ಫ್ಯಾಕ್ಟ್‌ಚೆಕ್ : ಪ್ರಧಾನಿ ನರೇಂದ್ರ ಮೋದಿ ಹೇಳಿದ ಮತ್ತೊಂದು ಸುಳ್ಳು ಯಾವುದು ಗೊತ್ತೇ?

ಚಿಕಿತ್ಸೆಗಾಗಿ ಈಗ ಜನರು ನೂರಾರು ಕಿ.ಮೀ. ಓಡಾಡಬೇಕಾಗಿಲ್ಲ. ‘ಆರೋಗ್ಯದ ಆರೈಕೆಯ ದೃಷ್ಟಿಯಿಂದ ನಾವು ಅಸ್ಸಾಂನ ಗುವಹಾಟಿಯಿಂದ ಪಶ್ಚಿಮ ಬಂಗಾಳದ ಕಲ್ಯಾಣಿವರೆಗೆ, ಜಾರ್ಖಂಡ್‌ನ ದೇವಧರದಿಂದ ಬಿಹಾರದ ದರ್ಭಂಗಾದವರೆಗೆ ಎಮ್ಸ್‌ ಆಸ್ಪತ್ರೆಯನ್ನು ತೆರೆದಿದ್ದೇವೆ. ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆ.12ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್‌ ರಾಜ್‌ ಪರಿಷತ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದಂತೆ ಬಿಹಾರದ ದರ್ಬಾಂಗದಲ್ಲಿ ಏಮ್ಸ್ ಸ್ಥಾಪಿಸಿದ್ದೇವೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಯಾವ ಯಾವ ರಾಜ್ಯದಲ್ಲಿ ಏಮ್ಸ್‌ಅನ್ನು ಸ್ಥಾಪಿಸಿದ್ದೇವೆ ಎಂದು ಹೇಳುತ್ತಾ, ಬಿಹಾರದ ದರ್ಬಾಂಗದಲ್ಲಿ ಏಮ್ಸ್ ಸ್ಥಾಪಿಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

‘ಏಮ್ಸ್‌ ನಿರ್ಮಾಣಕ್ಕಾಗಿ ಬಿಹಾರ ಸರ್ಕಾರ ಗೊತ್ತು ಮಾಡಿದ್ದ ಭೂಮಿಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಅವರು ಹೇಳಿದ್ದರು. ಭೂಮಿಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ನಿರಾಕರಿಸಿ ಬರೆದಿದ್ದ ಪತ್ರವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು 2023ರ ಮೇ 26ರಂದು ದೃಢಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ದರ್ಬಾಂಗದಲ್ಲಿ ಏಮ್ಸ್ ಸ್ಥಾಪಿಸಿದ್ದೇವೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿದ್ದಾರೆ ಎಂದು ಸ್ಪಷ್ಟವಾಗಿದೆ.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಅವಕಾಶ ಸಿಕ್ಕರೆ ರಾಹುಲ್ ಗಾಂಧಿ ಉತ್ತಮ ಪ್ರಧಾನಿ ಆಗುತ್ತಾರೆ ಎಂದು ಬಿಜೆಪಿ ನಾಯಕಿ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights