ರಾಜ್ಯದಲ್ಲಿ ಮತ್ತೆ ಒಂದು ತಿಂಗಳು ಲಾಕ್‌ಡೌನ್‌ ಹೇರಿದ ಜಾರ್ಖಂಡ್‌ ಸರ್ಕಾರ!

ಕೊರೊನಾ ವೈರಸ್‌ ಹಾವಳಿಗೆ ಬೆರಗಾಗಿರುವ ಜಾರ್ಖಂಡ್‌ ಸರ್ಕಾರ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ನ್ನು ಜುಲೈ 31ರವರೆಗೂ ವಿಸ್ತರಣೆ  ಮಾಡಿದೆ.

ದೇಶಾದ್ಯಂತ ಲಾಕ್‌ಡೌನ್‌ ಸಡಿಲಗೊಳಿಸಿದ್ದರೂ ಸಹ, ಜಾರ್ಖಂಡ್‌ನಲ್ಲಿ ಲಾಕ್‌ಡೌನ್‌ ಮುಂದುವರೆಯುತ್ತಲೇ. ಈ ಹಿಂದೆ ಜೂನ್ 28ರ ವರೆಗೂ ಲಾಕ್‌ಡೌನ್‌ ಹೇರಿದ್ದ ಸರ್ಕಾರ ಈಗ ಮತ್ತೆ ಲಾಕ್‌ಡೌನ್‌ ವಿಸ್ತರಿಸಿದೆ. ಜಾರ್ಖಂಡ್ ಸರ್ಕಾರದ ಆದೇಶದ ಪ್ರಕಾರ ಲಾಕ್ ಡೌನ್ ಜಾರಿಯಲ್ಲಿದ್ದರೂ ಈಗ ನೀಡಿರುವ ವಿನಾಯಿತಿಗಳು ಮುಂದುವರೆಯಲಿದೆ. ರಾತ್ರಿಯ ಕರ್ಫ್ಯೂ ಹಾಗೇಯೇ ಮುಂದುವರೆಯಲಿದೆ.   ಜಾರ್ಖಂಡ್‌ ರಾಜ್ಯದಲ್ಲಿ ಜುಲೈ 1ರಿಂದ ಜುಲೈ 31ರ ತನಕ ಲಾಕ್ ಡೌನ್ ಜಾರಿಗೆ ಬರಲಿದೆ.

ಇನ್ನು ಜಾರ್ಖಂಡ್ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2, 261ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12 ಜನರು ಮೃತಪಟ್ಟಿದ್ದಾರೆ.

ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿರುವ 5ನೇ ಹಂತದ ಲಾಕ್ ಡೌನ್ (ಅನ್‌ ಲಾಕ್ 1) ಜೂನ್ 30ರ ತನಕ ದೇಶದಲ್ಲಿ ಜಾರಿಯಲ್ಲಿ ಇರುತ್ತದೆ. ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ದೆಹಲಿ ಸರ್ಕಾರ ಜುಲೈ 31ರ ತನಕ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights