ಮೋದಿಯವರೇ ಸುರಂಗದಲ್ಲಿ ಕೈ ಬೀಸುವುದನ್ನು ನಿಲ್ಲಿಸಿ; ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ: ರಾಹುಲ್‌ಗಾಂಧಿ

‘ಅಟಲ್‍ ಸುರಂಗದಲ್ಲಿ’ ಖಾಲಿ ರಸ್ತೆಗೆ ಕೈಬೀಸಿ ಫೋಸು ಕೊಟ್ಟ ಪ್ರಧಾನಿ ಮೋದಿಯವರವನ್ನು ರಾಹುಲ್‌ಗಾಂಧಿ ಟೀಕಿಸಿದ್ದಾರೆ. ಅಲ್ಲದೆ, ದೇಶದ ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

’ಪ್ರಧಾನಿಯವರೇ ಸುರಂಗದಲ್ಲಿ ಮಾತ್ರ ಕೈ ಬೀಸುವುದನ್ನು ನಿಲ್ಲಿಸಿ. ಗಂಭೀರ ಸಮಸ್ಯೆಗಳ ಬಗ್ಗೆ ಮೌನ ಮುರಿದು ಮಾತನಾಡಿ. ದೇಶದ ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ. ದೇಶ ನಿಮಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದೆ’ ಎಂದು ರಾಹುಲ್‍ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಹತ್ರಾಸ್ ಸಾಮೂಹಿಕ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗಿದ್ದಾರೆ. ಇದೂವರೆಗೂ ಆ ಬಗ್ಗೆ ಯಾವುದೇ ಮಾತುಗಳನ್ನಾಗಿಲ್ಲ. ಹಾಗಾಗಿ ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿರುವ ಘಟನೆ ಬಗ್ಗೆ ಮೋದಿ ಮಾತನಾಡದೇ ಇರುವುದಕ್ಕೆ ರಾಹುಲ್‌ಗಾಂಧಿ ಕಿಡಿಕಾರಿದ್ದಾರೆ.

ಈ ಹಿಂದೆ ಲಡಾಖ್‌ ಗಡಿಯಲ್ಲಿ ಉದ್ವಿಘ್ನತೆ ಸೃಷಿಯಾಗಿದ್ದಾಗ, ಚೀನಾ ಸೇನೆ ಭಾರತದ ಭೂಪ್ರದೇಶವನ್ನು ಅತಿಕ್ರಮಣ ಮಾಡಿತ್ತು. ಆ ಸಂದರ್ಭದಲ್ಲಿಯೂ ಮಾತನಾಡದ ಮೋದಿಯವರು, ಯಾರೂ ಭಾರತದೊಳಗೆ ಪ್ರವೇಶಸಿಲ್ಲ. ಒಂದಿಂಚೂ ಭೂಮಿಯನ್ನು ಅತಿಕ್ರಮಿಸಿಕೊಂಡಿಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.

ಆ ಸಂದರ್ಭದಲ್ಲಿಯೂ ಪ್ರಧಾನಿಯ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದ ರಾಹುಲ್‌ಗಾಂಧಿ, ಪ್ರಧಾನಿ ಚೀನಾಕ್ಕೆ ಹೆದರುತ್ತಿದ್ದಾರೆ. ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಶಾಹಿನ್‌ಬಾಗ್‌ನಂತಹ ಸ್ಥಳಗಳನ್ನು ಅನಿರ್ಧಿಷ್ಠಾವಧಿ ಪ್ರತಿಭಟನೆಗೆ ಬಳಸಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights