ಬಿಹಾರಕ್ಕೆ ತೆರಳಲಿರುವ ಪ್ರಧಾನಿ: ಮೋದಿಗೆ 10 ಪ್ರಶ್ನೆಗಳನ್ನು ಕೇಳಿದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್

ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಹಾರಕ್ಕೆ ತೆರಳುತ್ತಿರುವ ಪ್ರಧಾನಿ ಮೋದಿ, ಬುಧವಾರ (ಅಕ್ಟೋಬರ್‌ 28) ದರ್ಬಂಗಾ, ಮುಜಾಫರ್ಪುರ ಮತ್ತು ಪಾಟ್ನಾದಲ್ಲಿ ರ್ಯಾಲಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಆರ್‌ಜೆಡಿ ಮುಖಂಡ ಮತ್ತು ಮಹಾಗತ್ಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ 10 ಪ್ರಶ್ನೆಗಳನ್ನು ಕೇಳಿದ್ದಾರೆ.

“ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೆ ಬರುತ್ತಿದ್ದಾರೆ. ದೆಹಲಿ ಮತ್ತು ಪಾಟ್ನಾದ ಡಬಲ್ ಎಂಜಿನ್ ಸರ್ಕಾರಕ್ಕೆ ನಾನು ಈ ಪ್ರಶ್ನೆಗಳನ್ನು ಕೇಳಲು ಇಚ್ಚಿಸಿದ್ದು, ಈ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರಿಂದ ಉತ್ತರವನ್ನು ಬಯಸುತ್ತೇನೆ” ಎಂದು ತೇಜಶ್ವಿ ಯಾದವ್ ಹೇಳಿದ್ದಾರೆ.

1.  ದರ್ಬಂಗಾದಲ್ಲಿ ಏಮ್ಸ್‌ ಆಸ್ಪತ್ರೆ ನಿರ್ಮಾಣವನ್ನು 1025ರಲ್ಲಿ ಘೋಷಿಸಲಾಯಿತು. ಆದರೆ, ಇಲ್ಲಿಯವೆರೆಗೂ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಗಿರಲಿಲ್ಲ. ಈಗ ಚುನಾವಣೆಗೂ ಮುನ್ನ ನಿರ್ಮಾಣ ಕಾರ್ಯ ಪ್ರಾರಂಭಿಸಲು ಘೋಷಿಸಿದ್ದು ಎಕೆ?

2.  ನಾಳೆ ಮುಜಾಫರ್‌ಪುರ್‌ಕ್ಕೆ ಬರುತ್ತಿರುವ ಪ್ರಧಾನಿ, 34 ಅನಾಥ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಮುಖ್ಯಮಂತ್ರಿಗಳೇ ರಕ್ಷಣೆ ಕೊಡುತ್ತಿರುವ ಮುಜಫರ್ ಪುರ್ ಆಶ್ರಯ ಮನೆ ಪ್ರಕರಣದ ಬಗ್ಗೆ ಸರ್ಕಾರ ಮತ್ತು ಪ್ರಧಾನಿ ಮಾತನಾಡುತ್ತಾರೆಯೇ?

3.  “ಬಿಜೆಪಿ-ಜೆಡಿಯು ಸರ್ಕಾರವು ದರ್ಬಂಗಾ ಮತ್ತು ಮುಜಾಫರ್ಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭರವಸೆ ನೀಡಿದೆ. ಆದರೆ ಆ ಭರವಸೆ ಈಡೇರಿಲ್ಲ ಹಾಗೂ ವೈದ್ಯರ ನೇಮಕವೂ ಆಗಿಲ್ಲ. ಕೌಶಲ್ಯ (ಸ್ಕಿಲ್‌) ವಿಶ್ವವಿದ್ಯಾಲಯವನ್ನು ನಿರ್ಮಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆ ಭರವಸೆಗೆ ಏನಾಯಿತು?

4.  “ಪಾಟ್ನಾದಲ್ಲಿನ ಪ್ರವಾಹ ಮತ್ತು ಬಿಕ್ಕಟ್ಟಿನ ಬಗ್ಗೆ ಪಾಟ್ನಾ ನಗರ ನಿಗಮದ ಕೆಲಸದ ಬಗ್ಗೆ ಪಿಎಂ ಚರ್ಚಿಸುತ್ತಾರೆಯೇ?”

5.  ದೇಶದ 10 ಕೊಳಕು ನಗರಗಳ ಪೈಕಿ ಆರು ನಗರಗಳು ಬಿಹಾರ ರಾಜ್ಯದಲ್ಲಿವೆ ಎಂಬುದನ್ನು ಬಿಹಾರದ ಜನರಿಗೆ ಬಹಿರಂಗವಾಗಿ ಹೇಳಬೇಕು. “ಬಿಹಾರದಲ್ಲಿ ಅಂತಹ ಪರಿಸ್ಥಿತಿ ಏಕೆ ಇದೆ?” ಎಂದು ಪ್ರಧಾನಿ ಉತ್ತರಿಸಬೇಕು.

6.  “ಎನ್‌ಡಿಎ 40 ಸಂಸದರಲ್ಲಿ 39 ಮಂದಿಯನ್ನು ಹೊಂದಿದ್ದರೂ ನಿತೀಶ್ ಕುಮಾರ್ ಇಷ್ಟು ದುರ್ಬಲ ಮುಖ್ಯಮಂತ್ರಿಯಾಗಿದ್ದು, ಪಾಟ್ನಾ ವಿಶ್ವವಿದ್ಯಾಲಯಕ್ಕೆ ಇನ್ನೂ ಕೇಂದ್ರ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ನೀಡಲಾಗಿಲ್ಲವೇ?

7.  ಯುವಜನರು ಹೆಚ್ಚಿರುವ ರಾಜ್ಯದಲ್ಲಿ ನಿರುದ್ಯೋಗ ಏಕೆ ಇದೆ. ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮತ್ತು ಕಳೆದ 15 ವರ್ಷಗಳಲ್ಲಿ ಬಿಹಾರ ಸರ್ಕಾರವು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ? ಪ್ರಧಾನಿ ಉತ್ತರಿಸುತ್ತಾರೆಯೇ?”

8.  ಬಿಹಾರದಿಂದ ವಲಸೆ ಹೋಗುವುದು ಏಕೆ ನಡೆಯುತ್ತಿದೆ ಮತ್ತು ವಲಸೆ ಹೋಗುವವರ ಸಂಖ್ಯೆ ಏಕೆ ಹೆಚ್ಚುತ್ತಿದೆ?

9.  ಕೋಟಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಇತರ ವಲಸೆ ಕಾರ್ಮಿಕರನ್ನು ಬಿಹಾರಕ್ಕೆ ಬರದಂತೆ ಏಕೆ ತಡೆಯಲಾಯಿತು?

10.ಶ್ರೀಜನ್ ಹಗರಣದ ಆರೋಪಿಗಳನ್ನು ಸಿಬಿಐ ಇನ್ನೂ ಏಕೆ ಬಂಧಿಸಿಲ್ಲ? ಆರೋಪಿಗಳು ಏಕೆ ಎನ್‌ಡಿಎ ನಾಯಕರೊಂದಿಗೆ ತಿರುಗುತ್ತಿದ್ದಾರೆ?

ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮತ ಎಣಿಕೆ ನವೆಂಬರ್ 10 ರಂದು ನಡೆಯಲಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಜೆಡಿಆರ್‌ ಪಕ್ಷದ ಅಭ್ಯರ್ಥಿಗೆ ಗುಂಡು ಹಾರಿಸಿ ಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights