ದೇಶವನ್ನುದ್ದೇಶಿಸಿ ಮೋದಿ ಭಾಷಣ : ‘ಭಾರತಕ್ಕೆ ಭೂಮಿಯೇ ತಾಯಿ’

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೇಶದ 130 ಕೋಟಿ ಜನತೆಯನ್ನುದ್ದೇಶಿಸಿ ಮಾತನಾಡಿದರು.

3ನೇ ಹಂತದ ಲಾಕ್ ಡೌನ್ ಇದೇ ಭಾನುವಾರ ಮೇ 17ರಂದು ಕೊನೆಗೊಳ್ಳಲಿದ್ದು ಅದರ ಸಡಿಲಿಕೆ ಕಾರ್ಯತಂತ್ರ ಬಗ್ಗೆ ಮತ್ತು ಕೊರೋನಾ ನಿಯಂತ್ರಣ ಬಗ್ಗೆ ನಿನ್ನೆ ಪ್ರಧಾನಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಸಂವಾದ ನಡೆಸಿದ್ದರು.

ಅದರಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದಿದ್ದವು. ಈ ನಿಟ್ಟಿನಲ್ಲಿ ಇಂದು ಮೋದಿಯವರ ಭಾಷಣ ಮಹತ್ವದ್ದಾಗಿದ್ದು ಲಾಕ್ ಡೌನ್ ಸಡಿಲಿಕೆ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ.

“ಸಂಕಷ್ಟದಲ್ಲಿ 4 ತಿಂಗಳು ಕಳೆದಿದ್ದೇವೆ. ಒಂದೇ ವೈರಸ್ ಗಜತ್ತು ಹೈರಾನಾಗಿಸಿದೆ. ಕೋಡಿ ಜನ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇಡೀ ಜಗತ್ತು ಜೀವನ ನಡೆಸಲು ಕಷ್ಟಪಡುತ್ತಿದೆ. ಇಂತಹ ಸಂಕಷ್ಟ ಇಲ್ಲಿವರೆಗೂ ನೋಡಿಲ್ಲ. ಕೇಳಿಲ್ಲ. ಮಾನವ ಜಾತಿಗೆ ಇದು ಕಲ್ಪನೆಗೆ ಮೀರಿದ್ದು. ಆದರೆ ಸೋಲುವುದು ಮನಷ್ಯನಿಗೆ ಒಳಿತಲ್ಲ. ಹೀಗಾಗಿ ಇಂಥಹ ನಿಯಮಗಳನ್ನು ಪಾಲಿಸುತ್ತಾ ಬದುಕಲೂ ಬೇಕು, ಮುಂದೆ ಸಾಗಲೂ ಬೇಕು. ನಮ್ಮ ಸಂಕಲ್ಪವನ್ನು ಇನ್ನಷ್ಟು ದೃಢಪಡಿಸಬೇಕಾಗಿದೆ. ನಾವು ಕೊರೊನಾ ಸಂಕಷ್ಟದ ನಂತರ ದಿನಗಳನ್ನು ನಾವು ಕಾಣಬೇಕಿದೆ. ಇದರಿಂದ ನಿವಾರಣೆ ಒಂದೆ ಮಾರ್ಗವಿದೆ. ಆತ್ಮ ನಿರ್ಭರ ಭಾರತವೇ ಇದಕ್ಕೆ ಮಾರ್ಗವಾಗಿದೆ.

ಸಂದೇಶ ತೆಗೆದುಕೊಂಡು ಬಂದಿದ್ದೇನೆ. ನಾವು ನಿರ್ಣಾಯಕ ಹಂತದಲ್ಲಿದ್ದೇವೆ. . 2 ಲಕ್ಷ ಪಿಪಿಇ 2 ಲಕ್ಷ ಎನ್ 95 ತಯಾರಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸ್ವಾವಲಂಬನೆಯ ಅರ್ಥ ಬದಲಾಗುತ್ತಿದೆ. ವಸಯದೈವ ಕುಟುಂಬಕಂನ ಮಾತು ತಿಳಿಸುತ್ತಿದೆ ಸ್ವಾವಲಂಭನೆ. ಭೂಮಿಯನ್ನು ತಾಯಿ ಎಂದು ಭಾವಿಸುತ್ತದೆ ಭಾರತ.  ಇಂಥಾ ಭಾರತ ಸ್ವಾವಲಂಭಿಯಾದಾಗ ಅಭಿವೃದ್ಧಿ ಸಾಧ್ಯ. ಔಷಧಿಗಳು ಹೊಸ ಆಶಯ ಮೂಡಿಸುತ್ತಿವೆ. ಜಗತ್ತಿಗೆ ಭಾರತದ ಮೇಲೆ ವಿಶ್ವಾಸ ಮೂಡುತ್ತಿದೆ.”

ದೇಶದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಆರಂಭಿಸಲು ಮುಂದಾಗಿನಿಂದ ಮೋದಿ ಇದುವರೆಗೆ ಮಾರ್ಚ್‌ 19, ಮಾರ್ಚ್‌ 24, ಏಪ್ರಿಲ್‌ 3, ಏಪ್ರಿಲ್‌ 14 ರಂದು ನಾಲ್ಕು ಬಾರಿ ಭಾಷಣ ಮಾಡಿದ್ದರು. ಈಗ ಮತ್ತೊಮ್ಮೆ 5ನೇ ಬಾರಿ ಭಾಷಣ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights