ಫ್ಯಾಕ್ಟ್‌ಚೆಕ್ : ಉಲುಬೆ ಮರದ ಚಿತ್ರವನ್ನು ಬಿಳಿಗಿರಿ ರಂಗನ ಬೆಟ್ಟದಲ್ಲಿ ತುಳಸಿ ಮರ ಎಂದು ತಪ್ಪಾಗಿ ಹಂಚಿಕೆ
ಕರ್ನಾಟಕದ ಬಿಳಿಗಿರಿ ರಂಗನ ಬೆಟ್ಟದಲ್ಲಿ (BR HILLS) ಬೆಳೆದ ತುಳಸಿ ಮರ ಎಂದು ಹೇಳುವ ಮರದ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮದ ಬಳಕೆದಾರರು ಅದನ್ನು ಅತಿ ಎತ್ತರದ ತುಳಸಿ ಮರ ಎಂದು ಹೇಳಿಕೊಂಡು ಒಂದೇ ಚಿತ್ರವನ್ನು, ಬೇರೆ ಬೇರೆ ಸ್ಥಳಗಳಲ್ಲಿ ಇದೆ ಎಂದು ಪ್ರತಿಪಾದಿಸಿ ಹಂಚಿಕೊಂಡಿದ್ದಾರೆ, ಇಷ್ಟು ದೊಡ್ಡ ತುಳಸಿ ಮರ ಕರ್ನಾಟಕದ ಸುಪ್ರಸಿದ್ದ ಸ್ಥಳವಾದ ಬಿಳಿಗಿರಿ ರಂಗನ ಬೆಟ್ಟದಲ್ಲಿ ಇದೆಯೇ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2019 ರಿಂದ ಇದೇ ರೀತಿಯ ಪ್ರತಿಪಾದನೆಯೊಂದಿಗೆ ಫೋಟೋ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿರುವುದು ಕಂಡುಬಂದಿದೆ. ಇದು ಕರ್ನಾಟಕದ ಬಿಆರ್ ಬೆಟ್ಟಗಳ ತುಳಸಿ ಮರ ಎಂದು ಹೆಚ್ಚಿನವರು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಮರವು ಮಥುರಾ ಮತ್ತು ಬೃಂದಾವನದಲ್ಲಿದೆ ಎಂದು ಹೇಳಿಕೊಳ್ಳುತ್ತಾರೆ.
Tallest "Tulsi" Plant, Mathura 🙏🚩 pic.twitter.com/5p7N73OZtA
— ALOK SINGH RAJPUT🇮🇳 (@AKSRAJPUTSINGH) April 27, 2022
ಹಲವು ವಿಧಾನಗಳನ್ನು ಬಳಸಿಕೊಂಡು ವೈರಲ್ ಪೋಸ್ಟ್‌ನಲ್ಲಿ ಮರವನ್ನು ಗುರುತಿಸಲು ಪ್ರಯತ್ನಿಸಿದಾಗ, ಮೂಲ ಮೂರವು ತುಳಸಿ ಮರವಲ್ಲ ಎಂದು ತಿಳಿದು ಬಂದಿದೆ. ತುಳಸಿ ಗಡವನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸಿ ಮತ್ತು ಪ್ರಾರ್ಥಿಸುತ್ತಾರೆ. ತುಳಸಿ ಗಿಡವು ಔಷಧಿ ಗುಣವನ್ನು ಹೊಂದಿದ್ದು, ಸಣ್ಣ ದೀರ್ಘಕಾಲಿಕ ಸಸ್ಯವಾಗಿದೆ ಮತ್ತು 100 ಸೆಂ.ಮೀ ವರೆಗೆ ಬೆಳೆಯುತ್ತದೆ. ಬ್ರಿಟಾನಿಕಾ ಪ್ರಕಾರ, (ಒಸಿಮಮ್ ಟೆನ್ಯುಫ್ಲೋರಮ್), ಇದನ್ನು ತುಳಸಿ ಎಂದೂ ಕರೆಯುತ್ತಾರೆ, ಪುದೀನ ಜಾತಿಯ ಹೂಬಿಡುವ ಸಸ್ಯ (ಲ್ಯಾಮಿಯಾಸಿ) ಇದನ್ನು ಪರಿಮಳಯುಕ್ತ ಎಲೆಗಳಿಗಾಗಿ ಬೆಳೆಯಲಾಗುತ್ತದೆ.
ಅಲ್ಲದೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವೆಬ್‌ಸೈಟ್ ಪ್ರಕಾರ, ಸಾವಯವ ಗೊಬ್ಬರಗಳನ್ನು ಬಳಸಿ ಕುಂಡದಲ್ಲಿ ಅತಿ ಎತ್ತರದ ತುಳಸಿ ಗಿಡವನ್ನು ಬೆಳೆಸಿದ ದಾಖಲೆಯನ್ನು ಪಿ.ಎಸ್. ಬೆಂಗಳೂರಿನ ಸಾಯಿ ವಿಕಾಸ್ ಮಾಡಿದ್ದಾರೆ. ಇದು 157.48 ಸೆಂ.ಮೀ
16 ಆಗಸ್ಟ್ 2020 ರಂದು, ಮಲಯಾಳಿ ಪತ್ರಿಕೆ ಮಾತೃಭೂಮಿ ಎರ್ನಾಕುಲಂನಲ್ಲಿ 340 ಸೆಂ ಎತ್ತರದ ತುಳಸಿ ಗಿಡವನ್ನು ಬೆಳೆಯುತ್ತಿರುವ ಬಗ್ಗೆ ವರದಿ ಮಾಡಿದೆ.
ಇಂತಹದ್ದೆ ಸುದ್ದಿಯೊಂದು ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಸಂದರ್ಭದಲ್ಲಿ, ಅದನ್ನು ಸುಳ್ಳು ಸುದ್ದ ಎಂದು ಈ ಟಿವಿ ಭಾರತ್ ರಿಯಾಲಿಟಿ ಚೆಕ್ ಮಾಡಿದ ವರದಿ ಲಭ್ಯಾಗಿದೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಮರ ತುಳಸ ಮರವಲ್ಲ, ತುಳಸಿ ಗಿಡದಲ್ಲಿ ಇರುವಂತೆ ಈ ಮರದಲ್ಲಿ ಗೊಂಡೆಗಳಿದ್ದು ಅದನ್ನೆ ಪತಪ್ಪಾಗಿ ತಿಳಿದು ಇದನ್ನು ತುಳಸಿ ಮರ ಎಂದು ಹಂಚಿಕೊಂಡಿದ್ದಾರೆ.
ವಾಸ್ತವವಾಗಿ ಇದನ್ನು ಉಲುಬೆ ಮರ ಎಂದು ಕರೆಯುತ್ತಾರೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಇಂಹ ಮರಗಳನ್ನು ಹೆಚ್ಚಾಗಿ ನೋಡಬಹುದು, ಎಂದು ಅರಣ್ಯ ಇಲಾಖೆಯಲ್ಲಿ 30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮಹದೇವಯ್ಯ ಎಂಬವರು ಮಾಹಿಇ ನೀಡಿದ್ದಾರೆ. ನಾನು ಇದುವರೆಗೂ ಇಲ್ಲಿ ತುಳಸಿ ಮರ ನೋಡಿಲ್ಲ. ವೈರಲ್ ಆಗಿರುವ ಮರದ ಚಿತ್ರವು ತುಳಸಿ ಮರದ್ದಲ್ಲ. ಅದನ್ನು ಸ್ಥಳೀಯರು ನೇಲಾಡಿ, ಉಲುಬೆ ಮರ ಎಂದು ಕರೆಯುತ್ತಾರೆ. ತುಳಸಿ ಗಿಡದ ರೀತಿ ಇದರ ಗೊಂಡೆಯೂ ಇರುವುದರಿಂದ ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಈ ಟಿವಿ ಭಾರತ ಕನ್ನಡ ವಾಹಿನಿಗೆ ಮಾಹಿತಿ ನೀಡಿದ್ದಾರೆ ಅದನ್ನು ಇಲ್ಲಿ ನೋಡಬಹುದು.
ಅಲ್ಲದೆ, ವೈರಲ್ ಚಿತ್ರದಲ್ಲಿರುವ ಮರವು ಬಲವಾದ ಮತ್ತು ಗಟ್ಟಿಯಾದ ಮರದ ಕಾಂಡವನ್ನು ಹೊಂದಿದೆ, ಆದರೆ ತುಳಸಿಯಂತಹ ಗಿಡಗಳು ವೈರಲ್ ಚಿತ್ರದಲ್ಲಿ ಇರುವಂತೆ ಬೆಳೆಯುವುದಿಲ್ಲ, ಗಟ್ಟಿಯಾದ ಮರದ ಕಾಂಡಗಳನ್ನು ಹೊಂದಿರುವುದಿಲ್ಲ. ವೈರಲ್ ಚಿತ್ರಗಳನ್ನು ತುಳಸಿ ಗಿಡದೊಂದಿಗೆ ಹೋಲಿಸಿದಾಗ ವೈರಲ್ ಪೋಸ್ಟ್‌ನಲ್ಲಿ ತೋರಿಸಿರುವ ಮರ ತುಳಸಿ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನೇಲಾಡಿ, ಉಲುಬೆ ಮರದ ಚಿತ್ರವನ್ನು ಅತ್ಯಂತ ಎತ್ತರದ ತುಳಸಿ ಸಸ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸೆರೆವಾಸದಲ್ಲಿದ್ದ ಗಾಂಧಿ, ನೆಹರುಗೆ VIP ಸೌಲಭ್ಯ, ಸಾವರ್ಕರ್‌ಗೆ ಕತ್ತಲೆ ಕೋಣೆ – ವಾಸ್ತವವೇನು?