ಫ್ಯಾಕ್ಟ್‌ಚೆಕ್: ಎಳೆನೀರನ್ನು ಬಿಸಿ ಮಾಡಿ ಕುಡಿದರೆ ಕ್ಯಾನ್ಸರ್ ಗುಣವಾಗುವುದೇ?

ಕ್ಯಾನ್ಸರ್ ಎಂದರೆ ಯಾರಿಗೆ ತಾನೆ ಭಯವಾಗುವುದಿಲ್ಲ ಹೇಳಿ ? ಹಾಗೆಯೇ ಕ್ಯಾನ್ಸರ್‌ಗೆ ಔಷದಿ ಲಭ್ಯವಿದೆ, ಅದರಲ್ಲೂ ಮನೆಮದ್ದಿನಿಂದ ಕ್ಯಾನ್ಸರ್‌ಅನ್ನು ಗುಣಪಡಿಸಬಹುದು ಎಂದಾದರೆ ಅದಕ್ಕಿಂತ ಮಿಗಿಲಾಗಿದ್ದು ಬೇರೇನಿದೆ ? ಮನೆಮದ್ದಿನಿಂದ ಕ್ಯಾನ್ಸರ್‌ನಿಂದ ಗುಣಪಡಿಸಬಹುದು ಎನ್ನುವ  ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಾಗುತ್ತಿದೆ.

This message that is being forwarded in Whatsapp groups is false.

ಪ್ರತಿದಿನ ಎಳ ನೀರನ್ನು ನೀರನ್ನು ಕಾಯಿಸಿ ಕುಡಿಯುವುದರಿಂದ ದೇಹದಲ್ಲಿನ ಕ್ಯಾನ್ಸರ್ ಕೋಶಗಳು ನಾಶವಾಗುತ್ತವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದು ಪ್ರಸಾರವಾಗುತ್ತಿದ್ದು. ಈ ಪ್ರತಿಪಾದನೆಯನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯರಾದ ಡಾ.ರಾಜೇಂದ್ರ ಬಡ್ವೆ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿಯನ್ನು ಪರಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2019 ರಲ್ಲಿ ಪ್ರಕಟವಾದ ಕೆಲವು ಸುದ್ದಿ ವರದಿಗಳು ಲಭ್ಯವಾಗಿವೆ. ಟೈಮ್ಸ್ ಆಫ್ ಇಂಡಿಯಾದ  ಲೇಖನದ ಪ್ರಕಾರ, ಟಾಟಾ ಮೆಮೋರಿಯಲ್ ಹಾಸ್ಪಿಟಲ್ ನ  ನಿರ್ದೇಶಕ ಡಾ. ರಾಜೇಂದ್ರ ಬದ್ವೆ ಕ್ಯಾನ್ಸರ್ ಚಿಕಿತ್ಸೆಗೆ ಸೂಚಿಸಿದ್ದಾರೆ ಎನ್ನಲಾದ ಬಿಸಿ ಎಳನೀರ ಸೇವನೆ ಎಂಬ ಸುದ್ದಿ ಸುಳ್ಳು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸಂದೇಶಕ್ಕೂ, ಟಾಟಾ ಮೆಮೋರಿಯಲ್ ಹಾಸ್ಪಿಟಲ್‌ನ ವೈದ್ಯ ಡಾ. ರಾಜೇಂದ್ರ ಬದ್ವೆ ಅವರಿಗೂ ಸಂಬಂಧವಿಲ್ಲ ಮತ್ತು ಅಂತಹ ಸಲಹೆಗಳನ್ನು ಅವರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಬಿಸಿ ತೆಂಗಿನ ನೀರು ಯಾವುದೇ ರೀತಿಯ ಕ್ಯಾನ್ಸರ್ಗೆ ಚಿಕಿತ್ಸೆ ನೀಡುತ್ತದೆ ಎಂದು ಸೂಚಿಸಲು ಯಾವುದೇ ಡೇಟಾ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಕಳುಹಿಸಲಾದ ಇಂತಹ ಸುಳ್ಳು ಮತ್ತು ಹಾನಿಕಾರಕ ಸಂದೇಶಗಳಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡದಂತೆ ವಿನಂತಿಸಲಾಗಿದೆ, ”ಬದ್ವೆ ಹೇಳಿದ್ದಾರೆ.

ಬಿಸಿ ತೆಂಗಿನ ನೀರು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂಬ ಸಂದೇಶಗಳು ಸುಮಾರು 2019 ರಿಂದಲೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು. ಹಿಂದೂಸ್ತಾನ್ ಟೈಮ್ಸ್ (Hindustan Times) ಮತ್ತು ಟೈಮ್ಸ್ ಆಫ್ ಇಂಡಿಯಾ (Times of India) ಈ ಸಂಬಂಧ ವರದಿಗಳನ್ನು ಪ್ರಕಟಿಸಿವೆ. ಇನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ. ಪ್ರೊ.ರಾಜೇಂದ್ರ ಬಡ್ವೆ ಅವರು ಈ ಸಂಬಂಧ ಮೇ 19, 2019ರಂದು ಪತ್ರಿಕಾ ಪ್ರಕಟಣೆಯನ್ನೂ ನೀಡಿದ್ದಾರೆ. ಬಿಸಿ ತೆಂಗಿನ ನೀರನ್ನು ಕ್ಯಾನ್ಸರ್‌ಗೆ ಚಿಕಿತ್ಸೆಗೆ ಅನುಮೋದಿಸಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಿ ಹಿಂದೂ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟೊಂಡಿದ್ದು ವೈರಲ್ ಸಂದೇಶಕ್ಕೂ ಟಾಟಾ ಸ್ಮಾರಕ ಆಸ್ಪತ್ರೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದು. ಈ ಮಾಹಿತಿ ಸುಳ್ಳು ಮತ್ತು ಕ್ಯಾನ್ಸರ್‌ಗೆ ಬಿಸಿ ತೆಂಗಿನ ನೀರು ಯಾವುದೇ ರೀತಿಯ ಚಿಕಿತ್ಸೆಯನ್ನು ನೀಡುತ್ತದೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ವರದಿ ಮಾಡಿದೆ.

ಕೃಪೆ: ದಿ ಹಿಂದೂ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಬೆಂಬಲಿಗ ಮೃತಪಟ್ಟಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights