ಫ್ಯಾಕ್ಟ್‌ಚೆಕ್: ಸೈಕಲ್ ರಿಕ್ಷಾ ಓಡಿಸಿ ಮಗಳನ್ನು ASI ಮಾಡಿಸಿದ ತಂದೆ ಎಂಬುದು ನಿಜವೇ?

ವೃದ್ದರೊಬ್ಬರನ್ನು ಸೈಕಲ್ ರಿಕ್ಷಾದ ಹಿಂದೆ ಕೂರಿಸಿಕೊಂಡು ಹುಡುಗಿಯೊಬ್ಬಳು ಸೈಕಲ್ ರಿಕ್ಷಾವನ್ನು ತುಳಿಯುತ್ತಿರುವ (ಓಡಿಸುತ್ತಿರುವ) ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಬಡ ತಂದೆ ರಿಕ್ಷಾ ಓಡಿಸುವ ಮೂಲಕ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಪೊಲೀಸ್‌ನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಮಾಡಿಸಿದ್ದಾನೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ರಿಕ್ಷಾ ಓಡಿಸಿ ದುಡಿದ ಹಣದಿಂದ ತಂದೆ ತನ್ನ ಮಗಳನ್ನು ASI ಮಾಡಿದ್ದಾನೆ, ಈ ತಂದೆಯ ತ್ಯಾಗಕ್ಕೆ ಶರಣು” ಎಂಬ ಪಂಜಾಬಿ ಶೀರ್ಷಿಕೆಯೊಂದಿಗೆ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ”. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ತನ್ನ ಮಗಳಿಗಾಗಿ ತಂದೆ ಮಾಡಿರುವ ತ್ಯಾಗದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2016 ರಲ್ಲಿ ಸಿಮ್ರಾನ್ ಮುಂಡಿ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅದೇ ಫೋಟೋವನ್ನು ಅಪ್‌ಲೋಡ್ ಮಾಡಲಾಗಿದೆ.

 

View this post on Instagram

 

A post shared by Simran Kaur Mundi (@simrankaurmundi)

ರಿಕ್ಷಾದಲ್ಲಿ ಕುಳಿತಿದ್ದ ಮುದುಕ ಕೈಯಲ್ಲಿ ‘ಫಾಲೋ ಸ್ಟಾರ್ ಮೇಸನ್’ ಎಂದು ಬರೆದಿರುವ ಬೋರ್ಡ್ ಹಿಡಿದಿದ್ದನ್ನು ನಾವು ಕಂಡುಕೊಂಡಿದ್ದೇವೆ. ಜನವರಿ 15, 2016 ರಂದು ಸ್ಟಾರ್ ಮೇಸನ್ಸ್ ಎಂಟರ್‌ಟೈನ್‌ಮೆಂಟ್‌ನ Instagram ಪುಟದಲ್ಲಿ ಅದೇ ಚಿತ್ರವನ್ನು ಅಪ್‌ಲೋಡ್ ಮಾಡಿರುವುದನ್ನು ಕಾಣಬಹುದು. ಅದನ್ನು ಸಿಮ್ರಾನ್ ಕೌರ್ ಮುಂಡಿ ಅವರು ಮರು ಪೋಸ್ಟ್ ಮಾಡಿದ್ದಾರೆ.

https://twitter.com/SimrankMundi/status/1611245167188774912?ref_src=twsrc%5Etfw%7Ctwcamp%5Etweetembed%7Ctwterm%5E1611245167188774912%7Ctwgr%5E3c603c01a43fcd591ed5e7e6489873b8e8db472a%7Ctwcon%5Es1_&ref_url=https%3A%2F%2Fwww.boomlive.in%2Ffact-check%2Fviral-picture-rickshaw-rider-daughter-asi-actor-simran-kaur-mundi-old-photo-social-media-20669

ಅವರ ಸಾಹಸೋದ್ಯಮ ಸ್ಟಾರ್ ಮೇಸನ್ಸ್ ಅನ್ನು ಪ್ರಚಾರ ಮಾಡಲು. 2016ರಲ್ಲಿ Instagram ಪುಟದಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದೆ, ಇದು ಒಂದು ಪ್ರಚಾರದ ಕಾಯ್ರತಂತ್ರ ಎಂದು ಹೇಳಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ನಿರಾಕರಿಸಿ, ಫೋಟೋದಲ್ಲಿರುವ ವ್ಯಕ್ತಿ ನನ್ನ ತಂದೆಯಲ್ಲ ಮತ್ತು ನಾನು ASI ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದ ಸುದ್ದಿಗಳನ್ನು ಶಾಲೆಯಲ್ಲಿ ಓದುವ ಮಕ್ಕಳಂತೆ  ಎಲ್ಲವನ್ನೂ ಕುರುಡಾಗಿ ನಂಬುತ್ತಾರೆ ಎಂಬುದಕ್ಕೆ 114 ಕಾಮೆಂಟ್‌ಗಳು ಸಾಕ್ಷಿಯಾಗಿದೆ. ಆದರೆ ನಾನು ASI ಅಲ್ಲ. ಇದು ನಕಲಿ ಸುದ್ದಿ” ಎಂದು ಸಿಮ್ರಾನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ವೈರಲ್ ಆಗಿರುವಂತೆ ಸಿಮ್ರಾನ್ ಎಲ್ಲಿಯೂ, ಆ ವ್ಯಕ್ತಿ ತನ್ನ ತಂದೆ ಎಂದು ಉಲ್ಲೇಖಿಸಿಲ್ಲ. ಸಿಮ್ರಾನ್ ಪಂಜಾಬಿ ನಟಿ ಮತ್ತು ಮಾಜಿ ಮಿಸ್ ಇಂಡಿಯಾ ಯೂನಿವರ್ಸ್ 2008. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಧ್ಯರಾತ್ರಿಯಲ್ಲಿ ಸೂರ್ಯೋದಯ ಆಗಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights