ಫ್ಯಾಕ್ಟ್‌ಚೆಕ್ : ದೇಶ ಇಬ್ಭಾಗವಾಗಿದ್ದು ನನ್ನಿಂದಲೇ ಎಂದು ನೆಹರು ಹೇಳಿದ್ದು ನಿಜವೇ?

ದೇಶದ ವಿಭಜನೆಗೆ ನಾನು ನಿರ್ಧರಿಸಿದ್ದೆ, ನನ್ನಿಂದಲೇ ಭಾರತ ಇಬ್ಭಾಗಿದ್ದು ಎಂದು ಭಾರತದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರೂ ಹೇಳಿರುವ ಸ್ಪೋಟಕ ವಿಡಿಯೋ ಲಭ್ಯವಾಗಿದೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವೊಂದು ಪ್ರಸಾರವಾಗುತ್ತಿದೆ.

ಸ್ಫೋಟಕ ಪುರಾವೆ “ನಾನು ವಿಭಜನೆಯ ನಿರ್ಧಾರವನ್ನು ತೆಗೆದುಕೊಂಡಿದ್ದೆ” -ಜವಾಹರಲಾಲ್ ನೆಹರು*
ಮೇ 1964 ರಲ್ಲಿ ನೀಡಿದ ಕೊನೆಯ ಸಂದರ್ಶನದಲ್ಲಿ ನೆಹರೂ ಅವರು ಮುಸ್ಲಿಮರು ಮತ್ತು ಹಿಂದೂಗಳ ನಡುವೆ ವಿಭಜನೆಯ ನಿರ್ಧಾರವನ್ನು ತೆಗೆದುಕೊಂಡರು ಎಂದು ಒಪ್ಪಿಕೊಂಡರು. ದಯವಿಟ್ಟು ದೇಶಾದ್ಯಂತ ಹರಡಿ, ಕಷ್ಟಪಟ್ಟು ಹುಡುಕಿ ಸಿಕ್ಕಿದ ವೀಡಿಯೋ ತುಣುಕು. ಇದನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ಎಂಬ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
 
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದ ತುಣುಕು ಜವಾಹರಲಾಲ್ ನೆಹರು ಅವರ 45 ನಿಮಿಷಗಳ ಸುದೀರ್ಘ ಸಂದರ್ಶನದ ಭಾಗವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಭಾರತ ಸರ್ಕಾರದ ಪ್ರಸಾರ ಭಾರತಿ ಆರ್ಕೈವ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. “ಜವಾಹರಲಾಲ್ ನೆಹರು ಅವರ ಕೊನೆಯ ಟಿವಿ ಸಂದರ್ಶನ – ಮೇ 1964” ಎಂಬ ಶೀರ್ಷಿಕೆಯನ್ನು ಈ ವೀಡಿಯೊಗೆ ನೀಡಲಾಗಿದೆ.

ವಿಡಿಯೊದ ವಿವರಣೆಯ ಪ್ರಕಾರ, ಇದು ಜವಾಹರಲಾಲ್ ನೆಹರು ಅವರು ಅಮೆರಿಕನ್ ಟಿವಿ ನಿರೂಪಕ ಅರ್ನಾಲ್ಡ್ ಮೈಕೆಲಿಸ್ ಗೆ ನೀಡಿದ  ಕೊನೆಯ ಮಹತ್ವದ ಸಂದರ್ಶನವಾಗಿತ್ತು. ಈ ಸಂದರ್ಶನವು ಮೇ 18, 1964 ರಂದು ನ್ಯೂಯಾರ್ಕ್‌ನಲ್ಲಿ ಪ್ರಸಾರವಾಯಿತು. ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ತುಣಿಕಿನ ಭಾಗವು ಪೂರ್ಣ ಸಂದರ್ಶನದ ವಿಡಿಯೊದ 14:34 ಮಾರ್ಕ್‌ನಿಂದ ಪ್ರಾರಂಭವಾಗುವ ಒಂದು ಭಾಗವನ್ನು ತೆಗೆದುಕೊಳ್ಳಲಾಗಿದೆ.

ಟಿವಿ ನಿರೂಪಕ ಅರ್ನಾಲ್ಡ್ ಮೈಕೆಲಿಸ್ ಕೇಳಿದ ಪ್ರಶ್ನಿಗಳಿಗೆ  ಜವಾಹರಲಾಲ್ ನೆಹರು ಉತ್ತರಿಸುವಾಗ ನಡೆಯುವ ಸಂದರ್ಶನಲ್ಲಿ ಈ ರೀತಿ ಪ್ರಶ್ನೋತ್ತರಗಳು ಬರುತ್ತವೆ. ವಿಡಿಯೋದ 14:34 ರ ಸಮಯದಲ್ಲಿ ಮೈಕಲಿಸ್ ನಹರುಗೆ ಈ ರೀತಿಯ ಪ್ರಶ್ನೆಯೊಂದನ್ನು ಕೇಳುತ್ತಾರೆ. ಗಾಂಧಿ, ಜಿನ್ನಾ ಮತ್ತು ನೀವು ಒಟ್ಟಿಗೆ ಸೇರಿ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸುತ್ತೀರಿ ಎಂದು ಕೇಳುತ್ತಾರೆ.

ಅದಕ್ಕೆ ಪ್ರತಿಕ್ರಿಯಿಸಿದ ನೆಹರು ಜಿನ್ನ ಭಾರತ ಸ್ವತಂತ್ರ ಸಂಗ್ರಾಮದ ಭಾಗವಾಗಿರಲಿಲ್ಲ, ವಾಸ್ತವವಾಗಿ ಆವರು ಅದನ್ನು ವಿರೋಧಿಸುತ್ತಿದ್ದರು. ಸುಮಾರು 1911ರಲ್ಲಿ ಮುಸ್ಲಿಂ ಲೀಗ್ ಪ್ರಾರಂಭವಾಯಿತು. ಮುಸ್ಲಿಂ ಲೀಗ್ ನಿಜವಾಗಿಯೂ ಬ್ರಿಟಿಷರ ಪ್ರೇರಣೆಯಿಂದ ಜನ್ಮತಾಳಿತ್ತು ಎಂಬುದು ವಾಸ್ತವ. ನಮ್ಮಲ್ಲಿ ಬಣಗಳನ್ನು ಸೃಷ್ಟಿಸಲು, ಬ್ರಿಟೀಷರು ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಅಂತಿಮವಾಗಿ ಭಾರತ ವಿಭಜನೆಯಾಯಿತು ಎಂದು ನೆಹರು ಹೇಳುತ್ತಾರೆ.

15:23 ನಿಮಿಷದಲ್ಲಿ, ಮೈಕೆಲಿಸ್ ಪ್ರಶ್ನೆಯನ್ನು ಮುಂದುವರೆಸುತ್ತಾ “ನೀವು ಮತ್ತು ಗಾಂಧಿ ಅದರ ಪರವಾಗಿ ಇದ್ದದ್ದು ನಿಜವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನೆಹರು, ನಾನು ಮತ್ತು ಗಾಂಧಿ ಕೊನೆಕ್ಷಣದ ವರೆಗೂ ದೇಶದ ವಿಭಜನೆಯ ಪರವಾಗಿ ಇರಲಿಲ್ಲ. ಆದರೆ ಅಂತಿಮವಾಗಿ ನಾವು ಅದಕ್ಕೆ ಸಮ್ಮತಿಸಬೇಕಾಯಿತು. ಕಾರಣ ಪದೇ ಪದೇ ತೊಂದರೆ ಅನುಭವಿಸುವುದಕ್ಕಿಂತ ವಿಭಜನೆಯಾಗುವುದು ಸರಿ ಎಂಬ ಅಭಿಪ್ರಾಯ ವ್ಯಕ್ತವಾದವು.

ಮುಸ್ಲಿಂ ಲೀಗ್‌ನ ನಾಯಕರು ಭೂಸುಧಾರಣೆಯನ್ನು ಇಷ್ಟಪಡದಂತಹ ದೊಡ್ಡ ಭೂಮಾಲೀಕರಾಗಿದ್ದರು, ನಾವು ಮಾಡಿದ ಭೂಸುಧಾರಣೆಯನ್ನು ಜಾರಿ ಮಾಡಲು ಬಹಳ ಉತ್ಸುಕರಾಗಿದ್ದೆವು ಆದರೆ ಅದಕ್ಕೆ ಅವರಿಂದ ಹೆಚ್ಚು ಅಡಚಣೆ ಉಂಟಾಗುತ್ತಿದ್ದರಿಂದ ನಾವು ವಿಭಜನೆಗೆ ಸಮ್ಮತಿಸುವುದಕ್ಕೆ ಇದು ಒಂದು ಕಾರಣವಾಗಿತ್ತು.

ಒಂದು ವೇಳೆ ಅವರು ನಮ್ಮೊಂದಿಗೆ ಉಳಿದಿದ್ದರೆ, ನಮ್ಮ ಅನೇಕ ಕ್ರಮಗಳನ್ನು ವಿರೋಧಿಸುತ್ತಾರೆ ಎಂದು ನಾವು ಭಾವಿಸಿದ್ದೇವೆ ಮತ್ತು ನಾವು ಭಾರತದ ಭಾಗವನ್ನು ಹೊಂದುವುದು ಉತ್ತಮ ಎಂದು ಹೇಳಿದೆವು, ನಮ್ಮ ಕ್ರಮಗಳನ್ನು ಒಪ್ಪಿ ನಮ್ಮೊಂದಿಗೆ ಮುಂದುವರೆಯುತ್ತೇವೆ ಎಂದವರನ್ನು ಜೊತೆಯಲ್ಲಿ ಇಟ್ಟುಕೊಂಡು ಮುಂದುವರೆಯುವುದು ಉತ್ತಮ ಎಂದು ಭಾವಿಸಿದೆವು.

16:49 ರಲ್ಲಿ, ಮೈಕೆಲಿಸ್ ಹೇಳುತ್ತಾರೆ, “ಆದರೂ ನೀವು ಭಾರತದಲ್ಲಿ ಮುಸ್ಲಿಮರೊಂದಿಗೆ ಅನೇಕ ಶತಮಾನಗಳ ಕಾಲ ಸಹೋದರತ್ವದ ಜೀವನವನ್ನು ಹೊಂದಿದ್ದೀರಿ, ಅಲ್ಲವೇ”?

ಈ ಪ್ರಶ್ನಿಗೆ ಪ್ರತಿಕ್ರಿಯಿಸುವ ನೆಹರು, ಅವರು ಭಾರತದ ವಿಭಜನೆಯ ಪರವಾಗಿ ಇಲ್ಲ ಎಂಬುದು ಸ್ಪಷ್ಟವಾಗಿದೆ, ಆದರೆ ನಿರಂತರ ತೊಂದರೆಯನ್ನು ಕೊನೆಗೊಳಿಸಲು ಮತ್ತು ಅವರ ಸುಧಾರಣೆಗಳ ಕಾರ್ಯಕ್ರಮದೊಂದಿಗೆ ಮುಂದುವರಿಯಲು ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ಉತ್ತರಿಸುತ್ತಾರೆ.

ಇದಲ್ಲದೆ, ಭಾರತದ ವಿಭಜನೆ ಮತ್ತು ಜವಾಹರಲಾಲ್ ನೆಹರು ಅವರ ಪಾತ್ರವನ್ನು ಇನ್ನಷ್ಟು ವಿಶ್ಲೇಷಿಸಲು,  ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮಾಜಿ ಅಧ್ಯಕ್ಷ ಪ್ರೊಫೆಸರ್ ಸೈಯದ್ ನದೀಮ್ ಅಲಿ ರೆಜಾವಿ ಅವರನ್ನು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ತಂಡವು ಸಂಪರ್ಕಿಸಿ ಮಾಹಿತಿ ಪಡೆದಿದೆ.

“ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿಭಜನೆಯನ್ನು ನಿಲ್ಲಿಸಲು ಕೊನೆಯವರೆಗೂ ಪ್ರಯತ್ನಿಸಿದವು ಆದರೆ ಸಾಮ್ರಾಜ್ಯಶಾಹಿ (ಬ್ರಿಟಿಷರ) ಶಕ್ತಿಯ ಪಿತೂರಿಯೂ ದೇಶದ ವಿಭಜನೆಗೆ ಕಾರಣವಾಯಿತು” ಎಂದು ಪ್ರೊಫೆಸರ್ ರೆಜಾವಿ ತಿಳಿಸಿದರು. ಬ್ರಿಟಿಷರ ಪ್ರಚಾರದ ಫಲವಾಗಿ ವಿಭಜನೆಯಾಗಿದೆ ಎಂದು ರೆಜಾವಿ ಹೇಳಿದರು, ಅವರು ಮೊದಲಿನಿಂದಲೂ ಅದನ್ನು ನಡೆಸುತ್ತಿದ್ದಾರೆ ಮತ್ತು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರದ ಅಡಿಯಲ್ಲಿ ಈಗಲೂ ನಡೆಸುತ್ತಿದ್ದಾರೆ. ವಿನಾಯಕ್ ದಾಮೋದರ್ ಸಾವರ್ಕರ್ ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರಂತಹ ನಾಯಕರು ಬ್ರಿಟಿಷರ ‘ಡಿವೈಡ್ ಅಂಡ್ ರೂಲ್’ ಎಂಬ ಪ್ರಚಾರಕ್ಕೆ ಬಲಿಯಾಗಿದ್ದಾರೆ ಎಂದು ಅವರು ಹೇಳಿದರು. “ದೇಶದ ವಿಭಜನೆಗೆ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಸಮಾನವಾಗಿ ಕಾರಣವಾಗಿವೆ, ಆದರೆ ಕಾಂಗ್ರೆಸ್ ಮತ್ತು ಅದರ ಪ್ರಮುಖ ನಾಯಕರಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಮೌಲಾನಾ ಆಜಾದ್, ವಲ್ಲಭಭಾಯಿ ಪಟೇಲ್ ಮುಂತಾದವರು ಅದನ್ನು ಒಪ್ಪಿಕೊಳ್ಳಬೇಕಾಯಿತು” ಎಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮಾಜಿ ಅಧ್ಯಕ್ಷ ಪ್ರೊಫೆಸರ್ ಸೈಯದ್ ನದೀಮ್ ಅಲಿ ರೆಜಾವಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಜವಾಹರಲಾಲ್ ನೆಹರು ಅವರ 45 ನಿಮಿಷಗಳ ಸುದೀರ್ಘ ಸಂದರ್ಶನದ ಒಂದು ಸಣ್ಣ ಭಾಗವನ್ನು ಎಡಿಟ್ ಮಾಡಿ ಭಾರತದ ವಿಭಜನೆಯ ನಿರ್ಧಾರವನ್ನು ತೆಗೆದುಕೊಂಡರು ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವೈರಲ್ ವಿಡಿಯೋ 2019ರಿಂದೂ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಪ್ರತಿಪಾದೆನಯೊಂದಿಗೆ ಹರಿದಾಡುತ್ತಿದೆ. ದೇಶ ಇಬ್ಬಾಗವಾಗಲು ನಾನೇ ಕಾರಣ ಎಂದು ನೆಹರು ಹೇಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ದಿ ಲಾಜಿಕಲ್ ಇಂಡಿಯಾ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ‘ಭೂಮಿಯ ಮೇಲಿನ ಕೊನೆಯ ಭರವಸೆ’ ಎಂದು ನ್ಯೂಯಾರ್ಕ್ ಟೈಮ್ಸ್‌ ಲೇಖನ ಪ್ರಕಟಿಸಿದೆಯೇ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights