ಜೂನ್ 14ರಿಂದ 25ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ : ಈ ಬಾರಿ ಪರೀಕ್ಷಾ ಅವಧಿ 3ಗಂಟೆ 15 ನಿಮಿಷ!
ಜೂನ್ 14 ರಿಂದ ಜೂನ್ 25ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಎಂದು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸಿಎಂ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್, “ಜೂನ್ 14 ರಿಂದ ಜೂನ್ 25ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷಾ ಅವಧಿ 3ಗಂಟೆ 15 ನಿಮಿಷ ಇರಲಿದೆ. ಪರೀಕ್ಷಾ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಜೊತೆಗೆ 1ರಿಂದ 5ನೇ ಕ್ಲಾಸ್ ತೆರೆಯುವ ಬಗ್ಗೆ ಸದ್ಯಕ್ಕೆ ನಿರ್ಧಾರ ಮಾಡಿಲ್ಲ. 6-8 ತರಗತಿಗಳ ಬಗ್ಗೆ ಫೆಬ್ರವರಿ ಎರಡೆನೇ ವಾರದಲ್ಲಿ ತೀರ್ಮಾನ ಮಾಡಲಾಗುವುದು. ಸದ್ಯ 6,7,8 ನೇ ತರಗತಿ ವಿದ್ಯಾಗಮ ಮುಂದುವರಿಯಲಿವೆ. ಫೆಬ್ರವರಿ 1ರಿಂದ 9.10.11.12 ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತವೆ ಎಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಇಂದು ಶಾಲಾ ಶುಲ್ಕದ ಬಗ್ಗೆ ಸಿಎಂರೊಂದಿಗೆ ಸಭೆ ಮಾಡಲಾಗುತ್ತಿದೆ ಅಂದುಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ” ಶಾಲಾ-ಕಾಲೇಜು ಶುಲ್ಕದ ಬಗ್ಗೆ ಸಲಹಾ ಸಮಿತಿ ಮತ್ತು ಸಿಎಂ ಜೊತೆ ಚರ್ಚೆ ಮಾಡಬೇಕು. ಬಳಿಕವಷ್ಟೇ ಶುಲ್ಕ ನಿಗದಿ ಬಗ್ಗೆ ತೀರ್ಮಾನಿಸಲಾಗುವುದು” ಎಂದು ಹೇಳಿದ್ದಾರೆ.
ಹೀಗಾಗಿ ಶುಲ್ಕ ನಿಗಧಿ ಮಾಡದ ಹಿನ್ನೆಲೆ ಪೋಷಕರು ಇದೇ ಭಾನುವಾರ ಜನವರಿ 31 ರಂದು ಉಗ್ರ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ಎಸ್ಎಸ್ಎಲ್ಸಿ ಪರಿಕ್ಷಾ ವೇಳಾ ಪಟ್ಟಿ ಹೀಗಿದೆ :-
ಜೂನ್ 14- ಪ್ರಥಮ ಭಾಷೆ
ಜೂನ್ 16 -ಗಣಿತ, ಸಮಾಜಶಾಸ್ತ್ರ
ಜೂನ್ 18-ದ್ವಿತೀಯ ಭಾಷೆ ಇಂಗ್ಲೀಷ್ ಅಥವಾ ಕನ್ನಡ
ಜೂನ್ 21- ವಿಜ್ಞಾನ
ಜೂನ್ 23-ತೃತೀಯ ಭಾಷೆ
ಜೂನ್25-ಸಮಾಜ ವಿಜ್ಞಾನ ಪರೀಕ್ಷೆ