ಜನರ ಹೃದಯದಲ್ಲಿ ಬದುಕಬೇಕು; ಪೋಸ್ಟರ್‌ಗಳಲ್ಲಿ ಅಲ್ಲ: ಹಿರಿಯ ಬಿಜೆಪಿ ನಾಯಕಿ ವಸುಂಧರಾ ರಾಜೇ

ರಾಜಸ್ಥಾನ ಬಿಜೆಪಿಯಲ್ಲಿ ಆಂತರಿಕ ಬೇಗುಧಿ ಹೊಗೆಯಾಡುತ್ತಲೇ ಇದೆ. ಇತ್ತೇಚೆಗೆ ರಾಜ್ಯ ಬಿಜೆಪಿ ಹಾಕಿದ್ದ ಹಲವಾರು ಪೋಸ್ಟರ್‌ಗಳಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಅವರ ಫೋಟೋ ಕಾಣಿಸಿಲ್ಲ. ಹೀಗಾಗಿ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನಗೆ ಪೋಸ್ಟರ್‌ ರಾಜಕೀಯದಲ್ಲಿ ನಂಬಿಕೆ ಇಲ್ಲ, ಜನರ ಹೃದಯದಲ್ಲಿ ಸ್ಥಾನ ಪಡೆಯಲು ಬಯಸುತ್ತೇನೆ ಎಂದು ಹೇಳೀದ್ದಾರೆ.

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ರಾಜೇ, ಜಲಾವರ್-ಬಾರನ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ನಾನು ರಾಜಕೀಯಕ್ಕೆ ಬಂದಾಗ, ರಾಜಮಾತಾಜಿ (ವಿಜಯ ರಾಜೇ ಸಿಂಧಿಯಾ) ಅವರು ನನಗೆ ಐದು ಬೆರಳುಗಳು ಎಂದಿಗೂ ಸಮಾನವಾರುವುದಿಲ್ಲ. ನೀವು ಹಳ್ಳಿಗಳಿಗೆ ಭೇಟಿ ನೀಡಿದಾಗ ವಿವಿಧ ರೀತಿಯ ಜನರನ್ನು ಕುಟುಂಬದಂತೆ ಪರಸ್ಪರ ಪ್ರೀತಿಯಿಂದ ಒಗ್ಗೂಡಿಸಬೇಕು ಎಂದು ನನಗೆ ಹೇಳಿದ್ದರು” ಜನರು ನೋವಿನಲ್ಲಿರುವಾಗ, ದುಃಖದಲ್ಲಿದ್ದಾಗ, ಅವರಿಗೆ ನೆರವು ನೀಡಬೇಕಾಗಿದೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ಪೋಸ್ಟರ್ ಜಟಾಪಟಿ ನಡೆಯುತ್ತಿರುವ ಬಗ್ಗೆ ಮಾತನಾಡಿದ ಅವರು, ತಾವು ಚುನಾವಣೆಯಲ್ಲಿ ಗೆದ್ದ ಬಳಿಕ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ತಾವು ಜೈಪುರಕ್ಕೆ ತೆರಳಿದ್ದ ವೇಳೆ ಹಲವಾರು ಬೃಹತ್‌ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ನಾನು ಆ ಪೋಸ್ಟರ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಹೇಳಿದ್ದೆ.

ಇದನ್ನೂ ಓದಿ: ಯೋಗೀಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು; ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧ!

ನಾನು ಆ ಸಮಯದಲ್ಲೇ ಪೋಸ್ಟ್‌fಗಳನ್ನು ತೆಗೆಯುವಂತೆ ಹೇಳಿದ್ದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಇನ್ನು ಈಗ ಅವುಗಳನ್ನು ಬಯಸುತ್ತೇನೆಯೇ ಎಂದು ಹೇಳಿದ್ದಾರೆ.

“ನಾನು ಜನರ ಹೃದಯಗಳಲ್ಲಿ ಜೀವಿಸಬೇಕು. ಜನರು ನನ್ನನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತಹ ಕೆಲಸಗಳನ್ನು ಮಾಡಬೇಕು. ನಾನು ಜನರ ಮನಸ್ಸನ್ನು ಗೆದ್ದಾಗ, ಅವರು ನನ್ನು ಪ್ರೀತಿಸುತ್ತಾರೆ. ನಾನು ಅವರ ಹೃದಯದಲ್ಲಿ ನೆಲೆಸಲು ದಾರಿ ಹುಡುಕುತ್ತಿದ್ದೇನೆ” ಎಂದು ರಾಜೇ ಹೇಳಿದ್ದಾರೆ.

“ಇದಕ್ಕಿಂತ ದೊಡ್ಡ ಭಾಗ್ಯ ನನಗೆ ಏನಿದೆ ಮತ್ತು ಈ ಪೋಸ್ಟರ್‌ಗಳಿಂದ ಏನು ಪ್ರಯೋಜನ” ಎಂದು ರಾಜೇ ಹೇಳಿದರು.

ಎರಡು ತಿಂಗಳ ಹಿಂದೆ ಜೈಪುರದಲ್ಲಿ ಅವರ ಪಕ್ಷದ ಪೋಸ್ಟರ್‌ಗಳಲ್ಲಿ ರಾಜೇ ಅವರ ಪೋಟೋ ಹಾಕದೇ ಇದ್ದಾಗ ರಾಜಸ್ಥಾನದ ಬಿಜೆಪಿ ಕಾರ್ಯಕರ್ತರು ಮತ್ತು ರಾಜೇ ಅವರ ಬೆಂಬಲಿಗರ ನಡುವೆ ಮಾತಿನ ಸಮರ ನಡೆದಿತ್ತು.

ಇದನ್ನೂ ಓದಿ: ಗೋವಾದಲ್ಲಿ 50% ಪದವೀಧರ ಯುವಜನರು ನಿರುದ್ಯೋಗಿಗಳಾಗಿದ್ದಾರೆ: ಸಿಎಂ ಪ್ರಮೋದ್‌ ಸಾವಂತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights