ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನುಗೆ ರೈಲ್ವೇಯಿಂದ 2 ಕೋಟಿ ರೂ. ಉಡುಗೊಡೆ!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚಾನು ಅವರಿಗೆ ಉಡುಗೊರೆಯಾಗಿ 2 ಕೋಟಿ ರೂ ನಗದು ನೀಡುವುದಾಗಿ ಭಾರತೀಯ ರೈಲ್ವೇ ಘೋಷಿಸಿದೆ.

ಚಾನು ಅವರು ಕ್ರೀಡಾಪಟು ಮಾತ್ರವಲ್ಲದೆ, ಭಾರತೀಯ ರೈಲ್ವೇಯಲ್ಲಿ ಉದ್ಯೋಗಿಯೂ ಆಗಿದ್ದಾರೆ. ಹೀಗಾಗಿ, ಒಲಿಂಪಿಕ್ಸ್‌ನಲ್ಲಿ ಅವರ ಸಾಧನೆಯಲ್ಲಿ ಅಭಿನಂದಿಸಿರುವ ರೈಲ್ವೇ ಅವರಿಗೆ ನಗದು ಉಡುಗೊರೆ ಮತ್ತು ಉದ್ಯೋಗದಲ್ಲಿ ಬಡ್ತಿ ನೀಡುವುದುದಾಗಿ ಘೋಷಣೆ ಮಾಡಿದೆ.

ಇದನ್ನೂ ಓದಿ: ಟೋಕಿಯೋ ಒಲಂಪಿಕ್‌: ಬೆಳ್ಳಿ ಪದಕ ಗೆದ್ದ ಭಾರತದ ಮೀರಾಬಾಯಿ ಚಾನು!

ದೇಶಕ್ಕೆ ಕೀರ್ತಿ ತಂದಿರುವ ಚಾನು ಅವರನ್ನು ಭೇಟಿ ಅಭಿನಂದಿಸಲು ಭಾರತೀಯ ರೈಲ್ವೇ ಸಂತೋಷಗೊಂಡಿದೆ. ಅವರ ಪ್ರತಿಭೆ ಮತ್ತು ಪರಿಶ್ರಮ ಕ್ಯೋಟ್ಯಂತರ ಭಾರೀಯರಿಗೆ ಸ್ಪೂರ್ತಿಯನ್ನು ನೀಡುತ್ತದೆ.  ದೇಶಕ್ಕಾಗಿ ಗೆಲ್ಲುತ್ತಿರುವ ಅವರಿಗೆ 2 ಕೋಟಿ ರೂ. ಉಡುಗೊರೆ ಮತ್ತು ಉದ್ಯೋಗದಲ್ಲಿ ಬಡ್ತಿ ನೀಡಲು ನಾವು ಹರ್ಷಿಸುತ್ತೇವೆ ಎಂದು ರೈಲ್ವೇ ಸಚಿವರು ಟ್ವೀಟ್‌ ಮಾಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಬಳಿಕ ಮೀರಾಬಾಯಿ ಹಾಗೂ ಆಕೆಯ ಕೋಚ್‌ ವಿಜಯ್ ಶರ್ಮಾ ಸೋಮವಾರ ದೆಹಲಿಗೆ ಮರಳಿದ್ದಾರೆ. ಅವರನ್ನು ಯುವಜನ ವ್ಯವಹಾರಗಳ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಭೇಟಿ ಮಾಡಿ ಸನ್ಮಾನಿಸಿದ್ದಾರೆ.

ಇದನ್ನೂ ಓದಿ:  ಟೋಕಿಯೊ ಒಲಿಂಪಿಕ್ಸ್: ಪಿ.ವಿ ಸಿಂಧು ಭರ್ಜರಿ ಆರಂಭ; ಮೊದಲ ಆಟದಲ್ಲೇ ಭಾರೀ ಅಂತರದ ಗೆಲುವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights