ರಾಜ್ಯದಲ್ಲಿ ಜೂನ್​ 14ರವರೆಗೆ ಲಾಕ್​ಡೌನ್ ವಿಸ್ತರಣೆ; ಮತ್ತೆ ಒಂದು ವಾರ ಎಲ್ಲವೂ ಬಂದ್‌!

ಕರ್ನಾಟಕದಲ್ಲಿ ಈಗಾಗಲೇ ಜೂನ್​ 7ರವರೆಗೆ ಜಾರಿಯಲ್ಲಿದ್ದ ಲಾಕ್​ಡೌನ್​ನ್ನು ಜೂನ್ 14ರವರೆಗೆ ವಿಸ್ತರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಗುರುವಾರ ಸಂಜೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕೊರೋನಾ ಸೋಂಕು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕಾರಣ ಲಾಕ್​ಡೌನ್​ ಮುಂದುವರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಸೋಂಕು ಮತ್ತಷ್ಟು ಉಲ್ಭಣಗೊಳ್ಳುವುದನ್ನು ತಡೆಯುವ ಉದ್ದೇಶಿದಿಂದ ಅನ್‌ಲಾಕ್‌ ಪ್ರಕ್ರಿಯೆಯನ್ನು ಆರಂಭಿಸುವುದಿಲ್ಲ. ಸದ್ಯ ಲಾಕ್‌ಡೌನ್‌ ಮತ್ತೊಂದು ವಾರ ಮುಂದುವರೆಯಲಿದೆ. ಕೆಲವು ಸಡಿಲಿಕೆಗಳನ್ನು ನೀಡಲಾಗಿದ್ದರೂ ಸಹ, ಕಠಿಣ ಕ್ರಮಗಳು ಜಾರಿಯಲ್ಲಿರುತ್ತವೆ ಎಂದು ಅವರು ತಿಳಿಸಿದ್ದಾರೆ.

ಲಾಕ್​ಡೌನ್​ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜೂನ್​ 14ರವರೆಗೆ ವಿಸ್ತರಿಸಲಾಗುವ ಲಾಕ್​ಡೌನ್​ ಕೂಡ ಇದೇ ರೀತಿ ಇರಲಿದೆ.

ಕೊರೊನಾ ಲಾಕ್‌ಡೌನ್‌ ಪರಿಹಾರವಾಗಿ 500 ಕೋಟಿ ರೂ. ಗಳನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕಾರಣ, ಮುಖ್ಯಮಂತ್ರಿ ಲಾಕ್‌ಡೌನ್​ ಮುಂದುವರಿಸಿದ್ದಾರೆ.

ಚಲನಚಿತ್ರ ಕಲಾವಿದರಿಗೆ 3000 ರೂಪಾಯಿ, ಮೀನುಗಾರರಿಗೆ 3000, ಮುಜುರಾಯಿ ದೇವಸ್ಥಾನ ಅರ್ಚಕರು, ಅಡುಗೆಯವರು ಸಿ ಗ್ರೂಪ್ ನೌಕರರಿಗೆ 3000 ರೂಪಾಯಿ, ಮಗ್ಗಗಳ ಕಾರ್ಮಿಕರಿಗೆ 3000, ಮಸೀದಿ ಮುಹದ್ಝಿನ್‌ಗಳಿಗೆ 3000, ಆಶಾ ಕಾರ್ಯಕರ್ತರು 3000, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ 2000, ಅನುದಾನರಹಿತ ಶಾಲಾ ಶಿಕ್ಷಕರಿಗೆ 5000 ಪರಿಹಾರ ನೀಡುವುದಾಗಿ ಅವರು ಹೇಳಿದ್ದಾರೆ.

ಅತಿಸಣ್ಣ-ಸಣ್ಣ-ಮಧ್ಯಮ ಕೈಗಾರಿಕೆಗಳ ವಿದ್ಯುತ್ ಶುಲ್ಕದಲ್ಲಿ ವಿನಾಯ್ತಿ, ಇತರ ಕೈಗಾರಿಕೆಗಳಿಗೆ ಮೇ,ಜೂನ್ ಶುಲ್ಕ ವಿನಾಯ್ತಿ ಹಾಗೂ ರಫ್ತು ಓರಿಯಂಟ್ ಕೈಗಾರಿಕೆ ಅನುಮತಿ ನೀಡಲಾಗಿದೆ. ಹೊಟೇಲ್‌ಗಳಲ್ಲಿ ಸಂಜೆ 6 ಗಂಟೆಯವರೆ ತೆರೆಯಲು ಅವಕಾಶ ಆದರೆ ಪಾರ್ಸೆಗ್‌ ಮಾತ್ರ ಅವಕಾಶ ನೀಡಲಾಗಿದೆ. ಜೂನ್​ 14ರ ವರೆಗೆ ವಿಸ್ತರಿಸಲಾಗುವ ಲಾಕ್​ಡೌನ್​ ಕೂಡ ಇದೇ ರೀತಿಯಾಗಿಯೆ ಇರಲಿದ್ದು, ಯಾವುದೇ ಸಡಿಲಿಕೆ ಇರುವುದಿಲ್ಲ.

ಮೇ ತಿಂಗಳ 10 ರಿಂದ 24 ರವರೆಗೆ ಮೊಲದ ಹಂತದಲ್ಲಿ ಸಂಪೂರ್ಣ ಲಾಕ್‌ಡೌನ್‌ ಅನ್ನು ರಾಜ್ಯ ಸರ್ಕಾರವು ಹೇರಿತ್ತು. ಆದರೆ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈ ಲಾಕ್‌ಡೌನ್‌ ಅನ್ನು ಮತ್ತೇ ಜೂನ್ 7 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಲಾಕ್‌ಡೌನ್‌ ಅನ್ನು ಮತ್ತೆ ವಿಸ್ತರಿಸಲಾಗಿದೆ.

ಮೇ 10 ರಂದು ಲಾಕ್‌ಡೌ‌ನ್ ಪ್ರಾರಂಭವಾಗುವುದಕ್ಕಿಂತ ಮೊದಲೆ ರಾಜ್ಯ ಸರ್ಕಾರವು ಕಠಿಣ ನಿರ್ಬಂಧ ಹೇರಿ ಅಘೋಷಿತ ಲಾಕ್‌ಡೌನ್‌ ಹೇರಿತ್ತು.

ರಾಜ್ಯದಲ್ಲಿ ಜಾರಿಯಲ್ಲಿರುವ ನಿರ್ಬಂಧವನ್ನು ಜೂನ್‌‌ 7 ನಂತರವೂ ವಿಸ್ತರಿಸುವ ಬಗ್ಗೆ ಜೂನ್‌‌ 5 ರಂದು ತಜ್ಞರ ಜೊತೆಗೆ ಚರ್ಚಿಸಿ ತೀರ್ಮಾನಿಸಲಾವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದ ಭಾನುವಾರ ಹೇಳಿದ್ದರು. ಆದರೆ ಇದೀಗ ಎರಡು ದಿನದ ಮೊದಲೆ ನಿರ್ಬಂಧ ಘೋಷಿಸಲಾಗಿದೆ.

ಭಾನುವಾರ ಮಾತನಾಡಿದ್ದ ಯಡಿಯೂರಪ್ಪ, “ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗುತ್ತಿದೆ. ಆದರೆ, ತಜ್ಞರು ಲಾಕ್‌ಡೌನ್‌ ವಿಸ್ತರಿಸುವಂತೆ ವರದಿ ನೀಡಿಲ್ಲ. ಜೂನ್ 5 ರ ವೇಳೆಗೆ ಕೊರೊನಾ ಪರಿಸ್ಥಿತಿ ನೋಡಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರವು ಈಗಾಗಲೆ ರಾಜ್ಯಗಳ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: ಲಾಕ್ ಡೌನ್ ವಿಸ್ತರಿಸಿ- ಸಂಕಷ್ಟದಲ್ಲಿರುವ ಕುಟುಂಬಗಳಿಗೆ 10000 ಪರಿಹಾರ ಕೊಡಿ – ಎಚ್ಡಿಕೆ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights