ಮರ್ಯಾದಾ ಹತ್ಯೆ: ಗರ್ಭಿಣಿಯಾಗಿದ್ದ 14 ವರ್ಷದ ಬಾಲಕಿಯನ್ನು ಹತ್ಯೆಗೈದ ತಂದೆ ಮತ್ತು ಮಗ

ಗರ್ಭಿಣಿಯಾಗಿದ್ದ 14 ವ‍ರ್ಷದ ಬಾಲಕಿಯನ್ನು ಆಕೆಯ ತಂದೆ ಮತ್ತು ಸಹೋದರನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಶಹಜಹಾನ್ ಪುರದ ಸಿದೌಲಿ ಪ್ರದೇಶದ ದುಲ್ಹಾಪುರ್ ಗ್ರಾಮದ ಹೊರ ವಲಯದಲ್ಲಿ ದಲಿತ ಗರ್ಭಿಣಿ ಬಾಲಕಿಯ ದೇಹ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಮರ್ಯಾದಾ ಹತ್ಯೆಯಾಗಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಬಾಲಕಿಯು ಗರ್ಭಿಣಿಯಾಗಲು ಕಾರಣ ಯಾರು ಎಂದು ಆಕೆಯ ತಂದೆ ಮತ್ತು ಸಹೋದರ ಪ್ರಶ್ನಿಸಿದ್ದು, ಆಕೆ ಉತ್ತರಿಸಲು ನಿರಾಕರಿಸಿದ್ದಾಳೆ. ಬಾಲಕಿ ಉತ್ತರಿಸದ ಕಾರಣ ಕೋಪಗೊಂಡ ತಂದೆ ಮತ್ತು ಆತನ ಹಿರಿಯ ಮಗ ಇಬ್ಬರೂ ಸೇರಿ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಆರು ತಿಂಗಳ ಗರ್ಭಿಣಿ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದು ಬಂದಿದೆ. ಬಾಲಕಿ ಪರಿಚಿತ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದುದರಿಂದ ಗರ್ಭಿಣೆಯಾಗಿದ್ದಳು ಎಂದು ಹೇಳಾಗಿದೆ. ಆಕೆಯ ಪೋಷಕರು ಈ ಬಗ್ಗೆ ವಿಚಾರಿಸದಾಗ ಬಾಲಕಿ ಉತ್ತರಿಸಲು ನಿರಾಕರಿಸಿದ್ದಾಳೆ. ಹೀಗಾಗಿ ಕೋಪಗೊಂಡ ಆಕೆ ಹಿರಿಯ ಸಹೋದರ ಮತ್ತು ತಂದೆ ಸೆಪ್ಟೆಂಬರ್ 24ರಂದು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಶಹಜಹಾನ್ ಪುರ ಪೊಲೀಸ್ ಅಧಿಕಾರಿ ಎಸ್. ಆನಂದ್ ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 302, 201ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೃತ ಬಾಲಕಿಯ ತಂದೆ ಮತ್ತು ಅಣ್ಣನನ್ನು ವಶಕ್ಕೆ ಪಡೆಯಲಾಗಿದೆ. ಮಾತ್ರವಲ್ಲ ಬಾಲಕಿ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Fact Check: ಠಾಕೂರರಿಗೆ ರಕ್ತ ಬಿಸಿ ಇರುತ್ತದೆ ಹಾಗಾಗಿ ತಪ್ಪುಗಳು (ಅತ್ಯಾಚಾರ) ಆಗೋದು ಸಹಜ ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆಯೇ??

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights