ಎಸಿಪಿ ಮನೆ ಮೇಲೆ ದಾಳಿ: ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!

ತೆಲಂಗಾಣದಲ್ಲಿ ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ) ಯೆಲಮಕುರಿ ನರಸಿಂಹ ರೆಡ್ಡಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಎಸಿಪಿ 70 ಕೋಟಿಗೂ ಅಧಿಕ ಅಕ್ರಮ ಆಸ್ತಿ ಸಂಪಾಸಿದ್ದಾರೆ ಎಂದು ಹೇಳಿದ್ದಾರೆ.

ತೆಲಂಗಾಣದ ಮಲ್ಕಜ್‌ಗಿರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹ ರೆಡ್ಡಿ ವಿರುದ್ಧ ಬಂದಿದ್ದ ದೂರು ಆಧರಿಸಿ ಗುರುವಾರ ಅವರ ಮನೆ ಮೇಲೆ ACB ದಾಳಿ ನಡೆಸಿದೆ. ಹೈದರಾಬಾದ್‌, ವಾರಂಗಲ್‌, ಜನ್‌ಗಾಂವ್‌, ನಲ್ಗೊಂಡ, ಕರಿಂನಗರ, ಅನಂತಪುರ ಜಿಲ್ಲೆಗಳ 25 ಕಡೆಗಳಲ್ಲಿ ದಾಳಿ ನಡೆದಿದ್ದು, ಎಲ್ಲಾ ಕಡೆಗಳಲ್ಲೂಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಎಸಿಬಿ ಹೇಳಿದೆ.

ನರಸಿಂಹ ರೆಡ್ಡಿ ಅವರು 55 ಎಕರೆ ಕೃಷಿ ಜಮೀನು, ಪ್ಲಾಟ್‌, ಖಾಲಿ ಸೈಟ್‌, ವಾಣಿಜ್ಯ ಕಟ್ಟಡಗಳು, ಚಿನ್ನಾಭರಣ ಸೇರಿ 70 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಬಿವೈ ವಿಜಯೇಂದ್ರ 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರಿಂದಲೇ ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights