100 ಕೋಟಿ ಡೋಸ್ ವ್ಯಾಕ್ಸಿನೇಷನ್ ಎಂಬುದು ಸುಳ್ಳು; ಪುರಾವೆ ನೀಡುತ್ತೇನೆ: ಸಂಸದ ಸಂಜಯ್ ರಾವತ್

ದೇಶದಲ್ಲಿ ಕೊರೊನಾ ವಿರುದ್ದ 100 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ಸುಳ್ಳು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದು, ಇದೂವರೆಗೂ 23 ಕೋಟಿಗಿಂತ ಹೆಚ್ಚು ಡೋಸ್‌ ಲಸಿಕೆ ನೀಡಿಲ್ಲ ಎಂದೂ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಶನಿವಾರ ಮಾತನಾಡಿದ ರಾವತ್, 100 ಕೋಟಿ ವ್ಯಾಕ್ಸಿನೇಷನ್ ನೀಡಿರುವುದು “ಸುಳ್ಳು” ಎಂಬುದಕ್ಕೆ ಪುರಾವೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

“ನೀವು ಎಷ್ಟು ಸುಳ್ಳು ಹೇಳುತ್ತೀರಿ?” ಎಂದು ಅವರು ಯಾವುದೇ ಹೆಸರುಗಳನ್ನು ಉಲ್ಲೇಖಿಸದೇ ಪ್ರಶ್ನಿಸಿದ್ದಾರೆ.

“ಕಳೆದ ಹದಿನೈದು ದಿನಗಳಲ್ಲಿ, 20 ಹಿಂದೂಗಳು ಮತ್ತು ಸಿಖ್ಖರನ್ನು ಕೊಲ್ಲಲಾಗಿದೆ, 17 ರಿಂದ 18 ಸೈನಿಕರು ಹುತಾತ್ಮರಾಗಿದ್ದಾರೆ, ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ಚೀನಾ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ, ಆದರೆ ನಾವು 100 ಕೋಟಿ ವ್ಯಾಕ್ಸಿನೇಷನ್ ನೀಡಲಾಗಿದೆ ಎಂದು ಸಂಭ್ರಮಿಸುತ್ತಿದ್ದೇವೆ. ಒಂದು ಬಿಲಿಯನ್‌ ಡೋಸ್‌ ಎಂಬುದು ಸತ್ಯವಲ್ಲ” ಎಂದು ಅವರು ಹೇಳಿದ್ದಾರೆ.

ಈ 100 ಕೋಟಿ ಎಂಬ ಸಂಖ್ಯೆಗಳನ್ನು ಯಾರು ಎಣಿಸಿದ್ದಾರೆ? ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಅಂಬಾನಿ ಮತ್ತು RSS ಸದಸ್ಯನಿಂದ 300 ಕೋಟಿ ಲಂಚ ಆಮಿಷ: ಮಾಜಿ ಗವರ್ನರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights