ಸಿಹಿ ಸುದ್ದಿ : ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಬಳಕೆಗೆ ಡಿಸಿಜಿಐ ಅನುಮತಿ..!

ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಬದ್ದಿದ್ದು, ಇಂದು ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ಸಿಕ್ಕಿದೆ.

ಹೌದು… ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಜಿಐ ಅಧ್ಯಕ್ಷ ವಿ.ಜಿ ಸೋಮಾನಿ, ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಬಳಕೆಗೆ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ. ಎರಡು ಲಸಿಕೆಗಳಿಗೆ ಅಧಿಕೃತ ಅನುಮತಿ ಕೊಟ್ಟಿದ್ದು ತುರ್ತು ಸಂದರ್ಭದಲ್ಲಿ ಈ ಎರಡು ಲಸಿಕೆಗಳನ್ನು ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.

ಈ ಎರಡು ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು ತಯಾರಿಕೆ ವೇಳೆ ಯಶಸ್ವಿಯಾಗಿವೆ. ತಯಾರಿಕೆ ಹಂತದಲ್ಲಿ ನಾನಾ ಪರೀಕ್ಷೆಗೆ ಲಸಿಕೆಯನ್ನು ಒಳಪಡಿಸಲಾಗಿತ್ತು. ಪ್ರಯೋಗ ಕೂಡ ಮಾಡಲಾಗಿತ್ತು. ಇದರಲ್ಲಿ ಎರಡು ಲಸಿಕೆಗಳು ಎಲ್ಲಾ ಹಂತದಲ್ಲಿ ಬಹುತೇಕ ಯಶಸ್ವಿಯಾಗಿವೆ. ಹೀಗಾಗಿ 2 ಕಂಪನಿಗಳ ಲಸಿಕೆಗಳನ್ನು ತುರ್ತು ಸಂದರ್ಭದ ಬಳಕೆಗೆ ಅನುಮತಿ ನೀಡಲಾಗಿದೆ.

ಈ ಮೂಲಕ ಕೊರೊನಾ ಸಂಜೀವಿನಿ ದೇಶಾದ್ಯಂತ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights