ಫ್ಯಾಕ್ಟ್‌ಚೆಕ್ : ಶಾಲಾ ವಿದ್ಯಾರ್ಥಿಗಳುನ್ನು ಚುಡಾಯಿಸಿ ಗೂಸಾ ತಿಂದ ಯುವಕ ಮುಸ್ಲಿಮನಲ್ಲ

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಕೆಟ್ಟದಾಗಿ ನೆಡೆದುಕೊಂಡ ಮುಸ್ಲಿಂ ಯುವಕನನ್ನು ಸಾರ್ವಜನಿಕವಾಗಿ ಬೆಂಡೆತ್ತುತ್ತಿರುವ ಹಿಂದೂ ಸಿಂಹಿಣಿಯರು ಎಂಬ ಹೇಳಿಕೆಯೊಂದಿಗೆ ವಿಡಿಯೋನ್ನು ಹಂಚಿಕೊಳ್ಳಲಾಗಿದೆ.

ಜೆಹಾದಿ ಅಬ್ದುಲ್ ಶಾಲೆಗೆ ಹೋಗುವ ಹಿಂದೂ ಸಿಂಹಿಣಿಯರ ತಂಟೆಗೆ ಹೋಗಿ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ, ದುರ್ಗಾ ಅವತಾರಿ ಹೆಣ್ಣುಮಕ್ಕಳು ಜೆಹಾದಿ ಅಬ್ದುಲ್ಲನಿಗೆ ಅವರ ಪೂರ್ವಜರನ್ನು ನೆನೆಸಿಕೊಳ್ಳುವಂತೆ ಮಾಡಿದ್ದಾರೆ. ಹಿಂದೂ ಹೆಣ್ಣುಮಕ್ಕಳ ತಂಟೆಗೆ ಬಂದರೆ ಎಂತಹ ಗತಿ ಆಗುತ್ತದೆ ಎಂದು ಜಿಹಾದಿ ಅಬ್ದುಲ್ಲನಿಗೆ ಅರ್ಥವಾಗಿರಬೇಕು ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಹಲವು ಮುಖ್ಯವಾಹಿನಿ ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿವೆ. ಈ ವರದಿಗಳ ಪ್ರಕಾರ 22 ಜೂನ್ 2023 ರ ಬೆಳಿಗ್ಗೆ, ಭುಲಾಭಾಯಿ ಪಾರ್ಕ್ ಬಸ್ ನಿಲ್ದಾಣದಲ್ಲಿ, 17 ವರ್ಷದ ಹುಡುಗಿಯೊಬ್ಬಳು ಶಾಲೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದಾಗ, ಯುವಕನೊಬ್ಬ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ.

ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದು ಬಲವಂತದಿಂದ ಆಕೆಯ ಕೈ ಹಿಡಿದು ಉಡುಗೊರೆ ನೀಡಲು ಪ್ರಯತ್ನಿಸಿದ್ದಾನೆ ನಂತರ ಆಕೆಗೆ ಮುತ್ತು ನೀಡಲು ಮುಂದಾದಾಗ ಆತನಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಮನೆಗೆ ಬಂದು ಅಕ್ಕ ಮತ್ತು ತಾಯಿಗೆ ವಿಷಯ ತಿಳಿಸಿದ್ದಾಳೆ.

ಮರು ದಿನ ವಿಜಯ ಎಂಬ ಯುವಕ ಕಿರುಕುಳ ನೀಡಲು ಮತ್ತೆ ಬರಬಹುದೆಂದು ಅಂದಾಜಿಸಿ ವಿದ್ಯಾರ್ಥಿನಿಯ ತಾಯಿ ಮತ್ತು ಅಕ್ಕ ಜೊತೆಯಲ್ಲೆ ಬಂದ ಅರಿವಿರದ ಪುಂಡ ವಿಜಯ್ ವಿದ್ಯಾರ್ಥಿನಿಯ ತಂಟೆಗೆ ಹೋಗಿದ್ದಾನೆ. ಆಗ ಆಕೆಯ ಅಕ್ಕ ಮತ್ತು ವಿದ್ಯಾರ್ಥಿನಿ ಪುಂಡನನ್ನು ಸಾರ್ವಜನಿಕವಾಗಿ ಥಳಿಸಿದ್ದಾರೆ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಜಯ್ ವಿರುದ್ಧ ದೂರು ದಾಖಲಿಸಿದ್ದಾರೆ.

ಕಾಗದಪಿತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾಗದಪೀಠದ ಇನ್ಸ್‌ಪೆಕ್ಟರ್ ಜಿ ಜೆ ರಾವತ್ ಅವರ ಪ್ರಕಾರ, ಆರೋಪಿ ವಿಜಯ್ ನಟಭಾಯಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಕಿರುಕುಳ ಮತ್ತು ಹಿಂಬಾಲಿಸಿದ ಆರೋಪಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತ ವ್ಯಕ್ತಿ ಮುಸ್ಲಿಂ ಅಲ್ಲ ಎಂದು ಕಾಗದಪಿತ್ ಪೊಲೀಸ್ ಠಾಣೆ ಎಸ್‌ಎಚ್‌ಒ ಜಿಜೆ ರಾವತ್  ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ,  ಶಾಲೆಗೆ ಹೋಗುವ ವಿದ್ಯಾರ್ಥಿನಿಯರು ಪುಂಡನನ್ನು ಥಳಿಸುತ್ತಿರುವುದನ್ನು ತೋರಿಸುತ್ತವೆ. ಆದರೆ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಸಮುದಾಯದವರಾಗಿದ್ದು, ಈ ಘಟನೆಗೂ ಮುಸ್ಲಿಂ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಚುಡಾಯಿಸಿದ ಯುವಕ ಮುಸ್ಲಿಂ ಎಂದು ಕೋಮು ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ :ಪೆಟ್ರೋಲ್ ಬೆಲೆಯಲ್ಲಿ ಕೇಂದ್ರಕ್ಕಿಂಲೂ ರಾಜ್ಯಕ್ಕೆ ದುಪ್ಪಟ್ಟು ತೆರಿಗೆ ಸಂದಾಯವಾಗುತ್ತದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights