ಫ್ಯಾಕ್ಟ್‌ಚೆಕ್: ಪಶ್ಚಿಮ ಬಂಗಾಳದಲ್ಲಿ ಸಜೀವ ದಹನವಾದವರು ಆದಿವಾಸಿ ಹಿಂದೂಗಳು ಎಂಬುದು ಸುಳ್ಳು

ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹತ್‌ನಲ್ಲಿ “12 ಜನ ಹಿಂದೂ ಆದಿವಾಸಿಗಳನ್ನು ಸಜೀವವಾದಿ ದಹನ ಮಾಡಲಾಗಿದೆ” ಎಂದು ಆರೋಪಿಸಿ ಪೋಸ್ಟ್‌ವೊಂದು ವೈರಲ್ ಆಗಿದೆ. ಈ ದುರಂತದಲ್ಲಿ ಸಾವನಪ್ಪಿದವರಲ್ಲಿ 10ಜನ ಮಹಿಳೆಯರಾಗಿದ್ದು 2ಮಕ್ಕಳು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ”. ಹಾಗಿದ್ದರೆ ಪಶ್ಚಿಮ ಬಂಗಾಳದ  ಈ ಪೈಶಾಚಿಕ ದುರಂತದಲ್ಲಿ ಸಾವನಪ್ಪಿದವರ ಬಗ್ಗೆ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗುತ್ತಿರುವ ಪೋಸ್ಟ್‌ನ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಘಟನೆಗೆ ಸಂಬಂಧಿಸಿದಂತೆ ಕೀ ವರ್ಡ್‌ಗಳನ್ನು ಬಳಸಿಕೊಂಡು ಸರ್ಚ್‌ ಮಾಡಲಾಗಿದ್ದು ಘಟನೆಗೆ ಸಂಬಂಧಿಸಿದಂತೆ 22 ಮಾರ್ಚ್ 2022 ರಂದು ಸಜೀವ ದಹನವಾದ ಎಲ್ಲರೂ ಮುಸಲ್ಮಾನರಾಗಿದ್ದು , ಇಲ್ಲಿ ಯಾವ ಆದಿವಾಸಿ ಹಿಂದೂಗಳು ಸಾವಿಗೀಡಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ಸುಳ್ಳಾಗಿದೆ. ಅಲ್ಲದೆ ಮೃತ ಪಟ್ಟವರ ಸಂಖ್ಯೆ 8 ಹೊರತು 12 ಅಲ್ಲ. ಕೃತ್ಯದಲ್ಲಿ ಹತರಾದವರು ಮುಸ್ಲಿಮರು ಎಂದು ಖಚಿತವಾಗಿದ್ದು ಅವರ ಹೆಸರುಗಳು ಕೆಳಗಿನಂತಿವೆ.

  • ಶೆಲ್ಲಿ ಬೀಬಿ (32)
  • ತಲಿ ಖಾತುನ್(7)
  • ನೌರೇನ್ ಬೀಬಿ(75)
  • ರೂಪಾಲಿ ಬೀಬಿ(44)
  • ಝಾನರ ಬೀಬಿ(38)
  • ಲಿಲಿ ಖಾತುನ್ (18)
  • ಖಾಜಿ ಸಜ್ದಿರ್ ರೆಹಮಾನ್(22)
  • ಮೀನಾ ಬೀಬಿ(40)

ಪೈಶಾಚಿಕ ಘಟನೆಯೊಂದರಲ್ಲಿ ಟಿಎಂಸಿ ನಾಯಕನ ಹತ್ಯೆ ನಂತರ ರೊಚ್ಚಿಗೆದ್ದ ಕೆಲವರು  ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮಕ್ಕಳು ಮಹಿಳೆಯರು ಸೇರಿದಂತೆ 10  ಜನ ಸಜೀವ ದಹನವಾದ ಘಟನೆ ಪಶ್ಚಿಮ ಬಂಗಾಳದ  ಬಿರ್‌ಭೂಮ್‌ನಲ್ಲಿ ನಡೆದಿದೆ ಎಂದು ANI ವರದಿ ಮಾಡಿದೆ. ಅವರು ಟಿಎಂಸಿ ಕಾರ್ಯಕರ್ತರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.

ರಾಮ್‌ಪುರಹತ್‌ನಲ್ಲಿ  ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದ ಮುಖಂಡನೋರ್ವ ಕಚ್ಚಾ ಬಾಂಬ್ ಸ್ಫೋಟದಿಂದ ಮೃತಪಟ್ಟಿದ್ದ. ಬಾದು ಶೇಕ್‌   ಕಚ್ಚಾ ಬಾಂಬ್‌  ಸ್ಫೋಟಕ್ಕೆ ಬಲಿಯಾದ ವ್ಯಕ್ತಿ. ಈತನ ಸಾವಿನಿಂದ ರೊಚ್ಚಿಗೆದ್ದ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮಕ್ಕಳು ಮಹಿಳೆಯರು ಸೇರಿ ಒಟ್ಟು ಹತ್ತು ಜನ ಸಜೀವವಾಗಿ ದಹನಗೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಪಶ್ಚಿಮ ಬಂಗಾಳದ ಈ ದುರಂತದಲ್ಲಿ ಹತರಾಗಿರುವವರು ಎಲ್ಲರೂ ಮುಸಲ್ಮಾನರು ಆದರೆ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿರುವಂತೆ ಆದಿವಾಸಿ ಹಿಂದೂಗಳಲ್ಲ ಎಂದು ಈ ಲೇಖನದದ ಮೂಲಕ ದೃಡೀಕರಿಸಲಾಗಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಯೋಧ್ಯೆಯಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಇಟ್ಟು ಮೆರವಣಿಗೆ ನಡೆಸಿದ್ದಾರೆ ಎಂಬುದು ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights