ಇರಾನ್‌ ವಿವಾದಿತ ಮಾಡೆಲ್ ಸಹಾರ್ ತಬಾರ್ ಗೆ ಕೊರೊನಾ ಸೋಂಕು!

ಹಾಲಿವುಡ್ ನಟಿ ಏಂಜಲಿನಾ ಜೊಲಿ ರೀತಿ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸಂಪೂರ್ಣವಾಗಿ ವಿಕಾರವಾಗಿದ್ದ ಇರಾನ್‌ ವಿವಾದಿತ ಮಾಡೆಲ್ ಸಹಾರ್ ತಬಾರ್ ಗೆ ಕೊರೊನಾ ಸೋಂಕು ತಗುಲಿದೆ.

ಹೌದು… ಸಾಮಾಜಿಕ ಜಾಲತಾಣಗಳಲ್ಲಿ ಧರ್ಮವೊಂದರ ಅವಹೇಳನ ಮಾಡಿದ್ದಕ್ಕೆ ಇರಾನ್ ಸರ್ಕಾರ ಸಹಾರ್‌ ತಬಾರ್‌ಳನ್ನು ಜೈಲಿಗೆ ತಳ್ಳಿತ್ತು. ಇರಾನ್‌ನ ಜೈಲಿನಲ್ಲಿರುವಾಗಲೇ ಸಹಾರ್ ತಬಾರ್ ಅವರಿಗೆ ಕೊರೊನಾ ಸೋಂಕು ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇರಾನ್‌ನಲ್ಲಿ ಆರಂಭದಲ್ಲಿ ಕೊರೊನಾ ಹಾವಳಿ ಮಿತಿ ಮೀರಿತ್ತು. ಸದ್ಯ ಅದಕ್ಕೆ ಸ್ವಲ್ಪ ತಡೆ ಬಿದ್ದಿದೆ. ಇಲ್ಲಿಯವರೆಗೆ 79,494 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. 4,958 ಜನ ಮೃತಪಟ್ಟಿದ್ದಾರೆ. 54,064 ಜನ ಚೇತರಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights