ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ : ಸಿಸಿಬಿ ವಿಚಾರಣೆಗೆ ಮಂಗಳೂರು ತೆರಳಿದ ಆ್ಯಂಕರ್ ಅನುಶ್ರೀ…

ಡ್ರಗ್ಸ್ ಮಾಫಿಯಾ ತನಿಖೆಯಲ್ಲಿ ಸಿಸಿಬಿ ಬಲೆಗೆ ಸ್ಯಾಂಡಲ್ ವುಡ್ ನ ಮೋಹನಾಂಗಿಯರು ಸೇರಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ರಿಯಾಲಿಟಿ ಶೋಗಳ ಆ್ಯಂಕರ್ ಅನುಶ್ರೀ ಅವರಿಗೆ ಸಿಸಿಬಿ ನೋಟೀಸ್ ನೀಡಿದೆ. ಈ ಬಗ್ಗೆ ಸ್ಪಷ್ಟಪಡಿಸಿರುವ ನಟಿ ತಾನು ಇಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. 

ವಿಚಾರಣೆಗೆ ಹಾಜರಾಗಲು ಮಂಗಳೂರಿನ ಸಿಸಿಬಿ ಕಚೇರಿಯಿಂದ  ನೋಟಿಸ್ ಜಾರಿಯಾಗಿದ್ದು, ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಾನು ಸ್ವತ: ಮಂಗಳೂರಿಗೆ ತೆರಳಿ ವಿಚಾರಣೆಗೆ ಖುದ್ದಾಗಿ ಹಾಜರಾಗುವುದಾಗಿ ಅನುಶ್ರೀ ತಿಳಿಸಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಮಂಗಳೂರಿಗೆ ರೀಚ್ ಆಗಲಿದ್ದಾರೆ. ಸಿಸಿಬಿ ಪೊಲೀಸರಿಂದ ಆ್ಯಂಕರ್ ಗ್ರಿಲ್. ಕೆಲವೇ ಕ್ಷಣಗಳಲ್ಲಿ ಅನುಶ್ರೀ ಅವರನ್ನು 15 ಅಧಿಕಾರಿಗಳ ತಂಡ ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ. 45 ಪ್ರಶ್ನೆಗಳನ್ನು ಕೇಳಲು ಸಜ್ಜಾಗಿದೆ. ಮೊದಲ ಹಂತದಲ್ಲಿ ಸಜ್ಜು ಮಾಡಲಾಗಿದೆ. ಡಿಸಿಪಿ ವಿನಯ್ ಗಾಂವ್ಕರ್ ವಿಚಾರಣೆ ನಡೆಸಲಿದ್ದಾರೆ.

ಇದು ಬರೀ ವಿಚಾರಣೆಯ ಸೂಚನೆಯಾಗಿದ್ದು, ಮಾಧ್ಯಮಗಳಲ್ಲಿ ನಾನು ನಟಿಸಿದ ಚಿತ್ರವೊಂದನ್ನು ಬಳಸಿ ಅಪರಾಧಿ ಎಂಬಂತೆ  ತೋರಿಸುವ ಪ್ರಯತ್ನಗಳು ನಡೆಯುತ್ತಿವೆ.ಡ್ರಗ್ಸ್ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights