ಮೋದಿ ಸರ್ಕಾರದ ಕೃಷಿ ಮಸೂದೆಗೆ ಬಿಜೆಪಿ ನಾಯಕರಿಂದಲೇ ವಿರೋಧ!

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ಇಂದು (ಶುಕ್ರವಾರ) ದೇಶಾದ್ಯಂತ ಭಾರತ ಬಂದ್‌ ಕರೆಕೊಟ್ಟಿದ್ದು, ಪ್ರತಿಭಟನೆ ನಡೆಸಲಾಗುತ್ತಿದೆ. ಬಂದ್‌ಗೆ ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಈ ನಡುವೆ, ಕೇಂದ್ರದ ಕೃಷಿ ಮಸೂದೆಗಳು ‘ರೈತ ವಿರೋಧಿ’ಯಾಗಿವೆ ಎಂದು ಹರಿಯಾಣಯ ಬಿಜೆಪಿ ನಾಯಕರಾದ ಪಮಿಂದರ್ ಸಿಂಗ್ ಧುಲ್ ಮತ್ತು ರಾಂಪಾಲ್ ಮಜ್ರಾ ಹೇಳಿದ್ದಾರೆ.

ಕೃಷಿ ಮಸೂದೆಯನ್ನು ವಿರೋಧಿಸಿ ಅನೇಕ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೇಂದ್ರ ಅವರ ವಾದವನ್ನು ಕೇಳಬೇಕು. ಆದರೆ, ಸರ್ಕಾರ ಅವರ ಮಾತಿಗೆ ಕಿವಿಗೊಡುತ್ತಿಲ್ಲ ಎಂದು ಹೇಳಿರುವ ಬಿಜೆಪಿ ನಾಯಕರು, ಸರ್ಕಾರದ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ನಿಲ್ಲಿಸುವ ಬಗೆಗಿನ ಆತಂಕಗಳು ಆಧಾರರಹಿತವಾದುದಲ್ಲ ಎಂದು ಹೇಳಿದ್ದಾರೆ.

ಕೃಷಿ ಮಸೂದೆಗಳು ರೈತ ಮತ್ತು ಜನ ವಿರೋಧಿಯಾಗಿವೆ. ಈ ಮಸೂದೆಗಳು, ರೈತರನ್ನು ಸಮೃದ್ಧಗೊಳಿಸಬೇಕು ಎಂದು ಆಶಯಹೊಂದಿದ್ದ ಸರ್. ಚೋಟುರಾಮ್‌ ಅವರ ಕನಸುಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನ ಸಂದರ್ಭದಲ್ಲಿ ಆರ್ಥಿಕತೆ ಕುಸಿತ ಕಂಡಿದೆ. ಇಂತಹ ಸಂದರ್ಭದಲ್ಲಿಯೂ ದೇಶದಲ್ಲಿ ಭರವಸೆ ಮೂಡಿಸಿದ್ದದ್ದು ಕೃಷಿ ಕ್ಷೇತ್ರ ಮಾತ್ರವಾಗಿತ್ತು. ಆದರೆ, ಕೃಷಿ ಮಸೂದೆಗಳ ಮೂಲಕ ಕೃಷಿ ಕ್ಷೇತ್ರವನ್ನು ಹಾಳುಗೆಡವುತ್ತಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . .

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights