FACT CHECK | ಹಳೆಯ ‘ಪ್ರೆಗಾ ನ್ಯೂಸ್’ ಜಾಹೀರಾತನ್ನು ಕಾಂಗ್ರೆಸ್‌ನ ಮಹಾಲಕ್ಷ್ಮಿ ಯೋಜನೆಯ ಜಾಹೀರಾತು ಎಂದು ತಪ್ಪಾಗಿ ಹಂಚಿಕೆ

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಮಹಾಲಕ್ಷ್ಮಿ ಸ್ಕೀಂನ ಘೋಷಣೆಯನ್ನು ಹೊರಡಿಸಿದ್ದು, ಈ ಯೋಜನೆಯಿಂದ ಬಡಕುಟುಂಬದ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರೂ ಸಿಗಲಿದೆ.

ಇತ್ತೀಚಿನ ವೀಡಿಯೋ ಸಂದೇಶದಲ್ಲಿ ಸೋನಿಯಾ ಗಾಂಧಿ ಅವರು ದೇಶದಲ್ಲಿ ಮಹಿಳೆಯರು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರನ್ನು ಬೆಂಬಲಿಸುವ ಗುರಿಯನ್ನು ‘ಮಹಾಲಕ್ಷ್ಮಿ’ ಯೋಜನೆ ಹೊಂದಿದೆ ಎಂದು ಉಲ್ಲೇಖಿಸಿದ್ದಾರೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರನ್ನು ಗುರುತಿಸುತ್ತದೆ ಮತ್ತು ಅವರಿಗೆ ಮಾಸಿಕ 8,500 ರೂ ಗಳಂತೆ ಒಟ್ಟು 1 ಲಕ್ಷ ರೂ.ನೀಡಲಿದೆ ಎನ್ನಲಾಗಿದೆ.

ಈಗ ಸಾಮಾಜಿಕ ಮಾಧ್ಯಮಗಳಲ್ಲಿ ‘ಮಹಾಲಕ್ಷ್ಮಿ’ ಯೋಜನೆಯ ಜಾಹೀರಾತು ಎಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮಹಾಲಕ್ಷ್ಮಿ ಯೋಜನೆಯ ಪ್ರಚಾರದ ಭಾಗವಾಗಿ ಕಾಂಗ್ರೆಸ್ ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಪೋಸ್ಟ್‌ ಮಾಡಲಾಗದೆ. ವಿಡಿಯೋದಲ್ಲಿ ಹೌಸ್ ಕೀಪಿಂಗ್ ಮಹಿಳೆಯೊಬ್ಬರು ಸ್ವಚ್ಚತಾ ಕೆಲಸವನ್ನು ಮಾಡುವಾಗ, ಮತ್ತೊಬ್ಬ ಮಹಿಳೆ ತನ್ನ ಮಗುವಿಗೆ ಹಾಲು ಕುಡಿಸಲು ತಂದಿದ್ದ ಬಾಟಲಿಯನ್ನು ಕೆಳಗೆ ಬೀಳಿಸುತ್ತಾಳೆ ಅದನ್ನು ಗಮನಿಸುವ ಮತ್ತಿಬ್ಬರು ಮಹಿಳೆಯರು ಸಹಾಯಕ್ಕೆ ಬರುವುದಿಲ್ಲ. ಆಗ ಸ್ವಚ್ಚತಾ ಕೆಲಸ ಮಾಡುತ್ತಿದ್ದ ಮಹಿಳೆ ಆಕೆಗೆ ಸಹಾಯ ಮಾಡುತ್ತಾಳೆ.

ಸ್ವೀಪಿಂಗ್ ಮಾಡುತ್ತಿದ್ದ ಮಹಿಳೆಯನ್ನು ಕುರಿತು ನಿಮಗೆ ಎಷ್ಟು ಮಕ್ಕಳು, ನೀವು ಮನೆ ಮತ್ತು ಮಕ್ಕಳು ಎರಡೂ ಕೆಲಸವನ್ನು ಹೇಗೆ ನಿಭಾಯಿಸುವಿರಿ ಎಂದು ಪ್ರಶ್ನಿಸುತ್ತಾರೆ. ಹೌಸ್‌ ಕೀಪಿಂಗ್ ಮಹಿಳೆ ಉತ್ತರಿಸುತ್ತಾ, 10 ಗಂಟೆ ಪಾಳಿಯಲ್ಲಿ ಕಚೇರಿ ಕೆಲಸ ಮುಗಿಸಿ ಮನೆಗೆ ಹೋದ ಮೇಲೆ ತಾಯಿಯ ಕೆಲಸ ಎನ್ನುತ್ತಾರೆ. ಹೀಗೆ ಡಬ್ಬಲ್ ಕೆಲಸಗಳನ್ನು ಮಾಡುವುದರಲ್ಲೇ ನಿನ್ನ ಆಯಸ್ಸು ಮುಗಿಯುತ್ತದೆ ಎಂದು ಹೇಳುವುದನ್ನು ಕೇಳಬಹುದು.

ಅದೇ ವಿಡಿಯೋದಲ್ಲಿ ರಾಹುಲ್ ಗಾಂಧಿಯವರ ಭಾಷಣದಲ್ಲಿ “ಭಾರತೀಯ ಮಹಿಳೆಯರು ಕಚೇರಿಯಲ್ಲಿ 8 ಗಂಟೆ ಕೆಲಸ ಮಾಡುತ್ತಾರೆ ಮತ್ತು ಮನೆಯಲ್ಲಿ 8 ಗಂಟೆ ಕೆಲಸ ಮಾಡುತ್ತಾರೆ ಮತ್ತು ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ ಆದರೆ ಅವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ, ಆದ್ದರಿಂದ ಕಾಂಗ್ರೆಸ್ ಪಕ್ಷವು ಒಂದು ಯೋಜನೆಯನ್ನು ತಂದಿದೆ. ಭಾರತದ ಕೋಟಿಗಟ್ಟಲೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಅಂದರೆ ತಿಂಗಳಿಗೆ 8500 ರೂಪಾಯಿಗಳನ್ನು ಒದಗಿಸುವ ‘ಮಹಾಲಕ್ಷ್ಮಿ ಯೋಜನೆ’. ಕಾಂಗ್ರೆಸ್‌ಗೆ ಮತ ಹಾಕಿದರೆ ಭಾರತ ಅಭಿವೃದ್ಧಿಯಾಗುವುದು ಗ್ಯಾರಂಟಿ ಎಂದು ಹೇಳುವ ಮೂಲಕ ಈ ವೈರಲ್ ವಿಡಿಯೋ ಕೊನೆಗೊಳ್ಳುತ್ತದೆ.

ಈ ಯೋಜನೆಯನ್ನು ಬಡ ಮಹಿಳೆಯರನ್ನು ಬೆಂಬಲಿಸಲು ಮತ್ತು ಅವರ ಆರ್ಥಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಘೋಷಿಸಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಅಸ್ಸಾಂ ಇಂಡಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಜುಬೇರ್ ಅನಮ್ ಹಂಚಿಕೊಂಡಿದ್ದಾರೆ. ಹಾಗೆಯೇ ಅನೇಕ ಕಾಂಗ್ರೆಸ್ ಪ್ರತಿನಿಧಿಗಳು ಮತ್ತು ಬೆಂಬಲಿಗರು ಅದೇ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಅವುಗಳನ್ನು ಇಲ್ಲಿ, ಮತ್ತು ಇಲ್ಲಿ  ನೋಡಬಹುದು. ಹಾಗಿದ್ದರೆ ಈ ಜಾಹೀರಾತಿನ ವಿಡಿಯೋವನ್ನು ಕಾಂಗ್ರೆಸ್‌ ಮಹಾಲಕ್ಷ್ಮಿ ಯೋಜನೆಯ ಭಾಗವಾಗಿ ಹೊರತಂದಿದೆಯೇ ಎಮದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಒಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜಾಹಿರಾತಿನ ಮೂಲ ವಿಡಿಯೋ ಲಭ್ಯವಾಗಿದ್ದು, ‘ವಿಶ್ವ ಮಹಿಳಾ ದಿನ’ಆಚರಣೆಯ ಭಾಗವಾಗಿ ಪ್ರೆಗಾ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ 19 ಫೆಬ್ರವರಿ 2022 ರಂದು ವಿಶೇಷ ಜಾಹೀರಾತೊಂದನ್ನು ಪೋಸ್ಟ್‌ ಮಾಡಿರುವುದು ಕಂಡುಬಂದಿದೆ.

ಈ ವೀಡಿಯೊ ವಿವರಣೆಯಲ್ಲಿ ‘2022 ಮಹಿಳಾ ದಿನವನ್ನು ಪ್ರೀಗಾ ನ್ಯೂಸ್‌ನೊಂದಿಗೆ ಆಚರಿಸಿ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.  ಮಹಿಳೆಯರು ಕೆಲಸವನ್ನು ಮಾಡುತ್ತಾ ಏನನ್ನಾದರೂ ಸಾಧಿಸುತ್ತಾರೆ ಮತ್ತು ತಾಯಿಯಾಗಿ ಅವರು ಮಗುವನ್ನು ಮತ್ತು ಕುಟುಂಬವನ್ನು ನೋಡಿಕೊಳ್ಳುತ್ತಾರೆ ಎಂಬ ಸಂದೇಶವನ್ನು ನೀಡುವ ದೃಷ್ಟಿಕೋನವನ್ನು ಈ ಜಾಹಿರಾತಿನಲ್ಲಿ ನೀಡಲಾಗಿದೆ.

2022ರ ಹಳೆಯ ಪ್ರೆಗಾ ನ್ಯೂಸ್ ಮಹಿಳಾ ದಿನಾಚರಣೆಯ ಜಾಹೀರಾತನ್ನು ಕಾಂಗ್ರೆಸ್ ಚುನಾವಣೆಯ ಮಹಾಲಕ್ಷ್ಮಿ ಯೋಜನೆಯ ಜಾಹೀರಾತಿನಂತೆ ಎಡಿಟ್ ಮಾಡಲಾಗಿದೆ ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಚುನಾವಣಾ ಭರವಸೆಯಾದ ಮಹಾಲಕ್ಷ್ಮಿ ಯೋಜನೆ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಕ್ಲಿಪ್ ಮಾಡಲಾದ ವೈರಲ್ ವಿಡಿಯೋ ಪ್ರೆಗಾ ನ್ಯೂಸ್ ಮಹಿಳಾ ದಿನದ ವಿಶೇಷ ಜಾಹೀರಾತಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

 


ಇದನ್ನು ಓದಿರಿ : FACT CHECK | ‘ಜನೇಧಾರಿ ಬ್ರಾಹ್ಮಣ’ ರಾಹುಲ್ ಗಾಂಧಿಯ ಕೋಣೆಯಲ್ಲಿ ಕಂಡುಬಂದಿದ್ದು ಏಸು ಕ್ರಿಸ್ತನ ಚಿತ್ರ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights