ಹಾವುಗಳಿಂದ ಸುತ್ತುವರೆದ ಧೈರ್ಯಶಾಲಿ : ಬೆಚ್ಚಿಬೀಳಿಸುವ ವೀಡಿಯೊ ವೈರಲ್..!

ಹಾವು ಇದೆ ಅನ್ನೋ ಸುದ್ದಿ ಕಿವಿಗೆ ಬಿದ್ರೆ ಮಾರು ದೂರ ಓಡಿ ಹೋಗುವ ಜನರೇ ಹೆಚ್ಚು. ಆದರೆ ಇಲ್ಲೊಬ್ಬ ಮನುಷ್ಯ ಹೆಬ್ಬಾವುಗಳಿಂದ ಸುತ್ತುವರೆದು ಮಾತನಾಡುವ ದೃಶ್ಯ ನೋಡುಗರನ್ನ ಹವ್ವಾರಿಸಿದೆ.

ಕ್ಯಾಲಿಫೋರ್ನಿಯಾದ ಮೃಗಾಲಯದ ಹಳೆಯ ವೀಡಿಯೊ ಟ್ವಿಟ್ಟರ್ನಲ್ಲಿ ಮತ್ತೆ ಕಾಣಿಸಿಕೊಂಡಿದ್ದು ನೋಡುಗರನ್ನು ಬೆಚ್ಚಿಬೀಳಿಸಿದೆ. ಮೃಗಾಲಯದ ಸಂಸ್ಥಾಪಕ ಜೇ ಬ್ರೂಯರ್ ಹಲವಾರು ದೊಡ್ಡ ಹಾವುಗಳ ಮಧ್ಯೆ ಕುಳಿತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

https://twitter.com/Aqualady6666/status/1356859859782815745?ref_src=twsrc%5Etfw%7Ctwcamp%5Etweetembed%7Ctwterm%5E1356859859782815745%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-of-man-surrounded-by-snakes-couldnt-possibly-get-worse-but-it-does-2363111

ಎಲ್ಲಾ ಜಾತಿಯ ಹಾವುಗಳ ಮಧ್ಯೆ ಇರುವ ಬ್ರೂಯರ್ ಲವಲವಿಕೆಯಿಂದ ಯಾವುದೇ ಭಯವಿಲ್ಲದೇ ಮಾತನಾಡುತ್ತಾರೆ. ಜೊತೆಗೆ ಇದು ತನ್ನ ಕನಸು ನನಸಾಗಿದೆ ಎಂದು ವಿವರಿಸುತ್ತಾನೆ.

ಎಲ್ಲಾ ರೀತಿಯ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳ ಹಾವುಗಳನ್ನು ಈತನನ್ನು ಸುತ್ತುವರೆದಿರುವುದನ್ನ ವೀಡಿಯೋದಲ್ಲಿ ನೋಡಬಹುದು. ಮಾತ್ರವಲ್ಲ ಈತನ ಮೇಲೆ ಒಂದು ಗುಂಪಿನ ಹಾವುಗಳು ಒಟ್ಟಿಗೆ ಸಿಕ್ಕು ಬೀಳುವುದು ದೃಶ್ಯ ಕೂಡ ಭಯಾನಕವಾಗಿದೆ.

ಈ ವೀಡಿಯೊ ಟ್ವಿಟರ್‌ನಲ್ಲಿ 2.7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ, ಅಲ್ಲಿ ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದು, ಹಣ ನೀಡಿದ್ದರೂ ಸಹ ಹಾವುಗಳೊಂದಿಗೆ ಒಂದು ಗಂಟೆ ಕಳೆಯುವುದಿಲ್ಲ ಎಂದಿದ್ದಾರೆ.

ಈ ವಿಡಿಯೋವನ್ನು 2019 ರ ಬಳಕ ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights