”ಮಾಮರವೆಲ್ಲೋ ಕೋಗಿಲೆ ಎಲ್ಲೋ” ಮಧುರ ಗಾಯಕನ ಸುಮಧುರ ನೆನಪುಗಳು..

ಅದೆಷ್ಟೋ ಅಭಿಮಾನಿಗಳಿಗೆ ನಂಬಲಾಗುತ್ತಿಲ್ಲ… ಒಡನಾಡಿಗಳಿಗೆ ಮಾತುಗಳೇ ಬರುತ್ತಿಲ್ಲ… ಆತ್ಮೀಯರಿಗೇ ಆತ್ಮ ಸತ್ತಂತಾಗಿದೆ. ಮಾತಾಡಲು ಪದಗಳೇ ಸಾಕಾಗುತ್ತಿಲ್ಲ.. ಎಲ್ಲಿ ನೋಡಿದರೂ ನಿರವ ಮೌನ. ಚಂದನವನದಲ್ಲಿ ಮಾತ್ರವಲ್ಲ ಇಡೀ ದೇಶಕ್ಕೆ ಗಾನ ಕೋಗಿಲೆ, ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಅನ್ನೋ ಮಾತನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಗಲಿರುಳು ಅವರಿಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಆ ದೇವರು ಮೇಲೆ ಕೋಪ ಬರುತ್ತಿದೆ. ‘ಎಸ್ ಪಿಬಿ ಹಿಮಾಲಯದಂತೆ. ಅದು ಎಂದಿಗೂ ಕರಗಲ್ಲಾ’ ಅಂದುಕೊಂಡಿದ್ದ ಬಂಧುಮಿತ್ರರಿಗೆ ಮನ ತುಂಬಿ ದು:ಖವಾಗುತ್ತಿದೆ.

ಯಾರಿಗೆ ಹೇಳೋದು? ಯಾರಲ್ಲಿ ಗಾನ ಕೋಗಿಲೆಯ ಕಂಠವನ್ನು ಮರಳಿ ಕೇಳೋದು..? ಮತ್ತೆ ಇಂತಹ ಸಾಧಕ ಹುಟ್ಟಿಬರಲು ಸಾಧ್ಯವೇ..? ಇಂತೆಲ್ಲಾ ಗೊಂದಲಗಳು, ಪ್ರಶ್ನೆಗಳು ಗಾನ ದಿಗ್ಗಜ ಎಸ್ ಪಿಬಿ ಅವರನ್ನು ಕಳೆದುಕೊಂಡ ಪ್ರತಿಯೊಬ್ಬರಲ್ಲೂ ಮರುಕಳಿಸುತ್ತಿವೆ.

74 ವಯಸ್ಸಿನಲ್ಲಿ ತಮ್ಮ ಭಾಹಶ: ವಯಸ್ಸನ್ನ ಸಂಗೀತಕ್ಕೆ ಮುಡಿಪಾಗಿಟ್ಟ ಏಕೈಕ ವ್ಯಕ್ತಿ ಎಸ್ ಪಿಬಿ. ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗಿದೆ. ಎಸ್ ಪಿ ಜನಿಸಿದ್ದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1946ರ ಜೂನ್ 4ರಂದು. ಅವರು ಮೊತ್ತಮೊದಲಿಗೆ ಸಿನೆಮಾದಲ್ಲಿ ಹಾಡಿದ್ದು 1966ರಲ್ಲಿ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಿತ್ರದಲ್ಲಿ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಭಾಷೆ, ಗಡಿಯನ್ನು ಮೀರಿದ ಕಲಾವಿದರಾಗಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡು 16 ಭಾಷೆಗಳಲ್ಲಿ ಅವರಿಗೆ ಸಂಗೀತ ಪ್ರೇಮಿಗಳಿದ್ದಾರೆ. ಹಿಂದಿ ಭಾಷೆಗೆ ಅವರು 1980 ಮತ್ತು 1990ರ ದಶಕದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಏಕ್ ತುಜೆ ಕೆ ಲಿಯೆಗೆ ಹಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಗೆದ್ದರು. ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರೊಂದಿಗೆ ಹಾಡಿದ ಈ ಸಿನಿಮಾದ ಬಹುತೇಕ ಹಾಡುಗಳು ಇಂದಿಗೂ ಹಾಟ್ ಫೆವರೇಟ್.

ಮಧುರ ಗಾಯಕನ ಸುಮಧುರ ನೆನಪುಗಳು…

ಇನ್ನೂ ಸಲ್ಮಾನ್ ಖಾನ್ ಮತ್ತು ಮಾಧುರಿ ಅಭಿನಯದ ‘ಹಮ್ ಆಪ್ಕೆ ಹೈ ಕೋನ್’ ಚಿತ್ರದ ‘ಪೆಹ್ಲಾ ಪೆಹ್ಲಾ ಪ್ಯಾರ್ ಹೈ…’ ಹಾಡು ಮನದಲ್ಲಿ ಗುನುಗುತ್ತವೆ.

https://www.youtube.com/watch?v=gIODEFkvjTA

ಇನ್ನೂ ‘ಮೈನೇ ಪ್ಯಾರ್ ಕಿಯಾ’ ಸಿನಿಮಾದ ‘ಮೇರೆ ರಂಗ ಮೇ’ ಹಾಡು ಇಂದಿಗೂ ಪ್ರೇಮಿಗಳ ಅಚ್ಚುಮೆಚ್ಚಿನ ಹಾಡು..

‘ಸಾಜನ್’ ಸಿನಿಮಾದ ‘ತುಮ್ಸೆ ಮಿಲ್ನೇಕಿತಮ್ಮನ್ನಾ ಹೈ’ ಜಬರ್ದಸ್ತ್ ಹವಾ ಸೃಷ್ಟಿಸಿತ್ತು..

ಇನ್ನೂ ‘ರೋಜಾ’ ಸಿನಿಮಾದ ಹಾಡುಗಳನ್ನಂತೂ ಯಾರು ಮರೆಯೋ ಹಾಗೇ ಇಲ್ಲ. ಎವರ್ ಗ್ರೀನ್ ಹಾಡುಗಳು ಅವು.

ಇನ್ನೂ ಹೇಳ್ಬೇಕು ಅಂದ್ರೆ ಮುಂದಿನ ಜನ್ಮ ಅಂತಿದ್ರೆ ಕರ್ನಾಟಕದಲ್ಲಿ ಹುಟ್ಟಬೇಕು ಅಂದ್ರಿಂತೆ ಎಸ್ ಪಿಬಿ. ಕನ್ನಡಕ್ಕೂ ಅವರು ನೀಡಿದ ಕೊಡುಗೆ ಅಪಾರ. ಕನ್ನಡದಲ್ಲಿ ‘ಕಲ್ಲಾದರೆ ನಾನು…’ ಹಾಡು ಇವತ್ತಿಗೂ ಕನ್ನಡಿಗರ ಬಾಯಲ್ಲಿ ಗುನುಗುಡುತ್ತೆ..

https://www.youtube.com/watch?v=-qbUB57KGL4

https://www.youtube.com/watch?v=B6jrsgJxNAI

ಇಂತಹ 40 ಸಾವಿರಕ್ಕೂ ಹೆಚ್ಚು ಹಾಡುಗಳು ಎಸ್ ಪಿಬಿ ಅವರ ಧ್ವನಿಯಲ್ಲಿ ಅಜರಾಮರವಾಗಿವೆ. ಎಸ್ ಪಿಬಿ ನಮ್ಮನ್ನ ಅಗಲಿರಬಹುದು ಆದರೆ ಅವರು ಹಾಡಿದ ಹಾಡುಗಳು ಎಂದಿಗೂ ನಮ್ಮಿಂದ ಅಳಿದು ಹೋಗಲು ಸಾಧ್ಯವೇ ಇಲ್ಲ. ಮಿಸ್ ಯು ಬಾಲು ಸರ್…

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights