ಶಾಹಿನ್‌ಬಾಗ್‌ ಪ್ರತಿಭಟನೆಯ ಅಜ್ಜಿ ‘ಬಿಲ್ಕೀಸ್‌’ 2020ರ ಪ್ರಭಾವಶಾಲಿ ವ್ಯಕ್ತಿ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹಿನ್‌ಬಾಗ್‌ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ, ’ಶಾಹಿನ್ ಬಾಗ್‌‌ ಅಜ್ಜಿ’ ಎಂದೇ ಪ್ರಖ್ಯಾತಿ ಹೊಂದಿದ್ದ 82 ವರ್ಷದ ಬಿಲ್ಕೀಸ್‌ ಅವರನ್ನು ವರ್ಷದ ಅಂತ್ಯತ ಪ್ರಭಾವಶಾಲಿ ವ್ಯಕ್ತಿ ಎಂದು ’ಟೈಮ್’‌‌ ನಿಯತಕಾಲಿಕೆ ಕರೆದಿದೆ.

ವರ್ಷದ ಅತ್ಯಂತ ಪ್ರಭಾವಶಾಲಿ ಎಂದು 100 ಜನರ ಪಟ್ಟಿ ಬಿಡುಗಡೆ ಮಾಡಿರುವ ಟೈಮ್ಸ್‌ ನಿಯತಕಾಲಿಕೆ, ಆ ಪಟ್ಟಿಯಲ್ಲಿ ಬಿಲ್ಕೀಸ್‌ ಅವರ ಹೆಸರನ್ನು ಸೇರಿಸಿದೆ.

ದೇಶದಾದ್ಯಂತ ಸಿಎಎ ವಿರುದ್ದ ನಡೆಯುತ್ತಿದ್ದ ಪ್ರತಿಭಟನೆಯ ಕೇಂದ್ರ ಬಿಂದು ಆಗಿದ್ದ ಶಾಹಿನ್ ಬಾಗ್‌ನಲ್ಲಿ, ದೆಹಲಿಯ ಚಳಿಗೂ ಜಗ್ಗದೆ ಕೋಟ್ಯಾಂತರ ಚಳವಳಿಗಾರರ ಸ್ಫೂರ್ತಿಯ, ಪ್ರತಿರೋಧದ ಮುಖವಾಗಿ ಅವರು ಕಾಣಿಸಿಕೊಂಡಿದ್ದರು.

ಟೈಮ್ಸ್‌‌ನಲ್ಲಿ ಅವರ ಬಗ್ಗೆ ಬರೆದಿರುವ ಖ್ಯಾತ ಪತ್ರಕರ್ತೆ, “ನಾನು ಅವರ ಬಗ್ಗೆ ಬರೆಯಿತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಒಂದು ಕೈಯಲ್ಲಿ ಜಪ ಮಣಿ, ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಕುಳಿತಿರುತ್ತಿದ್ದ ಬಿಲ್ಕಿಸ್ 82 ರ ವಯಸ್ಸಿನಲ್ಲಿಯೂ ಭಾರತದ ಧ್ವನಿಯಾದರು. ಬೆಳಿಗ್ಗೆ 8 ರಿಂದ ಮಧ್ಯರಾತ್ರಿಯವರೆಗೂ ಅವರು ಪ್ರತಿಭಟನಾ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದರು” ಎಂದು ಪತ್ರಕರ್ತೆ ಬರೆದಿದ್ದಾರೆ.

“ನನ್ನ ನರನಾಡಿಗಳಲ್ಲಿ ರಕ್ತ ಹರಿಯುವುದು ನಿಲ್ಲುವವರೆಗೂ ನಾನು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಇದರಿಂದ, ಈ ದೇಶದ ಮತ್ತು ಜಗತ್ತಿನ ಜನರು ನ್ಯಾಯ ಮತ್ತು ಸಮಾನತೆಯ ಗಾಳಿಯನ್ನು ಉಸಿರಾಡುತ್ತಾರೆ” ಎಂದು ಬಿಲ್ಕೀಸ್ ಹೇಳಿದ್ದಾಗಿ ಪತ್ರಕರ್ತೆ ರಾಣಾ ಅಯೂಬ್ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಟೈಮ್ ನಿಯತಕಾಲಿಕೆಯ ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಗೂಗಲ್ ಕಾರ್ಯನಿರ್ವಾಹಕ ಸುಂದರ್ ಪಿಚ್ಚೈ ಮುಂತಾದವರು ಸ್ಥಾನ ಪಡೆದಿದ್ದಾರೆ.


ಇದನ್ನೂ ಓದಿ: ಮೋದಿ ಸರ್ಕಾರದ ಕೃಷಿ ಮಸೂದೆಗೆ ಬಿಜೆಪಿ ನಾಯಕರಿಂದಲೇ ವಿರೋಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights