ಟೋಕಿಯೋ ಒಲಿಂಪಿಕ್ಸ್‌: ಫೈನಲ್‌ಗೂ ಮುನ್ನ ಮುಗ್ಗರಿಸಿದ ಪಿವಿ ಸಿಂಧು; ಥೈಲಾನ್‌ ಸ್ಪರ್ಧಿ ವಿರುದ್ದ ಪರಾಭವ!

ಟೊಕಿಯೋ ಒಲಿಂಪಿಕ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯಲ್ಲಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಥೈಲಾನ್‌ನ ಥಾಯಿ ತ್ಸು ಯಿಂಗ್‌‌ ಅವರ ವಿರುದ್ದ ಸೋಲುಂಡಿದ್ದಾರೆ.

ಇಂದು ನಡೆದ ಬ್ಯಾಡ್ಮಿಂಟನ್ ಸೆಮಿ ಫೈನಲ್‌ನ ಥಾಯಿ ತ್ಸು ಯಿಂಗ್‌‌ ವಿರುದ್ದ ಎರಡು ಸುತ್ತಿನಲ್ಲಿ ಸೆಣೆಸಾಟ ನಡೆಸಿದ ಪಿವಿ ಸಿಂಧು 18-12, 12-21 ಅಂತರದಲ್ಲಿ  ಸೋತಿದ್ದಾರೆ.

ಈ ಮೂಲಕ ಫೈನಲ್‌ ತಲುಪುವ ಮತ್ತು ಚಿನ್ನ ಗೆಲ್ಲುವ ಅವರ ಕನಸು ಭಗ್ನಗೊಂಡಿದೆ. ನಾಳೆ (ಭಾನುವಾರ) ಅವರು ಹಿ ಬಿಂಗ್‌ ಜಿಯೋ ಅವರ ವಿರುದ್ದ ಕಂಚಿನ ಪದಕಕ್ಕಾಗಿ ಸೆಣೆಸಾಟ ನಡೆಸಲಿದ್ದಾರೆ.

ಇದೂವರೆಗೂ ಥಾಯಿ ತ್ಸು ಯಿಂಗ್‌‌ ವಿರುದ್ದ 19 ಬಾರಿ ಮುಖಾಮುಖಿಯಾಗಿ ಸೆಣೆಸಾಡಿರುವ ಸಿಂಧು 07 ಬಾರಿ ಗೆಲುವು ಸಾಧಿಸಿದ್ದಾರೆ. ಇದು ಥಾಯಿ ತ್ಸು ಯಿಂಗ್‌‌ ವಿರುದ್ದ 20ನೇ ಆಟವಾಗಿದ್ದು, ಈ ಬಾರಿಯೂ ಸಿಂಧು ಸೋಲು ಕಂಡಿದ್ದಾರೆ.

ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಅವರು ಬೆಳ್ಳಿ ಪದಕ ಗೆದ್ದಿದ್ದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನುಗೆ ರೈಲ್ವೇಯಿಂದ 2 ಕೋಟಿ ರೂ. ಉಡುಗೊಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights