ಫ್ಯಾಕ್ಟ್‌ಚೆಕ್ : ಇಸ್ರೋ ವಿಜ್ಞಾನಿಗಳ ಡ್ಯಾನ್ಸ್‌ನ ವೈರಲ್ ವಿಡಿಯೋ ಯಾವಾಗಿನದು ಗೊತ್ತೇ?

ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಚಂದ್ರಯಾನ 3ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೊಡನೆ ಶ್ರೀ ಹರಿಕೋಟಾದ ಇಸ್ರೋ ಕೇಂದ್ರದಲ್ಲಿ ಸಂತಸ ಮುಗಿಲು ಮುಟ್ಟಿತ್ತು. ಆ ವರೆಗೂ ತಮ್ಮ ತಮ್ಮ ಡೆಸ್ಕ್ ಗಳಲ್ಲಿ ಕುಳಿತು ಉಸಿರು ಬಿಗಿ ಹಿಡಿದು ಪ್ರತಿ ಕ್ಷಣವನ್ನೂ ವೀಕ್ಷಿಸುತ್ತಿದ್ದ ವಿಜ್ಞಾನಿಗಳು ಒಮ್ಮಿಂದೊಮ್ಮೆಲೇ ಎದ್ದು ನಿಂತು ಚಪ್ಪಾಳೆಯನ್ನು ತಟ್ಟಿ ಹರ್ಷೋದ್ಘಾರ ಮಾಡಿದರು.

ಇದೇ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಂತರ ಇಸ್ರೋ ವಿಜ್ಞಾನಿಗಳು ನೃತ್ಯ ಮಾಡುತ್ತಿರುವ ದೃಶ್ಯಗಳು, ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/MadhurGovindam/status/1694539386925502768

ಹಾಗಿದ್ದರೆ ವೈರಲ್ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಇತ್ತೀಚೆಗೆ ಉಡಾವಣೆಯಾಗಿದ್ದ ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ದೇಶದ ವಿಜ್ಞಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಇದೇ ಸಂದರ್ಭದಲ್ಲಿ ಇಸ್ರೋ ಮುಖ್ಯಸ್ಥ ಸೋಮನಾಥ್ ಮತ್ತು ಸಹದ್ಯೋಗಿಗಳು ಡಿಜೆ  ಮ್ಯೂಸಿಕ್‌ಗೆ ನೃತ್ಯ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಿದಾಗ ವಿಯನ್ ನ್ಯೂಸ್‌ನಲ್ಲಿ ಕೆಲಸ ಮಾಡುವ ಪತ್ರಕರ್ತ ಸಿದ್ಧಾರ್ಥ್ ಎಂಪಿ ಅವರ ಟ್ವೀಟ್‌ ಲಭ್ಯವಾಯಿತು.

ಚಂದ್ರಯಾನ-3 ಮಿಷನ್‌ನ ಯಶಸ್ಸಿಗೆ ಇಸ್ರೋ ತಂಡವನ್ನು ಅಭಿನಂದಿಸಿ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

https://twitter.com/sdhrthmp/status/1694351522891747767

ಆದರೆ ಇಸ್ರೋ ಮುಖ್ಯಸ್ಥರು ನೃತ್ಯ ಮಾಡುತ್ತಿರುವ ವೈರಲ್ ವಿಡಿಯೋ ಚಂದ್ರಯಾನ 3 ವಿಕ್ರಂ ಲ್ಯಾಂಡ್ ಆದ ಸಂದರ್ಭದಲ್ಲ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ಮಾಡದೆ. ಜುಲೈ 2023 ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಿಂದ ಬಂದಿದೆ. ಇದು G20 ಬಾಹ್ಯಾಕಾಶ ಆರ್ಥಿಕ ನಾಯಕರ (G20 space economy leaders) ಸಾಂಸ್ಕೃತಿಕ  ಕಾರ್ಯಕ್ರಮವಾಗಿತ್ತು. ಎಂದು ಉಲ್ಲೇಖಿಸಿದೆ.

ಚಂದ್ರಯಾನ 3ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೊಡನೆ ಶ್ರೀ ಹರಿಕೋಟಾದ ಇಸ್ರೋ ಕೇಂದ್ರದಲ್ಲಿ ಸಂತಸ ಮುಗಿಲು ಮುಟ್ಟಿತ್ತು. ಆ ವರೆಗೂ ತಮ್ಮ ತಮ್ಮ ಡೆಸ್ಕ್ ಗಳಲ್ಲಿ ಕುಳಿತು ಉಸಿರು ಬಿಗಿ ಹಿಡಿದು ಪ್ರತಿ ಕ್ಷಣವನ್ನೂ ವೀಕ್ಷಿಸುತ್ತಿದ್ದ ವಿಜ್ಞಾನಿಗಳ ಗಡಣ ಒಮ್ಮಿಂದೊಮ್ಮೆಲೇ ಎದ್ದು ನಿಂತು ಚಪ್ಪಾಳೆಯನ್ನು ತಟ್ಟಿ ಹರ್ಷೋದ್ಘಾರ ಮಾಡಿತು.

ತಕ್ಷಣವೇ ವೇದಿಕೆಗೆ ಬಂದ ಇಸ್ರೋ ಮುಖ್ಯಸ್ಥ ಸೋಮನಾಥನ್ ಅವರು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಘೋಷಿಸಿದರು. ಜೊತೆಗೆ ದಕ್ಷಿಣ ಆಫ್ರಿಕಾದಿಂದ ವರ್ಚುವಲ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಪ್ರಧಾನಿ ಮೋದಿ ಅವರಿಗೆ ಈಗ ಭಾರತ ಚಂದ್ರನ ಮೇಲೆ ಕಾಲಿರಿಸಿದೆ ಎಂದು ತಿಳಿಸಿ ಮಾತನಾಡುವಂತೆ ವಿನಂತಿಸಿದರು.

ಪ್ರಧಾನಿ ಮೋದಿ ಭಾಷಣದ ಬಳಿಕ ಮತ್ತೆ ಮೈಕ್ ಎತ್ತಿಕೊಂಡ ಸೋಮನಾಥನ್, ಈ ಸಂದರ್ಭದಲ್ಲಿ ಈ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳಾದ ಮುತ್ತುವೇಲ್, ಕಲ್ಪನಾ ಮತ್ತು ಶ್ರೀಕಾಂತ್, ಸಂಕರನ್, ಕಿರಣ್ ಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಚಂದ್ರಯಾನ-3 ರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಂತರ ಇಸ್ರೋ ವಿಜ್ಞಾನಿಗಳು ನೃತ್ಯ ಮಾಡುತ್ತಿರುವ ದೃಶ್ಯಗಳು ಎಂದು ಜುಲೈನಲ್ಲಿ ನಡೆದ G20 ಬಾಹ್ಯಾಕಾಶ ನಾಯಕರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ನೃತ್ಯದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಅವಕಾಶ ಸಿಕ್ಕರೆ ರಾಹುಲ್ ಗಾಂಧಿ ಉತ್ತಮ ಪ್ರಧಾನಿ ಆಗುತ್ತಾರೆ ಎಂದು ಬಿಜೆಪಿ ನಾಯಕಿ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights