ಎಸ್‌ಆರೆಚ್ ವಿರುದ್ಧ ಗೆದ್ದು ಸತತ ಸೋಲಿನ ಸುಳಿಯಿಂದ ಹೊರಬಂದ ಸಿಎಸ್ಕೆ ತಂಡ!

ಎಸ್‌ಆರೆಚ್ ವಿರುದ್ಧ ಗೆದ್ದು ಸತತ ಸೋಲಿನ ಸುಳಿಯಿಂದ ಹೊರಬರುವಲ್ಲಿ ಯಶಸ್ವಿಯಾದ ಸಿಎಸ್ಕೆ ತಂಡ ಅಂಕಪಟ್ಟಿಯಲ್ಲಿ ಮಾತ್ರ ಹೈದರಾಬಾದ್‌ಗಿಂತ ಹಿಂದುಳಿದಿದೆ. ಮಂಗಳವಾರದ ನಡೆದ ಪಂದ್ಯದಲ್ಲಿ ಧೊನಿ ಮುಂದಾಳತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಸನ್ ರೈಸರ್‍ಸ್ ಹೈದರಾಬಾದಿನ ಮೇಲೆ 20 ರನ್ನುಗಳ ಅರ್ಹ ಜಯ ಸಂಪಾದಿಸಿತು.

ಆದರೆ ಅದರ ಒಟ್ಟಾರೆ ರನ್ ಸರಾಸರಿ ಇನ್ನೂ ಕಡಿಮೆಯಿದ್ದು 2 ಅಂಕ ಸಂಪಾದಿಸಿದರೂ ಅಂಕ ಪಟ್ಟಿಯಲ್ಲಿ ಹೈದರಾಬಾದಿಗಿಂತ ಮುನ್ನಡೆಯಲು ಇನ್ನೂ ಸಾಧ್ಯವಾಗಿಲ್ಲ. ಟಾಸ್ ಗೆದ್ದು ಅಪರೂಪಕ್ಕೆ ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರುಗಳಲ್ಲಿ 167 (7 ವಿಕೆಟ್) ರನ್ ಗಳಿಸಿತು. ಜಯಕ್ಕೆ 168 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ 147 (8 ವಿಕೆಟ್) ರನ್ನಗುಳಿಗೆ ಉಸಿರು ಕಳೆದುಕೊಂಡು ಸೋತು ಶರಣಾಯಿತು.

ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ (57) ಮತ್ತು ಜಾನಿ ಬೇರ್‌ಸ್ಟೋ (23) ರನ್ನು ಗಳಿಸಿದ್ದೇ ಹೆಚ್ಚಾಯಿತು. ಕರ್ಣ್ ಶರ್ಮ ಹಾಗೂ ಬ್ರಾವೊ ತಲಾ 2 ವಿಕೆಟ್ ಕಿತ್ತರು ಇದಕ್ಕೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ಪರ ಸ್ಯಾಮ್ ಕರನ್ 31, ಶೇನ್ ವ್ಯಾಟ್ಸನ್ 42, ಅಂಬಟಿ ರಾಯುಡು 31, ಧೋನಿ 21 ಹಾಗೂ ರವೀಂದ್ರ ಜಡೇಜಾ 25 ರನ್ ಗಳಿಸಿದರು. ಸಂದೀಪ್, ಖಲೀಲ್ ಹಾಗೂ ನಟರಾಜನ್‌ಗೆ ತಲಾ 2 ವಿಕೆಟ್ ಬಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.