ಮಹಕಳೇಶ್ವರ ದೇವಸ್ಥಾನಕ್ಕೆ ವಿಐಪಿ ಭೇಟಿ ವೇಳೆ ನೂಕುನುಗ್ಗಾಟ : ಹಲವಾರು ಮಂದಿಗೆ ಗಾಯ!

ಉಜ್ಜಯಿನಿಯ ಮಹಕಳೇಶ್ವರ ದೇವಸ್ಥಾನಕ್ಕೆ ವಿಐಪಿ ಭೇಟಿಯ ವೇಳೆ ಜನರ ನೂಕುನುಗ್ಗಾಟದಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ದೇವಸ್ಥಾನದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಲೇಶ್ವರ ದೇವಸ್ಥಾನದಲ್ಲಿ ಸೋಮವಾರ ಜನರ ನೂಕುನುಗ್ಗಾಟದಿಂದಾಗಿ ಬ್ಯಾರಿಕೇಡ್ ಕೆಳಗೆಬಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ವಿಐಪಿಗಳೊಂದಿಗೆ ಹಲವಾರು ಜನರು ದೇವಾಲಯಕ್ಕೆ ಹೋಗುತ್ತಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಸೇರಿದಂತೆ ಹಲವಾರು ಅಧಿಕಾರಿಗಳು ದೇವಸ್ಥಾನಕ್ಕೆ ಹೋಗುವಾಗ ಪೊಲೀಸರಿಂದ ಜನಸಂದಣಿಯ ನಿರ್ವಹಣೆಯಾಗದೇ ಈ ಘಟನೆ ಸಂಭವಿಸಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಹಲವಾರು ಜನರು ದೇವಾಲಯದ ಗೇಟ್ ನಂಬರ್ 4 ರಲ್ಲಿ ಪ್ರವೇಶಿಸುತ್ತಿರುವಾಗ ಏಕಾಏಕಿ ತಳ್ಳಾಟ ನೂಕಾಟದಲ್ಲಿ ಗೇಟ್ ಕೆಳಗೆ ಬಿದ್ದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳಿಂದಲೂ ಸಾಧ್ಯವಾಗಲಿಲ್ಲ.

ಘಟನೆ ಕುರಿತು ಮಾತನಾಡಿದ ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಅವರು ಮುಂದಿನ ಸೋಮವಾರ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂದು ಹೇಳಿದರು. “ಈ ಸೋಮವಾರ ಒಂದು ಅಪವಾದವಾಗಿತ್ತು ಆದರೆ ಮುಂದಿನ ಸೋಮವಾರದಂದು ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಸಾಮಾಜಿಕ ದೂರವನ್ನು ಖಚಿತಪಡಿಸುತ್ತೇವೆ” ಎಂದು ಅವರು ಹೇಳಿದರು.

ಉಜ್ಜಯಿನ ಮಹಾಕಲೇಶ್ವರ ದೇವಸ್ಥಾನ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಕಳೆದ ತಿಂಗಳಿನಿಂದ ಕೋವಿಡ್ -19 ಲಸಿಕೆಯ ಕನಿಷ್ಠ ಒಂದು ಶಾಟ್ ಪಡೆದ ಅಥವಾ ಋಣಾತ್ಮಕ ಆರ್‌ಟಿಪಿಸಿಆರ್ ವರದಿಯನ್ನು ಹೊಂದಿರುವ ಭಕ್ತರಿಗೆ ಮಾತ್ರ ದೇವಸ್ಥಾನದಲ್ಲಿ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಎರಡು ಗಂಟೆಗಳಲ್ಲಿ 500 ಜನರಿಗೆ ಪ್ರವೇಶವನ್ನು ನಿರ್ಬಂಧಿಸಿದೆ. ಆದರೆ ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿಲಾಗಿದೆ ಎಂದು ಆರೋಪಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights