ಕೇರಳದಲ್ಲಿ ಸೋಂಕಿತರ ಸಂಖ್ಯೆ 16 ಕ್ಕೆ ಇಳಿಕೆ: ಯಶಸ್ವಿ ಕಾರ್ಯಾಚರಣೆಯ ನಗೆಬೀರಿದ ಕೇರಳ

100 ದಿನಗಳ ನಂತರ ಕೇರಳವು ಕೊರೊನಾ ವೈರಸ್ ರೇಖೆ ಚಪ್ಪಟೆಯಾಗಿ ಹೋಗುತ್ತಿದೆ ಎಂದು ಕೇರಳ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಟ್ವೀಟ್ ಮಾಡಿದ್ದಾರೆ. ಕೇರಳದಾದ್ಯಂತ ಆಸ್ಪತ್ರೆಗಳಲ್ಲಿ ಕೇವಲ 16 ಸಕ್ರಿಯ ಕೊರೊನಾ ಪ್ರಕರಣಗಳು ಮಾತ್ರ ಇದೆ ಎಂದು ಅವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ಕೊರೊನಾ ರಾಯಭಾರಿ ಡಾ. ಡೇವಿಡ್ ನಬರೋ ಜುಲೈ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೊನಾ ವಕ್ರರೇಖೆ ಸಮತಟ್ಟಾಗುತ್ತದೆ ಎಂದು ಹೇಳಿದ ಕೆಲವೇ ಗಂಟೆಗಳ ಅಂರದಲ್ಲಿ ಕೇರಳ ಸಚಿವರು ಟ್ವೀಟ್ ಬಂದಿದೆ.

ಭಾರತದಲ್ಲಿ ಮೊದಲ ಮೂರು ಕೊರೊನಾ ವೈರಸ್ ಪ್ರಕರಣಗಳು ಕೇರಳದಿಂದ ವರದಿಯಾಗಿತ್ತು. ಕೇರಳದಿಂದ ಇದುವರೆಗೂ 503  ಪ್ರಕರಣಗಳನ್ನು ವರದಿಯಾಗಿದೆ, ಅದರಲ್ಲಿ 484 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೇವಲ ನಾಲ್ಕು ಸಾವುಗಳು ದಾಖಲಾಗಿವೆ.

ವಿಷೇಷವೆಂದರೆ ಈ ತಿಂಗಳ ಮೊದಲ ವಾರದಲ್ಲಿ ಕೇರಳದಲ್ಲಿ ಕೇವಲ ಐದು ಹೊಸ ಪ್ರಕರಣಗಳು ವರದಿಯಾಗಿದೆ.

ಸಚಿವ ಥಾಮಸ್ ಐಸಾಕ್ ಹಂಚಿಕೊಂಡ ಲೈನ್ ಗ್ರಾಫ್‌ನಲ್ಲಿ, ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಹಳದಿ ಬಣ್ಣದಲ್ಲಿ ತೋರಿಸಲಾಗಿದೆ ಮತ್ತು ಈ ರೇಖೆಯು ಏಪ್ರಿಲ್ 9 ರಿಂದ ಕೆಳಕ್ಕೆ ಇಳಿಯುತ್ತಿದೆ ಎಂದು ತೋರಿಸಲಾಗಿದೆ.

keralaflatteningcurve

ಇದಕ್ಕೆ ತದ್ವಿರುದ್ಧವಾಗಿ, ವೈರಸ್‌ನಿಂದ ಚೇತರಿಸಿಕೊಂಡ ಜನರನ್ನು ಪ್ರತಿನಿಧಿಸುವ ರೇಖೆ (ಹಸಿರು ಬಣ್ಣ) ಅದೇ ದಿನಾಂಕದಿಂದ ಸಮಾನವಾಗಿ ಮೇಲಕ್ಕೆ ಏರುತ್ತದೆ.

ಕೊರೊನಾ ವಿರುದ್ದ ಹೋರಾಡಲು ಕೇರಳವೂ ಶಂಕಿತ ಪ್ರಕರಣಗಳಿಗೆ 28 ​​ದಿನಗಳ ಸಂಪರ್ಕತಡೆಯ ಅವಧಿಯನ್ನು ನಿರ್ಧಾರ ಮಾಡಿತ್ತು; ರಾಷ್ಟ್ರವ್ಯಾಪಿ ಈ ಅವಧಿ 14 ದಿನಗಳಾಗಿದೆ. ಅಲ್ಲದೆ ಕಳೆದ ತಿಂಗಳು ದಕ್ಷಿಣ ಕೊರಿಯಾದಿಂದ ಪ್ರೇರಿತವಾಗಿ ಕೇರಳವು ಸಾಮೂಹಿಕ ಮಾದರಿಗಳನ್ನು ಸಂಗ್ರಹಿಸಲು ವಾಕ್-ಇನ್ ಕಿಯೋಸ್ಕ್ಗಳನ್ನು ಬಳಸಿದ ಮೊದಲ ರಾಜ್ಯವಾಗಿತ್ತು.

ಇದನ್ನೂ ಓದಿ: ಕೊರೊನ ಗೆದ್ದು ಬಂದ 52 ವರ್ಷದ ಸಕ್ಕರೆ ಖಾಯಿಲೆ ಇದ್ದ ಸಾಮಾಜಿಕ ಕಾರ್ಯಕರ್ತ; ಹೊಸ ಭರವಸೆ

ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ 60,000 ಕ್ಕೆ ತಲುಪಿದ್ದು, ಸುಮಾರು 2,000 ಜನರು ಸಾವಿಗೀಡಾಗಿದ್ದಾರೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಂತೆ ಕಳೆದ 24 ಗಂಟೆಗಳಲ್ಲಿ 3,320 ಹೊಸ ಪ್ರಕರಣಗಳು ಮತ್ತು 95 ಸಾವುಗಳು ವರದಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights