ ಭಟ್ ತೊಟ್ಟಿರುವ ಬಟ್ಟೆಗಳು ಕೂಡ ಒಂದೇ ಆಗಿವೆ.

ಇಲ್ಲಿಯವರೆಗೆ ಆಲಿಯಾ ಭಟ್ ಕುಟುಂಬವಾಗಲಿ ರಣಭೀರ್ ಕುಟುಂಬವಾಗಲಿ ತಾಯಿ ಮತ್ತು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆಯೇ? ಎಂದು ಪರಿಶೀಲಿಸಲು ಸರ್ಚ್ ಮಾಡಿದಾಗ ಅಂತಹ ಯಾವುದೇ ಪೋಟೋವನ್ನು ಹಂಚಿಕೊಂಡಿರುವುದು ಕಂಡುಬಂದಿಲ್ಲ.

 

View this post on Instagram

 

A post shared by Alia Bhatt 🤍☀️ (@aliaabhatt)

ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ ದಿನ ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ದೇವತೆ ಬಂದಿದ್ದಾರೆ ಎಂದು ಘೋಷಿಸುವ ಪ್ರಕಟಣೆಯನ್ನು ಹಂಚಿಕೊಂಡಿರುವುದು ಬಿಟ್ಟರೆ ಮತ್ಯಾವ ಫೋಟೋವನ್ನು ಹಂಚಿಕೊಂಡಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಆಲಿಯಾ ಮತ್ತು ಮಗುವಿನ ಫೋಟೋವನ್ನು ಎಡಿಟ್ ಮಾಡಿ ಬ್ಲಾಗ್‌ವೊಂದರಲ್ಲಿ ಪ್ರಕಟವಾದ ಫೋಟೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ.

ಕೃಪೆ: ನ್ಯೂಸ್‌ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಎಳೆನೀರನ್ನು ಬಿಸಿ ಮಾಡಿ ಕುಡಿದರೆ ಕ್ಯಾನ್ಸರ್ ಗುಣವಾಗುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights