ಮರ್ಯಾದಾ ಹತ್ಯೆ: ಅಂತರ್ಜಾತಿ ವಿವಾಹಕ್ಕೆ ವಿರೋಧ; ತಂಗಿಯ ಪತಿಯನ್ನೇ ಕೊಂದ ಸೋದರರು

ಹರಿಯಾಣದಲ್ಲಿ ಕಳೆದ ಮೂರು ದಿಗಳಲ್ಲಿ ಎರಡನೇ ಮರ್ಯಾದಾ ಹತ್ಯಾ ಪ್ರಕರಣ ದಾಖಲಾಗಿದೆ. ಅಂತರ್ಜಾತಿ ವಿವಾಹದ ಕಾರಣದಿಂದಾಗಿ 23 ವರ್ಷದ ನೀರಜ್‌ ಎಂಬಾತತನ್ನು ಆತನ ಪತ್ನಿಯ ಸಹೋದರರು ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ಶುಕ್ರವಾರ ನಡೆದಿದೆ.

ಪ್ರೀತಿಸಿ ಮದುವೆಯಾಗಿದ್ದ ತಮ್ಮ ಸೋದರಿ ಅಂತರ್ಜಾತಿ ವಿವಾಹವಾಗುವುದನ್ನು ಒಪ್ಪದಿದ್ದ ಆಕೆಯ ಸೋದರರು ಆಕೆಯ ಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಪಾಣಿಪತ್‌ನ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಓಡಿಹೋಗುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆಳೆಯಾಗಿದೆ.

ಆರೋಪಿಗಳು ನೀರಜ್ ನನ್ನು ತಾವಿರುವ ಸ್ಥಳಕ್ಕೆ ಬರಲು ಹೇಳಿದ್ದರು. ಆತ ಮನೆಯಿಂದ ಹೋದ ನಂತರ ತಮ್ಮ ಸೋದರಿಗೆ ಕರೆ ಮಾಡಿನೀನು ಸದ್ಯದಲ್ಲಿಯೇ ಕಣ್ಣೀರು ಹಾಕುತ್ತೀಯ ನೋಡುತ್ತಿರು ಎಂದು ಹೇಳಿದ್ದರು. ಆಕೆಯನ್ನು ನನ್ನ ತಮ್ಮ ಮದುವೆಯಾದಾಗಿನಿಂದ ಆಕೆಯ ಸೋದರರು ನನ್ನ ತಮ್ಮನಿಗೆ ಬೆದರಿಕೆ ಹಾಕುತ್ತಲೇ ಇದ್ದರು. ಪೊಲೀಸರಿಗೆ ನಾವು ದೂರು ನೀಡಿ ರಕ್ಷಣೆ ಕೊಡಿ ಎಂದು ಕೇಳಿದ್ದೆವು. ಆದರೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಲೆ ಮಾಡುತ್ತೇವೆ ಎಂದು ಇನ್ನೂ ಬೆದರಿಕೆ ಹಾಕುತ್ತಿದ್ದಾರೆ ಎಂದು ನೀರಜ್ ನ ಅಣ್ಣ ಜಗದೀಶ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ: ಗರ್ಭಿಣಿಯಾಗಿದ್ದ 14 ವರ್ಷದ ಬಾಲಕಿಯನ್ನು ಹತ್ಯೆಗೈದ ತಂದೆ ಮತ್ತು ಮಗ

ಒಂದೂವರೆ ತಿಂಗಳ ಹಿಂದಷ್ಟೇ ನೀರಜ್ ನ ಮದುವೆಯಾಗಿತ್ತು.  ಯುವಕ ಮತ್ತು ಯುವತಿಯ ಮನೆಯವರು ನಡುವೆ ಊರಿನ ಗ್ರಾಮಸ್ಥರು ಪಂಚಾಯತಿ ನಡೆಸಿ ಒಪ್ಪಿಗೆ ಬರವಣಿಗೆ ಮೂಲಕ ಮದುವೆಗೆ ಒಪ್ಪಿಗೆ ನೀಡಿದ್ದರು. ಆದರೆ ಯುವತಿಯ ಸೋದರರು ಅನುಮತಿ ಕೊಟ್ಟಿರಲಿಲ್ಲ. ಅವರು ನೀರಜ್‌ಗೆ ಬೆದರಿಕೆ ಹಾಕುತ್ತಲೇ ಇದ್ದರು ಎಂದು ದೂರು ನೀಡಲಾಗಿದೆ ಎಂದು ಡಿಎಸ್‌ಪಿ ಸತೀಶ್ ಕುಮಾರ್ ವಾಟ್ಸ್ ತಿಳಿಸಿದ್ದಾರೆ.

ಪೊಲೀಸರು ಈ ಸಂಬಂಧ ಕೇಸು ದಾಖಲಿಸಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆದರೆ, ಇನ್ನೂ ನೀರಜ್ ನನ್ನು ಕೊಲೆ ಮಾಡಿದವರನ್ನು ಇನ್ನೂ ಬಂಧಿಸಿಲ್ಲ.

ಈ ಘಟನೆಗೂ ಮುನ್ನ, ರೋಹ್ಟಕ್ ನಲ್ಲಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಯುವತಿಯ ಸೋದರ ಮಾವ ಆಕೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿತ್ತು.


ಇದನ್ನೂ ಓದಿ: ಮಾಗಡಿ ಯುವತಿಯದ್ದು ಅತ್ಯಾಚಾರ/ಕೊಲೆಯಲ್ಲ; ಮರ್ಯಾದಾ ಹತ್ಯೆ: ತಂದೆ-ಮಗನ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights