ರೈತರ ಪರೇಡ್‌ನಲ್ಲಿ ಪೊಲೀಸರ ದಾಳಿ; ವಾಸ್ತವವನ್ನು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ತಿರುಚಿದ್ದು ಹೀಗೆ!

ಗಣರಾಜ್ಯೋತ್ಸ ದಿನದ ರೈತರ ಕಿಸಾನ್ ಗಣತಂತ್ರ ಮೆರವಣಿಗೆಗೆ ಪೊಲೀಸರು ಅಡ್ಡಿಪಡಿಸಿದ ನಂತರ, ಸಮುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಕ್ಷಣವೇ ಪರೇಡ್‌ ನಿಲ್ಲಿಸಿತು. ರೈತ ಮುಖಂಡರು ಮೆರವಣಿಗೆಯಲ್ಲಿದ್ದ ಎಲ್ಲರೂ ಸಂಜೆ 6 ಗಂಟೆಗೆ ತಮ್ಮ ಪ್ರತಿಭಟನಾ ಸ್ಥಳಗಳಿಗೆ ಮರಳುವಂತೆ ಮನವಿ ಮಾಡಿದ್ದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮುಖಂಡರ ಕರೆಗೆ ಓಗೊಟ್ಟು ಪ್ರತಿಭಟನಾ ಸ್ಥಳಕ್ಕೆ ಮರಳುತ್ತಿದ್ದರು. ಅದರೆ, ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು, ಅದರಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಶಾಂತಿಯುತ ಪ್ರತಿಭಟನಾಕಾರರು ಗಾಯಗೊಂಡರು.

ಅದೇ ಸಮಯದಲ್ಲಿ ಬಿಜೆಪಿ ಬೆಂಬಲಿಗ ನಟ ದೀಪ್‌ ಸಿಧು ಪ್ರಚೋದನೆಯಿಂದಾಗಿ ಕೆಲವು ಅಶಿಸ್ತಿನ ಜನರ ಗುಂಪು ಕೆಂಪು ಕೋಟೆಗೆ ನುಗ್ಗಿದರು. ಐಟಿಒ ಬಳಿ ಟ್ರಾಕ್ಟರ್ ಉರುಳಿತು. ರೈತರೊಬ್ಬರು ಸಾವನ್ನಪ್ಪಿದ್ದರು. ಟ್ರ್ಯಾಕ್ಟರ್ ಓಡಿಸುತ್ತಿದ್ದ ರೈತನ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಭಾಗವಹಿಸಿದವರು ಆರೋಪಿಸಿದ್ದಾರೆ. ರೈತರ ಆಂದೋಲನಕ್ಕಾಗಿ ಅವರ ಸಾವನ್ನು ಗೌರವಿಸಲು ಮೃತ ರೈತನನ್ನು ಭಾರತೀಯ ತ್ರಿವರ್ಣ ಧ್ವಜದಲ್ಲಿ ಮುಚ್ಚಲಾಯಿತು. ಗೋದಿ ಮೀಡಿಯಾಗಳು ಮೃತ ವ್ಯಕ್ತಿಯ ದೇಹದ ಬಳಿಗೆ ಸುಳಿಯದಂತೆ ನೋಡಿಕೊಂಡರು.

farmers protest

ಸಾವನ್ನಪ್ಪಿದಾತ ರೈತ ಎಂದು ಇನ್ನೂ ತಿಳಿದಿಲ್ಲದ ಸಂದರ್ಭದಲ್ಲಿ, ಇದನ್ನು ಗಣರಾಜ್ಯೋತ್ಸವಕ್ಕೆ ಸಾವು ಎಂದು ಹೇಳಲಾಗಿತ್ತು. ದೆಹಲಿಯ ಕೆಂಪು ಕೋಟೆಯ ಸುತ್ತಲೂ ಬಿಗಿ ಭದ್ರತೆಗೊಳಿಸುವಂತೆ ಸರ್ಕಾರ ಕರೆ ನೀಡಿತ್ತು. ಕೆಂಪುಕೋಟೆ ಮತ್ತು ಈಟಿಒ ಸರ್ಕಲ್‌ ಬಳಿ ಗಾಯಗೊಂಡ ರೈತರ ಬಗ್ಗೆ ರೈತ ಸಂಘಟನೆಗಳು ಬುಧವಾರ ಮಧ್ಯಾಹ್ನದ ವರೆಗೂ ಮಾಹಿತಿ ಕಲೆ ಹಾಕುತ್ತಿದ್ದವು. ಆದರೆ, 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ದಿ ಹಿಂದೂ ಮಂಗಳವಾರವೇ ವರದಿ ಮಾಡಿದೆ.

ಕೆಂಪು ಕೋಟೆ ಪ್ರವೇಶದ ಮೊದಲು, ನಗರದ ವಿವಿಧ ಭಾಗಗಳಲ್ಲಿ ರೈತರ ಮೆರವಣಿಗೆಗಳ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ದಾಳಿ ನಡೆಸಲಾಯಿತು. ಕೆಲವು ಹಂತಗಳಲ್ಲಿ, ಟ್ರ್ಯಾಕ್ಟರ್‌ನಲ್ಲಿದ್ದ ರಾಷ್ಟ್ರ ಧ್ವಜಗಳನ್ನು ಪೊಲೀಸರು ಮುರಿದು ತೆಗೆದಿದ್ದನ್ನು ವಿಡಿಯೋದಲ್ಲಿ ದಾಖಲಾಗಿವೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ ಹಿರಿಯ ರೈತ ಸಹಾಯವಾಣಿ ಸಿಬ್ಬಂದಿ ಪ್ರಕಾರ, ಟಿಕ್ರಿ ಗಡಿಯಿಂದ ರೈತರ ಮೆರವಣಿಗೆ ನಂಗ್ಲೋಯಿ ತನಕ ಶಾಂತಿಯುತವಾಗಿ ಮುಂದುವರೆಯಿತು. ಅಲ್ಲಿ ರೈತರ ಮೇಲೆ ಅಶ್ರುವಾಯು ಮತ್ತು ಲಾಠಿ ಚಾರ್ಜ್ ದಾಳಿ  ನಡೆಸಲಾಯಿತು ಎಂದು ತಿಳಿಸಿದ್ದಾರೆ.

“ದಾರಿಯುದ್ದಕ್ಕೂ, ದೆಹಲಿಯ ನಿವಾಸಿಗಳು ರೋಹ್ಟಕ್ ರಸ್ತೆಯಲ್ಲಿ ನೆರೆದಿದ್ದರು. ಅವರು ಟ್ರ್ಯಾಕ್ಟರ್ಗಳಲ್ಲಿ ಬರುತ್ತಿದ್ದ ರೈತರ ಧ್ವಜಗಳು, ಸಿಹಿತಿಂಡಿಗಳು ಮತ್ತು ಗುಲಾಬಿ ಹೂಗಳೊಂದಿಗೆ ಚಪ್ಪಾಳೆ ತಟ್ಟಿ, ಹರ್ಷೋದ್ಗಾರದಿಂದ ಸ್ವಾಗತಿಸಿದರು! ಇದು ಸುಂದರವಾದ ಮತ್ತು ಹೃತ್ಪೂರ್ವಕ ದೃಶ್ಯವಾಗಿತ್ತು. ನಗರದ ಮತ್ತೊಂದು ಭಾಗದಲ್ಲಿ ಸಂಭವಿಸಿದ ಅಹಿತರ ಘಟನೆ ತುಂಬಾ ದುಃಖದ ಅಪವಾದ” ಎಂದು ಅನುಭವಿ ಹೇಳಿದರು.

ರೈತರು ಮತ್ತು ಹಲವು ಮುಖಂಡರು ಕೆಂಪು ಕೋಟೆ ಮತ್ತು ಐಟಿಒದಲ್ಲಿ ನಡೆದ ಘಟನೆಗಳನ್ನು ಖಂಡಿಸಿದರು. ಅಪರಿಚಿತ ರೈತನ ಸಾವಿಗೆ ಶೋಕ ವ್ಯಕ್ತಪಡಿಸಿದರು. ಅಲ್ಲದೆ, ಲಕ್ಷಾಂತರ ರೈತರು ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಅವರು ನೆನಪಿಸಿದರು.

ಅಂತೆಯೇ, ಹಿಂದಿ ಇ-ಪತ್ರಿಕೆಯ ಮಾಜಿ ಸಂಪಾದಕ ಜನಸತ್ತ ಓಂ ಥಾಂವಿ ಅವರು ಮಂಗಳವಾರ ನಡೆದ ಘಟನೆಗಳ ವಿಚಾರದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳ ಪ್ರಸಾರ ಮತ್ತು ನಡವಳಿಕೆಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: BJP ಬೆಂಬಲಿಗ ದೀಪ್ ಸಿಧು ಕೆಂಪುಕೋಟೆಗೆ ಧ್ವನಿವರ್ಧಕದೊಂದಿಗೆ ತಲುಪಿದ್ದು ಹೇಗೆ? ತನಿಖೆಗೆ ಯೋಗೇಂದ್ರ ಯಾದವ್ ಆಗ್ರಹ

ಎಸ್‌ಕೆಎಂನ 40 ರೈತ ಸಂಘಗಳೊಂದಿಗೆ ಬಹಿರಂಗವಾಗಿ ಭಿನ್ನಾಭಿಪ್ರಾಯ ಹೊಂದಿರುವ ರೈತರ ಒಂದು ಬಣವನ್ನು ಮಾತ್ರ ಮಾಧ್ಯಮಗಳು ತೋರಿಸುತ್ತಿವೆ. ದೆಹಲಿ ಪೊಲೀಸರು ಹಾಕಿದ್ದ ಮಾರ್ಗದ ಹೊರತಾಗಿ ತಾವು ಪ್ರತ್ಯೇಕ ಮೆರವಣಿಗೆ ಹೋಗುವುದಾಗಿ ಬಣ ಹೇಳಿತ್ತು ಎಂದು ಅವರು ಟೀಕಿಸಿದರು.

“ಎಸ್‌ಕೆಎಂನ ರೈತರು ಸಂಘಟನೆ ಮತ್ತು ಸರ್ಕಾರದ ನಡುವೆ ಒಪ್ಪಿತ ಮಾರ್ಗದಲ್ಲಿ ತಮ್ಮ ಟ್ರಾಕ್ಟರ್ ಮೆರವಣಿಗೆಯನ್ನು ಪ್ರಾರಂಭಿಸಿದ್ದರು. ಬಹಳ ಶಾಂತಿಯುತವಾಗಿ ಟ್ರ್ಯಾಕ್ಟರ್ ಪೆರೇಡ್ ನಡೆಯುತ್ತಿತ್ತು. ದೆಹಲಿಯ ಜನರು ಅವರ ಮೇಲೆ ಹೂಗಳನ್ನು ಸುರಿಸುತ್ತಿದ್ದರು. ಈ ವೇಳೆ ಸಚಿವರೊಂದಿಗೆ ಮಾತುಕತೆಗೆ ಹಾಜರಾಗಿದ್ದ ರೈತ ನಾಯಕರನ್ನು ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಚರ್ಚೆಗೆ ಒಳಗೊಳ್ಳಲಿಲ್ಲ. ಬದಲಾಗಿ, ಅವರು [ಮಾಧ್ಯಮಗಳು] ಪದೇ ಪದೇ ನಾಯಕರು ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿತ್ತಾ ಬಾಯಿ ಬಡಿದುಕೊಳ್ಳುತ್ತಿದ್ದವು ಎಂದು ತನ್ವಿ ಹೇಳಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಫೆಬ್ರವರಿ 01 ರಂದು ಪಾರ್ಲಿಮೆಂಟ್‌ ಚಲೋ ನಡೆಸಲು ಉದ್ದೇಶಿಸಿದ್ದ ರೈತರು, ಅದನ್ನು ಮುಂದೂಡಿದ್ದಾರೆ. ಬದಲಾಗಿ ಜನವರಿ 30 ರಂದು ಗಾಂಧಿ ಹುತಾತ್ಮ ದಿನದಂದು ದೇಶಾದ್ಯಂತ ರೈತರು ಉಪವಾಸ ಸತ್ಯಾಗ್ರಹ ನಡೆಸಲು ಕರೆಕೊಟ್ಟಿದ್ದಾರೆ.

ಇದನ್ನೂ ಓದಿ: ರೈತ ಮುಖಂಡರ ವಿರುದ್ಧ ಲುಕ್‌ಔಟ್‌ ಸುತ್ತೋಲೆ ಹೊರಡಿಸಲು ಅಮಿತ್‌ ಶಾ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights