FACT CHECK | ಹಳೆಯ ರೈಲು ಇಂಜಿನ್ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಎಳೆಯುತ್ತಿರುವ ವಿಡಿಯೋದ ವಾಸ್ತವವೇನು?

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಜಾರಿಗೆ ತಂದಿರುವ ಕೇಂದ್ರದ ಮೋದಿ ಸರ್ಕಾರದ ರೈಲ್ವೆ ಇಲಾಖೆಯ ಸಾಧನೆಯನ್ನೊಮ್ಮೆ ನೋಡಿ ಎಂದು ಪ್ರತಿಪಾದಿಸಿ ಹಳೆಯ ರೈಲು ಇಂಜಿನ್‌ವೊಂದು ವಂದೇ ಭಾರತ್ ರೈಲಿನ ಮುಂಭಾಗಕ್ಕೆ ಅಂಟಿಕೊಂಡು ಹೋಗತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.

Vande Bharat train pulled by a Locomotive engine.

ವಂದೇ ಭಾರತ್ ರೈಲನ್ನು ಸಾಂಪ್ರದಾಯಿಕ ಎಲೆಕ್ಟ್ರಿಕ್ ಇಂಜಿನ್ ಎಳೆಯುವ ವೀಡಿಯೊವನ್ನು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗುತ್ತಿದೆ, ಮೋದಿ ಸರ್ಕಾರದ ಅಡಿಯಲ್ಲಿ ನಿರ್ಮಿಸಲಾದ ವಂದೇ ಭಾರತ್ ರೈಲನ್ನು ದೋಷಯುಕ್ತವಾಗಿರುವ ಕಾರಣ ಮತ್ತೊಂದು ಎಂಜಿನ್‌ನಿಂದ ಎಳೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವಂದೇ ಭಾರತ್ ರೈಲು ಲೊಕೊಮೊಟಿವ್ ಇಂಜಿನ್‌ನಿಂದ ಎಳೆಯಲ್ಪಟ್ಟಿದೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋವನ್ನು ಸಧ್ಯ ಡಿಲೀಟ್ ಮಾಡಲಾಗಿದೆ. ಇದೇ ಪ್ರತಿಪಾದನೆಯೊಂದಿಗೆ ಹಲವು ಎಕ್ಸ್‌ ಖಾತೆ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದೇ ವಿಡಿಯೋ ಏಪ್ರಿಲ್ 2024 ರಲ್ಲಿ ವೈರಲ್ ಆಗಿತ್ತು, ಹಲವು ಕಾಂಗ್ರೆಸ್‌ ಬೆಂಬಲಿಗರು ತಮ್ಮ ಎಕ್ಸ್‌ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದರು. INC ಸದಸ್ಯ ವಿಕಾಸ್ ಬನ್ಸಾಲ್, ಭಾರತ್ ಆದಿವಾಸಿ ಪಕ್ಷದ ಜಿತೇಂದ್ರ ಮೀನಾ, ಕಾಂಗ್ರೆಸ್ ಬೆಂಬಲಿಗ ಶಾಂತನು, ಪತ್ರಕರ್ತ ಗೌರವ್ ಅವರಂತಹ ಅನೇಕ ಬಳಕೆದಾರರು ಮೋದಿ ಸರ್ಕಾರದ ವಿರುದ್ದ ಟೀಕೆಗಳನ್ನು ಮಾಡಿದ್ದರು. ಯುಪಿಎ ಅವಧಿಯಲ್ಲಿ ನಿರ್ಮಿಸಲಾದ ಇಂಜಿನ್ ಮೋದಿ ಸರ್ಕಾರದ ಅಡಿಯಲ್ಲಿ ತಯಾರಿಸಲಾದ ದೋಷಯುಕ್ತ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಎಳೆಯುತ್ತಿದೆ ಎಂದು ವಿಡಿಯೋವನ್ನು ಹಂಚಿಕೊಂಡಿದ್ದರು.

ಹಾಗಿದ್ದರೆ ಹೊಸದಾಗಿ ಜಾರಿಗೆ ತಂದಿರುವ ವಂದೇ ಭಾರತ್ ರೈಲಿನ ಸೇವೆಯಲ್ಲಿ ದೋಷಗಳಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 18 ಫೆಬ್ರವರಿ, 2024 ರಂದು the_rail_town ಎಂಬ ಇನ್‌ಸ್ಟಾ ಬಳಕೆದಾರರೊಬ್ಬರು Instagram ನಲ್ಲಿ ಅಪ್‌ಲೋಡ್ ಮಾಡಿದ ಮೂಲ ವಿಡಿಯೋ ಲಭ್ಯವಾಗಿದೆ.

ಈ ವಿಡಿಯೋದ ಟೈಟಲ್ ಪ್ರಕಾರ ಶಕುರ್ಬಸ್ತಿ ರೈಲು ಸೆಟ್ ಡಿಪೋದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೆಲವು ಕೋಚ್‌ಗಳೊಂದಿಗೆ WDS6 ಅನ್ನು ಜೋಡಿಸುವ ಪ್ರಕ್ರಿಯೆಯಾಗಿದೆ ಎಂದು ಚಿತ್ರೀಕರಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by DeeP (@the_rail_town)

ಅಂದರೆ ಖಾಲಿ ವಂದೇ ಭಾರತ್ ರೈಲನ್ನು ದಿನನಿತ್ಯದ ಪ್ರಕ್ರಿಯೆಯ ಭಾಗವಾಗಿ ಮತ್ತೊಂದು ಎಂಜಿನ್‌ನಿಂದ ಎಳೆಯಲಾಗುತ್ತದೆ. ಹೊಸ ವಂದೇ ಭಾರತ್ ರೈಲು ಹಳಿಗಳಿಗೆ ಪರಿಚಯಿಸಿದಾಗ, ಅದು ಕಾರ್ಯಾರಂಭಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ, ವಂದೇ ಭಾರತ್ ಅನ್ನು ಆರಂಭದಲ್ಲಿ ಅದರ ಮಾರ್ಗವನ್ನು ನಿಗದಿಪಡಿಸುವವರೆಗೆ ಮತ್ತೊಂದು ಎಂಜಿನ್‌ನಿಂದ ಎಳೆಯಲಾಗುತ್ತದೆ. ಮಾರ್ಗವನ್ನು ನಿರ್ಧರಿಸಿದ ನಂತರ, ರೈಲನ್ನು ಅದರ ಸ್ವಂತ ಚಾಲಕ ಮತ್ತು ಸಿಬ್ಬಂದಿ ನಿರ್ವಹಿಸುತ್ತಾರೆ. ಇದಕ್ಕೂ ಮೊದಲು, ಆರಂಭಿಕ ಪರೀಕ್ಷೆಯ ಸಮಯದಲ್ಲಿ, ನಿಯಮಿತ ಸೇವೆ ಪ್ರಾರಂಭವಾಗುವ ಮೊದಲು ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇನ್ನೊಬ್ಬ ಚಾಲಕ ರೈಲನ್ನು ನಿರ್ವಹಿಸುತ್ತಾನೆ.

ಈ ಹಿಂದೆ, ಇದೇ ರೀತಿಯ ವೀಡಿಯೊ ವೈರಲ್ ಆಗಿದ್ದು, ದೋಷಯುಕ್ತ ವಂದೇ ಭಾರತ್ ಅನ್ನು ಲೋಕೋಮೋಟಿವ್ ಇಂಜಿನ್‌ನಿಂದ ಎಳೆಯಲಾಗುತ್ತಿದೆ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದರು. ಆದರೆ, ಖಾಲಿ ಕೋಚಿಂಗ್ ರೇಕ್ ಅನ್ನು ಕಾರ್ಯಾರಂಭಕ್ಕೆ ಕಳುಹಿಸಲಾಗುತ್ತಿದ್ದು, ಇದು ನಿತ್ಯದ ಪ್ರಕ್ರಿಯೆಯ ಭಾಗವಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟೀಕರಣ ನೀಡಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ರೈಲು ಇಂಜಿನ್ ಮೂಲಕ ವಂದೇ ಭಾರತ್ ರೈಲನ್ನು ಎಳೆಯಲಾಗುತ್ತಿದೆ ಎಂದು ತೋರಿಸುವ ವಿಡಿಯೋ ವಾಸ್ತವವಾಗಿ ಷಂಟಿಂಗ್ ಟ್ರಯಲ್‌ನ ಒಂದು ಭಾಗವಾಗಿದೆ, ಅಲ್ಲಿ ಪ್ರಮಾಣೀಕರಣವನ್ನು ನೀಡುವ ಮೊದಲು ರೈಲುಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ಆದರೆ ಇದನ್ನೆ ವಂದೇ ಬಾರತ್ ರೈಲು ದೋಷಪೂರಿತವಾಗಿರುವ ಕಾರಣ ಮತ್ತೊಂದು ಎಂಜಿನ್‌ನಿಂದ ಎಳೆಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಳೆಯ ‘ಪ್ರೆಗಾ ನ್ಯೂಸ್’ ಜಾಹೀರಾತನ್ನು ಕಾಂಗ್ರೆಸ್‌ನ ಮಹಾಲಕ್ಷ್ಮಿ ಯೋಜನೆಯ ಜಾಹೀರಾತು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights