ಫ್ಯಾಕ್ಟ್ಚೆಕ್ : ಹುಡುಗಿಯೊಬ್ಬಳು ಸೆಗಣೆ ನೆಂಚಿಕೊಂಡು ಬಿರಿಯಾನಿ ಸೇವಿಸುತ್ತಿರುವಂತೆ ಸ್ಕ್ರಿಪ್ಟೆಡ್ ಮಾಡಿದ ವಿಡಿಯೋ ಹಂಚಿಕೆ
ಬಿರಿಯಾನಿ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ, ಬಿರಿಯಾನಿ ಜೊತೆಗೆ ಚಿಕನ್ ಗ್ರೇವಿ, ಮಟನ್ ಗೊಜ್ಜು ಇದ್ದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ. ಇದನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರು ಬರತ್ತೆ. ಆದರೆ ಬಿರಿಯಾನಿಯನ್ನು ಸಗಣಿ ಬೆರೆಸಿ ತಿಂದರೆ ಹೇಗಿರತ್ತೆ? ಅಯೋ ಅದನ್ನು ನೆನಪಿಸಿಕೊಂಡರೆ ವಾಕರಿಕೆ ಬಂದಂತಾಗುತ್ತದೆ ಅಲ್ಲವೇ. ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ಹುಡುಗಿಯೊಬ್ಬಳು ಹಸುವಿನ ಸಗಣಿಯೊಂದಿಗೆ ಬಿರಿಯಾನಿ ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. “ಸಗಣಿ ಜೊತೆಗೆ ಬಿರಿಯಾನಿ ತಿನ್ನುತ್ತಿರುವ ಈ ಹುಡುಗಿಯ ಈ ಮನಸ್ಥಿತಿಗೆ ಯಾವ ರಾಜಕೀಯ ಪ್ರೇರಿತ ಸಿದ್ದಾಂತ ಪ್ರಭಾವ ಬೀರಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ” ಎಂಬ ಹೇಳಿಕೆಯೊಂದಿಗೆ ವಿಡಿಯೋ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ಹಸುವಿನ ಸಗಣಿ ಬೆರೆಸಿ ಹುಡುಗಿಯೊಬ್ಬಳು ಬಿರಿಯಾನಿ ತಿನ್ನುತ್ತಿರುವ ವಿಡಿಯೋ ಎಂಬ ಪ್ರತಿಪಾದನೆಯೊಂದಿಗೆ ಯೂಟ್ಯೂಬ್ ಮತ್ತು ಪೇಸ್ಬುಕ್ಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವೈರಲ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವಂತೆ ನಿವಾಗಿಯೂ ಹುಡುಗಿ ಸಗಣಿ ಬೆರೆಸಿದ ಬಿರಿಯಾನಿ ತಿಂದಿದ್ದಾಳೆ ಎಂಬ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಿದಾಗ, ವೈರಲ್ ಪೋಸ್ಟ್ನಲ್ಲಿ ಹೇಳಿಕೊಂಡಂತೆ, ಹುಡುಗಿ ಬಿರಿಯಾನಿಯೊಂದಿಗೆ ಸೆಗಣಿಯನ್ನು ಬೆರಸಿಕೊಂಡು ತಿಂದಿಲ್ಲ. ಆಕೆ ಬಿರಿಯಾನಿಗೆ ಸೆಗಣಿಯನ್ನು ಬೆರೆಸಿಕೊಂಡು ತಿನ್ನುತ್ತಿರುವಂತೆ ನಟಿಸಿದ್ದಾಳೆ ಎಂಬುದು ಪರಿಶೀಲನೆಯಿಂದ ತಿಳಿದುಬಂದಿದೆ.
ವಿಡಿಯೊದಲ್ಲಿ ಕಂಡುಬರುವ ಹುಡುಗಿ ಪಶ್ಚಿಮ ಬಂಗಾಳದ ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್. ವೀವ್ಸ್ ಮತ್ತು ಹಣಗಳಿಸುವ ಉದ್ದೇಶದಿಂದ ಯೂಟ್ಯೂಬ್ನಲ್ಲಿ ಈ ರೀತಿಯ ಕಂಟೆಂಟ್ಗಳನ್ನು ಕ್ರಿಯೇಟ್ ಮಾಡಿ ಹಂಚಿಕೊಳ್ಳುತ್ತಾರೆ ಎಂದು ಫ್ಯಾಕ್ಟ್ಲಿ ವರದಿ ಮಾಡಿದೆ.
ಅರಾಜಿತ್ ಮತ್ತು ರಿಯಾ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ಅನ್ನು ಹೊಂದಿದ್ದು, ಇಲ್ಲಿ ಹಂಚಿಕೊಳ್ಳಲಾದ ಮಾಹಿತಿ ಪ್ರಕಾರ ಅವರು ಬಂಗಾಳದ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಅವರು ಮಾಡಿದ ಹೆಚ್ಚಿನ ವಿಡಿಯೊಗಳು ಈ ಫೇಸ್ಬುಕ್ ಪೇಜ್ಗಳಲ್ಲಿ ಲಭ್ಯವಿವೆ. ಆದರೆ ಪ್ರಸ್ತುತ ವೈರಲ್ ಆಗಿರುವ ಸೆಗೆಣಿ ಬೆರೆಸಿಕೊಂಡು ಬಿರಿಯಾನಿ ತಿನ್ನುತ್ತಿರುವ ವಿಡಿಯೋ ಈ ಪುಟಗಳಲ್ಲಿ ಲಭ್ಯವಿಲ್ಲ. ಆದರೆ ಈ ವಿಡಿಯೋಗೆ ಸಂಬಂಧಿಸಿದಂತೆ ವಿವರಣೆಗಾಗಿ ಫ್ಯಾಕ್ಟ್ಲಿ ತಂಡ ಈ ಕ್ರಿಯೇಟರ್ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ. ವೈರಲ್ ವಿಡಿಯೋದಲ್ಲಿ ಇರುವಂತೆ ಸೆಗಣಿಯೊಂದಿಗೆ ಬಿರಿಯಾನಿಯನ್ನು ತಿಂದಿಲ್ಲ ತಿನ್ನುವಂತೆ ನಟಿಸಿದ್ದೇನೆ ಎಂದು ತಿಳಿಸಿದ್ದಾರೆ.
ವಿಡಿಯೋ ಮನರಂಜನಾ ಉದ್ದೇಶಕ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸುತ್ತಿರುವ ಕಂಟೆಂಟ್ ಕ್ರಿಯೇಟರ್ಸ್
ತಾನು ನಿಜವಾಗಿ ಬಿರಿಯಾನಿಯಲ್ಲಿ ಸಗಣಿ ಸೇರಿಸಿ ತಿಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮನರಂಜನೆ ಮತ್ತು ಪ್ರಸಿದ್ದಿ ಪಡೆಯುವ ಉದ್ದೇಶದಿಂದ ಇಂತಹ ಕಂಟೆಂಟ್ಗಳನ್ನು ಕ್ರಿಯೇಟ್ ಮಾಡಿರುವುದಾಗಿ ತಿಳಿಸಿದ್ದಾರೆ. ಸದ್ಯ ವೈರಲ್ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಲಾಗಿದೆ ಎಂದೂ ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಸುವಿನ ಸಗಣಿ ಬೆರೆಸಿದ ಬಿರಿಯಾನಿಯನ್ನು ತಿನ್ನುವಂತೆ ನಟಿಸಿರುವ ವೀಡಿಯೊವನ್ನು ಮನರಂಜನಾ ಉದ್ದೇಶಗಳಿಗಾಗಿ ಹಂಚಿಕೊಳ್ಳಲಾಗಿದ್ದು, ಇದು ಯಾವುದೇ ರಾಜಕೀಯ ಸಿದ್ದಾಂತದ ಭಾಗವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ವನೋರಂಜನಾ ಉದ್ದೇಶಗಳಿಗಾಗಿ ಹಂಚಿಕೊಳ್ಳಲಾದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ದೇಶ ಇಬ್ಭಾಗವಾಗಿದ್ದು ನನ್ನಿಂದಲೇ ಎಂದು ನೆಹರು ಹೇಳಿದ್ದು ನಿಜವೇ?

