ಭ್ರಷ್ಟಾಚಾರವು ಅಭಿವೃದ್ಧಿಗೆ ಮಾರಕವಾಗಿದೆ: ಪ್ರಧಾನಿ ಮೋದಿ

ಭ್ರಷ್ಟಾಚಾರವು ಅಭಿವೃದ್ಧಿಗೆ ಮಾರಕವಾಗಿದೆ. ಅದು ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಪ್ರಕ್ರಿಯೆಗಳಿಗೆ ದೊಡ್ಡ ಶತ್ರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ವಿಎಂ ಕಾನ್ಫರೆನ್ಸಿಂಗ್ ಮೂಲಕ ಜಾಗೃತಿ ಮತ್ತು ಭ್ರಷ್ಟಾಚಾರ ವಿರೋಧಿ ಕುರಿತು ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

“ನಮ್ಮ ಆಡಳಿತಾತ್ಮಕ ಪ್ರಕ್ರಿಯೆಗಳು ಪಾರದರ್ಶಕ, ಜವಾಬ್ದಾರಿಯುತವಾಗಿದ್ದುಕೊಂಡು ಜನರಿಗೆ ಉತ್ತರಿಸಬೇಕಾಗಿದೆ. ಇವು ಅಭಿವೃದ್ಧಿಗೆ ಕಡ್ಡಾಯವಾಗಿದೆ. ಈ ಎಲ್ಲಾ ಪ್ರಕ್ರಿಯೆಗಳಿಗೆ ಭ್ರಷ್ಟಾಚಾರವೇ ದೊಡ್ಡ ಶತ್ರು. ಭ್ರಷ್ಟಾಚಾರವು ಅಭಿವೃದ್ಧಿಗೆ ಪೆಟ್ಟು ನೀಡುತ್ತದೆ ಮತ್ತು ಸಾಮಾಜಿಕ ಸಮತೋಲನಕ್ಕೆ ಅಡ್ಡಿಯುಂಟುಮಾಡುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.

“ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ದೇಶವು ಸಿದ್ಧತೆ ನಡೆಸುತ್ತಿದೆ. ಅವರು ಭಾರತದ ಆಡಳಿತದ ವಾಸ್ತುಶಿಲ್ಪಿ” ಎಂದು ತಮ್ಮ ಭಾಷಣದಲ್ಲಿ ಹೇಳಿದರು.


ಇದನ್ನೂ ಓದಿ: ಬಿಹಾರಕ್ಕೆ ತೆರಳಲಿರುವ ಪ್ರಧಾನಿ: ಮೋದಿಗೆ 10 ಪ್ರಶ್ನೆಗಳನ್ನು ಕೇಳಿದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights