ನೀವು ಬದಲಾಗಿ; ಇಲ್ಲದಿದ್ದರೆ ಬದಲಾವಣೆಗಳು ಸಂಭವಿಸುತ್ತವೆ: ಬಿಜೆಪಿ ಸಂಸದರಿಗೆ ಮೋದಿ ಎಚ್ಚರಿಕೆ

ಬಿಜೆಪಿ ಸಂಸದರ ಹಠಮಾರಿ ಧೋರಣೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರುಬಿಜೆಪಿ ಟಿಕೆಟ್ ಹಂಚಿಕೆಯ ಮಾನದಂಡಗಳಲ್ಲಿ ಸಂಸತ್‌ ಹಾಜರಾತಿಯನ್ನು ಸೇರಿಸಬೇಕು ಎಂಬ ನೀತಿಯನ್ನು ಕೈಬಿಟ್ಟಿದ್ದಾರೆ.

ಸಂಸತ್ತಿನಲ್ಲಿ ನಿಯಮಿತವಾಗಿ ಭಾಗವಹಿಸಬೇಕು. ನೀವುಗಳು ಮಕ್ಕಳಂತೆ ಸಂಸತ್ತಿಗೆ ಗೈರಾಗಬಾರದು. ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ, ಸರಿಯಾದ ಸಮಯದಲ್ಲಿ ಬದಲಾವಣೆಗಳು ಸಂಭವಿಸುತ್ತವೆ” ಎಂದು ಬಿಜೆಪಿ ಸಂಸದರಿಗೆ ಮೋದಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅತಿರೇಕದ ಗೈರುಹಾಜರಿಯ ಬಗ್ಗೆ ಪದೇ ಪದೇ ಸಂಸದರ ವಿರುದ್ದ ಹರಿಹಾಯ್ದಿರುವ ಪ್ರಧಾನಿ, ಈ ಅಧಿವೇಶನದಲ್ಲಿ ಕೋರಂ ಕೊರತೆಯಿಂದ ಕಲಾಪವನ್ನು ಮುಂದೂಡಬೇಕಾದ ಸಂದರ್ಭಗಳು ಇರುವುದರಿಂದ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಡೆಯುತ್ತಿರುವ ಅಧಿವೇಶನದಲ್ಲಿ ವಿಶೇಷವಾಗಿ ರಾಜ್ಯಸಭೆಯಲ್ಲಿ ಸಂಸದರ ಅತ್ಯಂತ ಕಳಪೆ ಹಾಜರಾತಿಗೆ ಸಾಕ್ಷಿಯಾಗಿದೆ. ಸಂಸದರಿಗೆ ಅವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ನಿಯಮಿತವಾಗಿ ಹೇಳಲು ಬಯಸುವುದಿಲ್ಲ. ಬದಲಿಗೆ ಅವರೇ ಅದರ ಬಗ್ಗೆ ಪ್ರಾಮಾಣಿಕವಾಗಿರಬೇಕು ಎಂದು ಮೋದಿ ಹೇಳಿದ್ದಾರೆ.

ಮೂಲಗಳ ಪ್ರಕಾರ, ಇತ್ತೀಚಿಗೆ ದೇಶದಲ್ಲಿ ಕೋವಿಡ್ ಪರಿಸ್ಥಿತಿಯ ಕುರಿತಾದ ಚರ್ಚೆಯ ಸಮಯದಲ್ಲಿ, ಲೋಕಸಭಾ ಸಂಸದರ ಹಾಜರಾತಿ ಕಡಿಮೆಯಾಗಿತ್ತು ಮತ್ತು ಕೋರಂ ಕೊರತೆಯಿಂದಾಗಿ ಅದರ ಒಂದು ಸಭೆ ವಿಳಂಬವಾಯಿತು.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ ದುರಂತ: 14 ಜನರ ಪೈಕಿ ಬದುಕುಳಿದ ಕ್ಯಾಪ್ಟನ್ ವರುಣ್‌; ಚೇತರಿಗೆ ಪಾರ್ಥನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights