ಕಾಂಗ್ರೆಸ್ ಮುಖಂಡ, ಮತ್ತವರ ಪತ್ನಿಗೆ ಕೊರೊನಾ; ಮನೆಯಲ್ಲೇ ಚಿಕಿತ್ಸೆ

ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಗ್ವಿ ಹಾಗೂ ಅವರ ಪತ್ನಿಗೆ  ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಇಬ್ಬರೂ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ಮೂಲಗಳು ಇಂದು ತಿಳಿಸಿವೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ಅಭಿಷೇಕ್ ಸಿಂಗ್ವಿ ಅವರನ್ನು ಕರೊರೊ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟಿದೆ. ಹಾಗಾಗಿ ಅವರ ಪತ್ನಿಗೂ ಪರೀಕ್ಷೆ ನಡೆಸಿದ್ದು, ಅವರಲ್ಲಿಯೂ ಕೊರೊನಾ ಪತ್ತೆಯಾಗಿದೆ. ಹಾಗಾಗಿ ಇಬ್ಬರೂ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮನೆಯಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ನಾಯಕ ಅಭಿಷೇಕ್ ಸಿಂಗ್ವಿ ಧನಾತ್ಮಕ ಪರೀಕ್ಷೆಯ ನಂತರ ಅವರ ಮಗ ಮತ್ತು ಇತರ ಕುಟುಂಬ ಸದಸ್ಯರು, ಸಿಬ್ಬಂದಿಯನ್ನು ಸಹ COVID-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಸಿಂಗ್ವಿ COVID-19 ಸೋಂಕಿಗೆ ತುತ್ತಾಗಿರುವ ಎರಡನೇ ಕಾಂಗ್ರೆಸ್‌ ನಾಯಕ. ಈ ಹಿಂದೆ ಸಂಜಯ್‌ ಜಾ ಅವರು ಈ ಸೋಂಕಿಗೆ ತುತ್ತಾಗಿದ್ದರು. ಆದರೆ, ಇದೀಗ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಕೊರೋನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights