ಎಸ್‌ಬಿ ಎನರ್ಜಿ ಕಂಪನಿಯನ್ನು 26 ಸಾವಿರ ಕೋಟಿಗೆ ತನ್ನ ಸ್ವಾಧೀನಕ್ಕೆ ಪಡೆದ ಅದಾನಿ!

ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿಯನ್ನು ಅದಾನಿ ಒಡೆತನದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಕಂಪನಿಯು 26,000 ಕೋಟಿ ರೂಗಳಿಗೆ (3.5 ಶತಕೋಟಿ ಡಾಲರ್) ಖರೀದಿಸಿದೆ ಎಂದು ಕಂಪನಿ ಸೋಮವಾರ ಹೇಳಿದೆ.

ಎಸ್‌ಬಿ ಎನರ್ಜಿ ಹೋಲ್ಡಿಂಗ್ಸ್ ಲಿಮಿಟೆಡ್ (ಎಸ್‌ಬಿ ಎನರ್ಜಿ ಇಂಡಿಯಾ) ಅನ್ನು ತನ್ನ ತೆಕ್ಕಗೆ ತೆಗೆದುಕೊಂಡಿರುವ ಎಜಿಇಎಲ್‌ ಕಂಪನಿಯು ಈಗ ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಡೆವಲಪರ್ ಕಂಪನಿಯಾಗಿ ಮಾರ್ಪಟ್ಟಿದೆ.

ಎಸ್‌ಬಿ ಎನರ್ಜಿ ಇಂಡಿಯಾದ ಎಲ್ಲಾ ರೀತಿಯ ನಗದು ವ್ಯವಹಾರಗಳನ್ನೂ ತನ್ನ ತೆಕ್ಕಗೆ ತೆಗೆದುಕೊಂಡಿರುವ ಕಂಪನಿ, ಕಳೆದ ಮೇ 8 ರಂದೇ ಒಪ್ಪಂದವನ್ನು ಮಾಡಿಕೊಂಡಿತ್ತು.

ಈ ಒಪ್ಪಂದದ ಮೂಲಕ, SB ಎನರ್ಜಿ ಇಂಡಿಯಾ ಈಗ ಸಂಪೂರ್ಣವಾಗಿ AGEL ನ ಅಂಗಸಂಸ್ಥೆಯಾಗಿದೆ. ಇದಕ್ಕೂ ಮೊದಲು,ಇದು ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪ್ ಮತ್ತು ಭಾರತಿ ಗ್ರೂಪ್ ನಡುವಿನ 80:20 ಜಂಟಿ ಉದ್ಯಮವಾಗಿತ್ತು.

ಎಸ್‌ಬಿ ಎನರ್ಜಿ ಇಂಡಿಯಾದ ವಹಿವಾಟು 3.5 ಬಿಲಿಯನ್ ಅಮೆರಿಕನ್‌ ಡಾಲರ್ (ಅಂದಾಜು ರೂ 26,000 ಕೋಟಿ) ಆಗಿದೆ ಎಂದು ಉದ್ಯಮವು ಮೌಲ್ಯಮಾಪನ ಮಾಡಿದೆ. ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿರುವುದು, ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಅತಿದೊಡ್ಡ ಸ್ವಾಧೀನವಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಅದಾನಿ ಮಾಲಿಕತ್ವದ ಬಂದರಿನಲ್ಲಿ 20 ಸಾವಿರ ಕೋಟಿ ರೂ. ಮೌಲ್ಯದ ಹೆರಾಯಿನ್ ವಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights